ಬೆಂಗಳೂರು : ಕೇವಲ 1,578 ರೂ.ಗೆ ವಿಮಾನ ಟಿಕೆಟ್ ಅನ್ನು ಬುಕ್ ಮಾಡಬಹುದು.ಟಾಟಾ ಗ್ರೂಪ್ನ ಏರ್ಲೈನ್ ಕಂಪನಿ ವಿಸ್ತಾರಾ ಈ ಮಹತ್ವದ ಕೊಡುಗೆಯನ್ನು ತಂದಿದೆ.ವಿಶೇಷವೆಂದರೆ ಈ ಆಫರ್ ನಲ್ಲಿ ಟಿಕೆಟ್ ಬುಕ್ ಮಾಡಿ ನವರಾತ್ರಿ ಮತ್ತು ದಸರಾ ತನಕ ಪ್ರಯಾಣಿಸಬಹುದು.ಟಾಟಾ ಗ್ರೂಪ್ನ ವಿಮಾನಯಾನ ಸಂಸ್ಥೆ ವಿಸ್ತಾರಾ ದೇಶದ ಸ್ವಾತಂತ್ರ್ಯವನ್ನು ಆಚರಿಸಲು ಫ್ರೀಡಂ ಸೇಲ್ ಅನ್ನು ಪ್ರಾರಂಭಿಸಿದೆ.ಈ ಆಫರ್ನಲ್ಲಿ ಅಕ್ಟೋಬರ್ 31 ರವರೆಗಿನ ಟಿಕೆಟ್ ಅನ್ನು ಅಗ್ಗದ ದರದಲ್ಲಿ ಬುಕ್ ಮಾಡಬಹುದು.
ಭಾರತದ 78 ನೇ ಸ್ವಾತಂತ್ರ್ಯ ದಿನದಂದು ವಿಸ್ತಾರಾ ಏರ್ಲೈನ್ಸ್ ಫ್ರೀಡಂ ಸೇಲ್ ಅನ್ನು ಪ್ರಾರಂಭಿಸಿದೆ.ಈ ಸೇಲ್ ಅಡಿಯಲ್ಲಿ ಬೇರೆ ಬೇರೆ ಮಾರ್ಗಗಳಿಗೆ ಅಗ್ಗದ ದರದಲ್ಲಿ ಟಿಕೆ ದರವನ್ನು ಬುಕ್ ಮಾಡಬಹುದು.ಈ ಸೇಲ್ ನಲ್ಲಿ ಕಂಪನಿಯು ಪ್ರತಿ ಕ್ಯಾಬಿನ್ ವರ್ಗದಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ದರವನ್ನು ಕಡಿಮೆ ಮಾಡಿದೆ.
ಇದನ್ನೂ ಓದಿ:ಸೊಸೆಗೆ ವಿಶ್ವದ ಅತ್ಯಂತ ದುಬಾರಿ ನೆಕ್ಲೇಸ್ ಉಡುಗೊರೆ ನೀಡಿದ ನೀತಾ ಅಂಬಾನಿ..! ಇದರ ಬೆಲೆ ಎಷ್ಟು ಗೊತ್ತೇ?
ಈ ಮಾರ್ಗದಲ್ಲಿ ಈ ಸೇಲ್ ನಲ್ಲಿ ಬಾಗ್ಡೋಗ್ರಾದಿಂದ ದಿಬ್ರುಗಢಕ್ಕೆ ಪ್ರಯಾಣಿಸಲು ಎಕಾನಮಿ ಕ್ಲಾಸ್ನ ಒನ್ ವೆ ಪ್ರಯಾಣ ದರ 1578 ರೂಪಾಯಿಯಿಂದ ಪ್ರಾರಂಭವಾಗಲಿದೆ. ಮುಂಬೈನಿಂದ ಅಹಮದಾಬಾದ್ಗೆ ಪ್ರೀಮಿಯಂ ಎಕಾನಮಿ ಕ್ಲಾಸ್ ದರ 2678 ರೂ.ಗಳಿಂದ ಆರಂಭವಾಗಲಿದ್ದು,ಮುಂಬೈನಿಂದ ಅಹಮದಾಬಾದ್ಗೆ ಬಿಸಿನೆಸ್ ಕ್ಲಾಸ್ ದರ 9978 ರೂ.ಗಳಿಂದ ಆರಂಭವಾಗಲಿದೆ.
ಹಾಗಾಗಿ ದೆಹಲಿಯಿಂದ ಕಠ್ಮಂಡುವಿಗೆ ಅಂತರಾಷ್ಟ್ರೀಯ ವಿಮಾನಯಾನಕ್ಕೆ ಎಕಾನಮಿ ಕ್ಲಾಸ್ ದರ 11,978 ರೂ.ಗಳಿಂದ ಆರಂಭವಾಗಲಿದ್ದು,ದೆಹಲಿಯಿಂದ ಕಠ್ಮಂಡುವಿಗೆ ಪ್ರೀಮಿಯಂ ಎಕಾನಮಿ ವರ್ಗದ ದರ 13978 ರೂ.ಗಳಿಂದ ಆರಂಭವಾಗಲಿದೆ.ಇನ್ನು ಯಾವ ಪ್ರದೇಶಕ್ಕೆ ಎಷ್ಟು ಟಿಕೆಟ್ ದರ ಎನ್ನುವುದನ್ನು ತಿಳಿಯಲು ಕಂಪನಿಯ ವೆಬ್ಸೈಟ್ಗೆ ಭೇಟಿ ನೀಡಬಹುದು.
ಇದನ್ನೂ ಓದಿ:ರತನ್ ಟಾಟಾ ಕಂಪನಿಯಿಂದ ಭರ್ಜರಿ ಆಫರ್, ಮನೆ ಖರೀದಿದಾರರಿಗೆ 19 ಲಕ್ಷ ರೂಪಾಯಿ ರಿಯಾಯಿತಿ! ನೋಂದಣಿ ಉಚಿತ...!
ಆದರೆ ನೆನಪಿಡಿ ಈ ಆಫರ್ ಬೇಕಾದ್ರೆ ಆಗಸ್ಟ್ 15 ಅಂದರೆ ಇಂದಿನ ಒಳಗೆ ಟಿಕೆಟ್ ಕಾಯ್ದಿರಿಸಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.