Airtel Cheapest Plan: ಜಿಯೋಗೆ ಟಕ್ಕರ್ ನೀಡಲು ಅಗ್ಗದ ಯೋಜನೆ ಪರಿಚಯಿಸಿದ ಏರ್‌ಟೆಲ್

Airtel Cheapest Plan: ಏರ್‌ಟೆಲ್ ಮಾರುಕಟ್ಟೆಯಲ್ಲಿ 100 ರೂ.ಗಿಂತ ಕಡಿಮೆ ಬೆಲೆಯ ಅದ್ಭುತ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ಜಿಯೋದ 119 ರೂ. ಯೋಜನೆಯೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.

Written by - Yashaswini V | Last Updated : Dec 23, 2021, 01:01 PM IST
  • ಜಿಯೋ ಜೊತೆಗೆ ಸ್ಪರ್ಧಿಸಲು ಏರ್‌ಟೆಲ್ ಅಗ್ಗದ ಯೋಜನೆಯನ್ನು ಪ್ರಾರಂಭಿಸಿದೆ
  • ಇದರಲ್ಲಿ ಹಲವು ಪ್ರಯೋಜನಗಳು 100 ರೂ.ಗಿಂತ ಕಡಿಮೆ ದರದಲ್ಲಿ ಲಭ್ಯವಿದೆ
  • ಈ ಯೋಜನೆಯು ಜಿಯೋದ 119 ರೂ. ಯೋಜನೆಯೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ
Airtel Cheapest Plan: ಜಿಯೋಗೆ ಟಕ್ಕರ್ ನೀಡಲು ಅಗ್ಗದ ಯೋಜನೆ ಪರಿಚಯಿಸಿದ ಏರ್‌ಟೆಲ್ title=
Airtel announce cheapest prepaid plan

Airtel Cheapest Plan:  ಇತ್ತೀಚೆಗೆ, ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಅದರ ನಂತರ ಬಳಕೆದಾರರು ತುಂಬಾ ನಿರಾಶೆಗೊಂಡರು ಮತ್ತು ಈಗ ಕಂಪನಿಗಳು ತಮ್ಮ ಬಳಕೆದಾರರನ್ನು ಸಂತೋಷಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಇದರ ಭಾಗವಾಗಿ ಏರ್‌ಟೆಲ್ ಮಾರುಕಟ್ಟೆಯಲ್ಲಿ ಅಗ್ಗದ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ತನ್ನ ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. 

ಏರ್‌ಟೆಲ್ ಕಂಪನಿಯ ಈ ಯೋಜನೆಯು ಜಿಯೋಗೆ ಕಠಿಣ (Airtel vs Jio) ಸ್ಪರ್ಧೆಯನ್ನು ನೀಡುತ್ತದೆ. ಏಕೆಂದರೆ ಈ ಹಿಂದೆ ಸುಂಕದ ಯೋಜನೆಯ ಬೆಲೆಗಳನ್ನು ಹೆಚ್ಚಿಸಿದ ನಂತರ, ಜಿಯೋ ತನ್ನ ಅಗ್ಗದ 119 ರೂ.ಗಳ  ಪ್ಲಾನ್ ಅನ್ನು ಪರಿಚಯಿಸಿತ್ತು. ಅದು ಎಸ್‌ಎಂಎಸ್ ಪ್ರಯೋಜನಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ, ಜಿಯೋಗೆ ಟಕ್ಕರ್ ನೀಡಲು ಏರ್‌ಟೆಲ್ ಮಾರುಕಟ್ಟೆಯಲ್ಲಿ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದೆ. ಅದರ ಬಗ್ಗೆ ವಿವರವಾಗಿ ತಿಳಿಯೋಣ. 

ಇದನ್ನೂ ಓದಿ - Jio ಈ ಪ್ಲಾನ್ ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ Free Netflix ಮತ್ತು 75GB ಡೇಟಾ

ಏರ್‌ಟೆಲ್‌ನ 99 ರೂ. ಪ್ಲಾನ್:
ಏರ್‌ಟೆಲ್ (Airtel) ಮಾರುಕಟ್ಟೆಯಲ್ಲಿ ಅಗ್ಗದ 99 ರೂ. ಯೋಜನೆಯನ್ನು ಪರಿಚಯಿಸಿದೆ ಮತ್ತು ಬಳಕೆದಾರರು ಈ ಯೋಜನೆಯಲ್ಲಿ ಎಸ್‌ಎಂಎಸ್ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಯೋಜನೆಯನ್ನು SMS ಪ್ರಯೋಜನಗಳಿಗಾಗಿ ಮಾತ್ರ ಪರಿಚಯಿಸಲಾಗಿದೆ. ಆದ್ದರಿಂದ, ಬಳಕೆದಾರರು ಇವುಗಳಲ್ಲಿ ಅನಿಯಮಿತ ಕರೆ ಅಥವಾ ಅನಿಯಮಿತ ಡೇಟಾದ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಬಳಕೆದಾರರಿಗೆ 99 ರೂ.ಗಳ ಟಾಕ್ ಟೈಮ್ ಸಿಗುತ್ತದೆ. ಇದಲ್ಲದೇ 200MB ಡೇಟಾವನ್ನು ಸಹ ನೀಡಲಾಗುತ್ತಿದೆ. ಯೋಜನೆಯಲ್ಲಿ, ಬಳಕೆದಾರರು ಕರೆ ಮಾಡಲು ಪ್ರತಿ ಸೆಕೆಂಡಿಗೆ 1 ಪೈಸೆ, ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಎಸ್‌ಎಂಎಸ್‌ಗೆ 1.5ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಇದನ್ನೂ ಓದಿ- Googleನಲ್ಲಿ ಅಪ್ಪಿತಪ್ಪಿಯೂ ಕೂಡ ಈ 5 ಸಂಗತಿಗಳ ಹುಡುಕಾಟ ನಡೆಸಬೇಡಿ, ಇಲ್ದಿದ್ರೆ ಜೈಲು ಶಿಕ್ಷೆ ಗ್ಯಾರಂಟಿ

ಜಿಯೋದ 119 ರೂ.ಗಳ ಪ್ಲಾನ್:
ಜಿಯೋದ 119 ರೂ. ಪ್ಲಾನ್ ಬಗ್ಗೆ ಹೇಳುವುದಾದರೆ, ಇದು ಕೇವಲ 14 ದಿನಗಳ ಮಾನ್ಯತೆಯನ್ನು ಪಡೆಯುತ್ತದೆ, ಇದು ಏರ್‌ಟೆಲ್‌ಗೆ ಹೋಲಿಸಿದರೆ ಅರ್ಧದಷ್ಟು. ಆದರೆ ಈ ಯೋಜನೆಯಲ್ಲಿ ಬಳಕೆದಾರರಿಗೆ 1.5GB ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ. ಅಂದರೆ, ಸಿಂಧುತ್ವದ ಅವಧಿಯಲ್ಲಿ ಬಳಕೆದಾರರು ಒಟ್ಟು 21GB ಡೇಟಾದ ಲಾಭವನ್ನು ಪಡೆಯಬಹುದು. ಇದಲ್ಲದೇ 300 ಉಚಿತ ಎಸ್ಎಂಎಸ್ ಸೌಲಭ್ಯವನ್ನೂ ಕೂಡ ನೀಡಲಾಗುತ್ತಿದೆ. ಇದರೊಂದಿಗೆ JioTV, JioCinema, JioSecurity ಮತ್ತು JioCloud ಗೆ ಉಚಿತ ಪ್ರವೇಶವೂ ಲಭ್ಯವಿರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News