Airtel Recharge Plan : ಕೇವಲ 5 ರೂಪಾಯಿಗೆ ಸಿಗುತ್ತಿದೆ 1GB ಡಾಟಾ ಮತ್ತು ಅನ್ಲಿಮಿಟೆಡ್ ಕರೆಗಳ ಸೌಲಭ್ಯ

ಗ್ರಾಹಕರನ್ನು ತಮ್ಮತ್ತ ಆಕರ್ಷಿಸಲು   ಟೆಲಿಕಾಂ ಕಂಪನಿಗಳು ಒಂದಕ್ಕಿಂತ ಒಂದು ಆಫರ್ ಗಳನ್ನೂ ಕೂಡಾ ನೀಡುತ್ತಿರುತ್ತವೆ. ಇದೀಗ ಟೆಲಿಕಾಂ ಕಂಪನಿ ಏರ್ಟೆಲ್ ಅಂಥದ್ದೇ ಒಂದು ಪ್ಲಾನ್ ಅನ್ನು ಪರಿಚಯಿಸಿದೆ.

Written by - Ranjitha R K | Last Updated : Aug 31, 2021, 07:30 PM IST
  • ಇಂಟರ್ನೆಟ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ.
  • ದಿನಕ್ಕೆ ಸರಾಸರಿ 5 ರೂಪಾಯಿಗಳನ್ನು ಖರ್ಚು ಮಾಡಿದರೆ 1GB ಡೇಟಾ ಸಿಗಲಿದೆ
  • ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ.
Airtel Recharge Plan : ಕೇವಲ 5 ರೂಪಾಯಿಗೆ ಸಿಗುತ್ತಿದೆ 1GB ಡಾಟಾ ಮತ್ತು ಅನ್ಲಿಮಿಟೆಡ್ ಕರೆಗಳ ಸೌಲಭ್ಯ  title=
Airtel Recharge Plan (file photo)

ನವದೆಹಲಿ : ಕರೋನಾ ಸಾಂಕ್ರಾಮಿಕದಿಂದಾಗಿ, ಜನರ ಜೀವನವು ಹೆಚ್ಚಾಗಿ ಇಂಟರ್ನೆಟ್ (Internet) ಅನ್ನೇ ಅವಲಂಬಿಸಿದೆ. ಮಕ್ಕಳ ಆನ್‌ಲೈನ್‌ ಅಧ್ಯಯನವಾಗಲಿ, ವರ್ಕ್ ಫ್ರಮ್ ಹೋಂ (Work from home) ಆಗಲಿ, ಇಂಟರ್ನೆಟ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. 

ಈ ಪ್ಲಾನ್ ಪರಿಚಯಿಸಿದ Airtel  :
ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಟೆಲಿಕಾಂ ಕಂಪನಿಗಳು ಹೊಸ ಹೊಸ ಪ್ಲಾನ್ ಗಳನ್ನೂ (Recharge Plan) ಪರಿಚಯಿಸುತ್ತಿದೆ. ಈ ಮೂಲಕ ತಮ್ಮ ವ್ಯಾಪಾರವನ್ನು ವಿಸ್ತರಿಸುವ ಉದ್ದೇಶ ಕೂಡ ಕಂಪನಿಗಳದ್ದಾಗಿದೆ. ಗ್ರಾಹಕರನ್ನು ತಮ್ಮತ್ತ ಆಕರ್ಷಿಸಲು  ಒಂದಕ್ಕಿಂತ ಒಂದು ಆಫರ್ ಗಳನ್ನೂ ಕೂಡಾ ನೀಡುತ್ತಿರುತ್ತವೆ. ಇದೀಗ ಟೆಲಿಕಾಂ ಕಂಪನಿ ಏರ್ಟೆಲ್ (Airtel plan) ಅಂಥದ್ದೇ ಒಂದು ಪ್ಲಾನ್ ಅನ್ನು ಪರಿಚಯಿಸಿದೆ. ಇದರಲ್ಲಿ ಬಳಕೆದಾರರು ದಿನಕ್ಕೆ ಸರಾಸರಿ 5 ರೂಪಾಯಿಗಳನ್ನು ಖರ್ಚು ಮಾಡಿದರೆ 1GB ಡೇಟಾ ಮತ್ತು ಇತರ ಸೌಲಭ್ಯಗಳನ್ನು ಪಡೆಯಬಹುದು.

ಇದನ್ನೂ ಓದಿ : ನಿಮ್ಮ ಬಳಿಯೂ ಇದ್ದರೆ MIಯ ಈ ಫೋನ್ , ಕಂಪನಿ ವಾಪಸ್ ನೀಡಲಿದೆ ಫುಲ್ ಅಮೌಂಟ್

28 ದಿನಗಳ ಮಾನ್ಯತೆ :
ಏರ್ಟೆಲ್ ಕಂಪನಿಯ ಈ ಹೊಸ ಪ್ಲಾನ್  448 ರೂಯದ್ದು. ಇದರ 28 ದಿನಗಳವರೆಗೆ ಇರಲಿದೆ. ಈ ಪ್ಲಾನ್‌ನಲ್ಲಿ,  3GB ಡೇಟಾವನ್ನು ಪ್ರತಿದಿನ ನೀಡಲಾಗುತ್ತಿದೆ. ಹೀಗೆ 28 ​​ದಿನಗಳಲ್ಲಿ ನೀವು ಒಟ್ಟು 84GB ಡೇಟಾವನ್ನು ಪಡೆಯಬಹುದು. ಅದರಂತೆ, ಪ್ರತಿದಿನ 5 ರೂ ಗಳಿಗೆ 1GB ಡೇಟಾವನ್ನು ಪಡೆದಂತಾಗುತ್ತದೆ. 

ಈ ಪ್ಲಾನ್ ನಲ್ಲಿ ಕಂಪನಿಯು ತನ್ನ ಬಳಕೆದಾರರಿಗೆ 100 ಉಚಿತ SMS ಮತ್ತು ಅನಿಯಮಿತ ಕರೆ (Unlimited calling) ಸೌಲಭ್ಯವನ್ನು ಕೂಡಾ ನೀಡುತ್ತಿದೆ. ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ಮೂಲಕ ದೇಶಾದ್ಯಂತ ಯಾವುದೇ ನೆಟ್ವರ್ಕ್ ಗೆ ಕರೆಗಳನ್ನು ಮಾಡಬಹುದು.

ಇದನ್ನೂ ಓದಿ : WhatsApp ನಲ್ಲಿ ನೀವು ಈಗ Voice Messages ಕಳುಹಿಸುವ ಮೊದಲು ಅದನ್ನ ಕೇಳಬಹುದು : ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಚಂದಾದಾರಿಕೆ ಕೂಡಾ ಸಿಗಲಿದೆ : 
ವಿಶೇಷವೆಂದರೆ ಕಂಪನಿಯು ಈ ಯೋಜನೆಯಲ್ಲಿ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್‌ನ (Disnety + hotstar) ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಈ ಚಂದಾದಾರಿಕೆಯನ್ನು ಪ್ರತ್ಯೇಕವಾಗಿ ಖರೀದಿಸಬೇಕಾದರೆ 399 ರೂ ವೆಚ್ಚ ಮಾಡಬೇಕಾಗುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಒಟ್ಟಿಗೆ ನೋಡಿದರೆ, ಈ ಪ್ಲಾನ್‌ ಅತ್ಯಂತ ಪ್ರಯೋಜನಕಾರಿಯಾಗಿರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News