ಟ್ರಾಫಿಕ್ ಜಂಜಾಟಕ್ಕೆ ಬೈ ಬೈ ! ಮಾರುಕಟ್ಟೆಗೆ ಬಂತು ಏರ್ ಟ್ಯಾಕ್ಸಿ! ನಿಮಿಷಗಳಲ್ಲಿ ತಲುಪಬಹುದು ಕಚೇರಿ

ಇನ್ನೇನು ಕೆಲವೇ ದಿನಗಳಲ್ಲಿ ಏರ್ ಟ್ಯಾಕ್ಸಿ ಮಾರುಕಟ್ಟೆಗೆ ಕಾಲಿಡಲಿದೆ.  ಕೆಲವೇ ನಿಮಿಷಗಳಲ್ಲಿ ನಿಮ್ಮ ಕಚೇರಿಗೆ ನಿಮ್ಮನ್ನು ಕರೆದೊಯ್ಯುತ್ತದೆ.  

Written by - Ranjitha R K | Last Updated : Jan 21, 2025, 05:53 PM IST
  • ಕೆಲವೇ ದಿನಗಳಲ್ಲಿ ಏರ್ ಟ್ಯಾಕ್ಸಿ ಮಾರುಕಟ್ಟೆಗೆ ಕಾಲಿಡಲಿದೆ
  • ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಏರ್ ಟ್ಯಾಕ್ಸಿ ಪರಿಚಯ
  • ಬ್ಲೂ ಆರೋ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಮಾಹಿತಿ
ಟ್ರಾಫಿಕ್ ಜಂಜಾಟಕ್ಕೆ ಬೈ ಬೈ ! ಮಾರುಕಟ್ಟೆಗೆ ಬಂತು ಏರ್ ಟ್ಯಾಕ್ಸಿ! ನಿಮಿಷಗಳಲ್ಲಿ ತಲುಪಬಹುದು ಕಚೇರಿ  title=

ಅನೇಕ ವೇಳೆ ಟ್ರಾಫಿಕ್ ಕಾರಣಕ್ಕೆ ಮನೆಯಿಂದ ಕಾಲು ಹೊರಗಿಡಲು ಮನಸ್ಸಾಗುವುದಿಲ್ಲ. ಒಮ್ಮೆ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರೆ, ಸಮಯಕ್ಕೆ ಸರಿಯಾಗಿ ಕಚೇರಿ ಸೇರಿದನ್ಯೇ ಯಾವುದೇ ಗಮ್ಯ ಸ್ಥಾನ ತಲುಪುವುದು ಸಾಧ್ಯವೇ ಇಲ್ಲ. ಕೆಲವೊಮ್ಮೆ ೧೦-೧೫ ನಿಮಿಷಗಳ ದೂರವನ್ನು ಕ್ರಮಿಸಲು ಗಂಟೆ ಗಟ್ಟಲೆ ಟ್ರಾಫಿಕ್ ನಲ್ಲಿ ಕಾಯಬೇಕಾಗುತ್ತದೆ. ಆದರೆ ಇದಕ್ಕೀಗ ಪರಿಹಾರ ಸಿಕ್ಕಿದೆ, ಅದುವೇ ಏರ್ ಟ್ಯಾಕ್ಸಿ. ಈ ಏರ್ ಟ್ಯಾಕ್ಸಿ ಮೂಲಕ ನಿಮಿಷಗಳಲ್ಲಿ ಕಚೇರಿ ತಲುಪಿ ಬಿಡಬಹುದು. 

 ಹೌದು ಇನ್ನೇನು ಕೆಲವೇ ದಿನಗಳಲ್ಲಿ ಏರ್ ಟ್ಯಾಕ್ಸಿ ಮಾರುಕಟ್ಟೆಗೆ ಕಾಲಿಡಲಿದೆ.  ಕೆಲವೇ ನಿಮಿಷಗಳಲ್ಲಿ ನಿಮ್ಮ ಕಚೇರಿಗೆ ನಿಮ್ಮನ್ನು ಕರೆದೊಯ್ಯುತ್ತದೆ.

ಇದನ್ನೂ ಓದಿ :   ಡಿಟರ್ಜೆಂಟ್ ಅಲ್ಲ ಒಂದು ತುಂಡು ಅಲ್ಯುಮಿನಿಯನ್ ಫಾಯಿಲ್ ಅನ್ನು ವಾಶಿಂಗ್ ಮೆಷಿನ್ ಒಳಗೆ ಹಾಕಿದರೆ ಕಲೆ, ಕೊಳೆ ಎಲ್ಲವೂ ಮಾಯ !

ಬ್ಲೂ ಆರೋ ಕಂಪನಿಯು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ತನ್ನ ಏರ್ ಟ್ಯಾಕ್ಸಿಯನ್ನು ಪರಿಚಯಿಸಿದೆ. ತಂತ್ರಜ್ಞಾನ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಈ ಟ್ಯಾಕ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.ಇದು ಆರಾಮದಾಯಕ ಜೊತೆಗೆ ಉತ್ತಮ ವೇಗವನ್ನು ನೀಡುತ್ತದೆ. ಇದರಿಂದ ನೀವು ಆರಾಮವಾಗಿ ನಿಮ್ಮ ಗಮ್ಯಸ್ಥಾನವನ್ನು ತಲುಪಬಹುದು. ಇದೀಗ ಇದು ಕಾರ್ಯಾರಂಭ ಯಾವಾಗ ಮಾಡಲಿದೆ ಎನ್ನುವುದರ ಮೇಲೆ ಎಲ್ಲರ ಗಮನ ನೆಟ್ಟಿದೆ. 

ಬ್ಲೂ ಆರೋ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಹಿತಿ  :
ದೆಹಲಿಯು ಗ್ರೇಟರ್ ನೋಯ್ಡಾದಿಂದ ಹೆಚ್ಚು ದೂರದಲ್ಲಿಲ್ಲದಿದ್ದರೂ, ಟ್ರಾಫಿಕ್ ಜಾಮ್‌ನಿಂದ ಇಲ್ಲಿನ ನಿವಾಸಿಗಳು ಯಾತನೆ ಪಡಬೇಕಾಗುತ್ತದೆ.  ಆದ್ದರಿಂದ ಈ ಏರ್ ಟ್ಯಾಕ್ಸಿ ಆಗಮನದಿಂದ ಜನರ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದು ಆರೋ ಕಂಪನಿ ಸಿಇಒ ಅಮರ್ ಹೇಳಿದ್ದಾರೆ. ಇದು ಒಂದೇ ಚಾರ್ಜಿಂಗ್‌ನಲ್ಲಿ 600 ಕಿಲೋಮೀಟರ್ ದೂರದವರೆಗೆ ಸಾಗುತ್ತದೆ.  ಅಂದರೆ ದೆಹಲಿಯಿಂದ ಲಕ್ನೋಗೆ ಒಂದೇ ವಿಮಾನದಲ್ಲಿ ತಲುಪಬಹುದು.

ಇದನ್ನೂ ಓದಿ : Recharge ಚಿಂತೆಯೇ ಇಲ್ಲ: ಬರೀ 10ರೂ.ಗೆ ಸಿಗುತ್ತೆ 365ದಿನಗಳ ವ್ಯಾಲಿಡಿಟಿ: ನಿಮಗೂ ತಿಳಿದಿರಲಿ TRAI ಹೊಸ ನಿಯಮ

ಇದರ ಬೆಲೆ ಎಷ್ಟು, ಬಾಡಿಗೆ ಎಷ್ಟು?
ಕಂಪನಿಯಿಂದ ಬಂದಿರುವ ಮಾಹಿತಿ ಪ್ರಕಾರ ಟ್ಯಾಕ್ಸಿಯ ಬೆಲೆ ತೀರಾ ಕಡಿಮೆ ಆಗಲಿದ್ದು, ಇದರಿಂದ ಜನರ ಜೇಬಿಗೆ ಹೊರೆಯಾಗುವುದಿಲ್ಲ. ದೆಹಲಿಯಿಂದ ಗ್ರೇಟರ್ ನೋಯ್ಡಾದ ದೂರಕ್ಕೆ ಕೇವಲ 2,000 ರಿಂದ 2,200 ರೂ.ತಗಲುವುದು. ಮಾಹಿತಿ ಪ್ರಕಾರ ಸುಮಾರು 100 ಕೆಜಿ ತೂಕವನ್ನು ಈ ಏರ್ ಟ್ಯಾಕ್ಸಿ ಮೂಲಕ ಸಾಗಿಸಬಹುದಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News