AIIMS Bhopal Research: ಮೃತ ಶರೀರದಿಂದ ಜೀವನದ ಹುಡುಕಾಟ, ಭಾರತದ ಈ ಸಂಸ್ಥೆ ನಡೆಸುತ್ತಿದೆ ಸಂಶೋಧನೆ

Sperm Research - ಮಾನವನ ಜೀವನದಲ್ಲಿ ಸುಧಾರಣೆ ತರಲು ವೈದ್ಯಕೀಯ ಕ್ಷೇತ್ರದಲ್ಲಿ  ನಿರಂತರ ಸಂಶೋಧನೆಗಳು ನಡೆಯುತ್ತಲೇ ಇವೆ. ಮೃತದೇಹದಿಂದಲೂ ಜೀವನವನ್ನು ಹುಡುಕುವ ಪ್ರಯತ್ನ ಇದೀಗ ಆರಂಭಗೊಂಡಿದೆ. ಭೋಪಾಲ್‌ನ ಏಮ್ಸ್‌ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದೆ.  

Written by - Nitin Tabib | Last Updated : Mar 24, 2022, 03:07 PM IST
  • ಮೃತ ಶರೀರದಲ್ಲಿ ಜೀವನದ ಹುಡುಕಾಟ
  • ಭೋಪಾಲ್ ನ AIIMS ಸಂಸ್ಥೆಯಲ್ಲೊಂದು ವಿಶಿಷ್ಟ ಸಂಶೋಧನೆ
  • ಮೃತ ವ್ಯಕ್ತಿಯ ವೀರ್ಯದ ಮೇಲೆ ಸಂಶೋಧನೆ ಆರಂಭ
AIIMS Bhopal Research: ಮೃತ ಶರೀರದಿಂದ ಜೀವನದ ಹುಡುಕಾಟ, ಭಾರತದ ಈ ಸಂಸ್ಥೆ ನಡೆಸುತ್ತಿದೆ ಸಂಶೋಧನೆ title=
AIIMS Bhopal Research

ನವದೆಹಲಿ:  Human Sperm Research - ಭಾರತದಲ್ಲಿ ಮೊದಲ ಬಾರಿಗೆ, ಮೃತದೇಹದಲ್ಲಿರುವ ವೀರ್ಯದಿಂದ ಮಕ್ಕಳನ್ನು ಹುಟ್ಟಿಸಬಹುದೇ ಎಂಬುದರ ಮೇಲೆ ಸಂಶೋಧನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಅಧ್ಯಯನ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮೃತ ದೇಹಗಳಲ್ಲಿ ಜೀವವನ್ನು ಹುಡುಕುವ  ಕಾರ್ಯವನ್ನು ಭೋಪಾಲ್ AIIMSಗೆ ವಹಿಸಿದೆ.

ಈ ಕುರಿತು ಸಂಶೋಧನೆ ನಡೆಸುತ್ತಿರುವ ದೇಶದ ಮೊದಲ ಸಂಸ್ಥೆ
ಮಾಧ್ಯಮ ವರದಿಗಳ ಪ್ರಕಾರ, ಇಂತಹ ಒಂದು ಸಂಶೋಧನೆ ಇದೆ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ಈ ರೀತಿಯ ಸಂಶೋಧನೆ ನಡೆಸುವ ಮೊದಲ ಸಂಸ್ಥೆ ಭೋಪಾಲ್ AIIMS ಆಗಿರಲಿದೆ.. ಮುಂದಿನ 3 ವರ್ಷಗಳ ಕಾಲ ನಡೆಯುವ ಈ ಸಂಶೋಧನೆಯ ವರದಿಯನ್ನು ICMRಗೆ ಸಲ್ಲಿಸಲಾಗುವುದು ಎನ್ನಲಾಗಿದೆ.

ಜನವರಿ 2022 ರಿಂದ ಈ ಕೆಲಸ ಆರಂಭಗೊಂಡಿದೆ
ಅಸೋಸಿಯೇಟ್ ಪ್ರೊಫೆಸರ್ ಡಾ.ರಾಘವೇಂದ್ರ ವಿದುವಾ, ಡಾ.ಅರ್ನೀತ್ ಅರೋರಾ ಮತ್ತು ಹೆಚ್ಚುವರಿ ಪ್ರೊಫೆಸರ್ ಪೆಥಾಲಜಿ ಡಾ.ಅಶ್ವನಿ ಟಂಡನ್ ಅವರು ಕಳೆದ ಜನವರಿ 1 ರಿಂದ ಈ ಸಂಶೋಧನೆಯ ಕಾರ್ಯವನ್ನು ಆರಂಭಿಸಿದ್ದಾರೆ. ಈ ಸಂಶೋಧನೆಗೆ ತಾಂತ್ರಿಕ ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆ ಸದ್ಯಕ್ಕೆ ನಡೆಯುತ್ತಿದೆ. ಇದಕ್ಕಾಗಿ ICMR 35 ಲಕ್ಷ ರೂ. ಬಿಡುಗಡೆ ಮಾಡಿದೆ. ಈ ಯೋಜನೆಗೆ ICMR 2020 ರಲ್ಲಿಯೇ ಅನುಮೋದನೆ ನೀಡಿತ್ತು, ಆದರೆ ಕೊರೊನಾ ಸೋಂಕಿನಿಂದಾಗಿ, ಯೋಜನೆಯು ಜನವರಿ 2022 ರಲ್ಲಿ ಆರಂಭಗೊಂಡಿದೆ.

ಇದನ್ನೂ ಓದಿ-Coronavirus 4th Wave: ಕೊರೊನಾ ನಾಲ್ಕನೇ ಅಲೆಗೆ ಈ ದೇಶ ತತ್ತರ, ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ

ವ್ಯಕ್ತಿಯ ವಂಶವನ್ನು ಮುನ್ನಡೆಸುವುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ. ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಅಥವಾ ಇನ್ನಾವುದೇ ಕಾರಣ ತನ್ನ ಪ್ರಾಣವನ್ನು ಕಳೆದುಕೊಂಡಿದ್ದರೆ, ಅವನ ಕುಟುಂಬ ಅವನ ಸಾವನ್ನು ಮರೆತು ಮುಂದಕ್ಕೆ ಸಾಗಲು ಬುಅಸೋದರೆ, ಅಂತಹ ಪರಿಸ್ಥಿತಿಯಲ್ಲಿ ಮೃತ ವ್ಯಕ್ತಿಯ ವೀರ್ಯದ ಸಹಾಯದಿಂದ ಮಕ್ಕಳನ್ನು ಹುಟ್ಟಿಸಬಹುದು. ಓರ್ವ ಮೃತ ವ್ಯಕ್ತಿಯ ಶರೀರದಲ್ಲಿ ವೀರ್ಯವು ಎಷ್ಟು ಕಾಲ ಬದುಕಬಲ್ಲದು ಎಂಬುದನ್ನು ಕಂಡುಹಿಡಿಯುವುದು ಸಂಶೋಧನೆಯ ಮುಖ್ಯ ಉದ್ದೇಶ. ಆದರೆ, ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಓರ್ವ ಕುಟುಂಬಸ್ಥ  ಹೆಣ್ಣಿಗೆ ಈ ರೀತಿಯ ವ್ಯವಸ್ಥೆ ಎಷ್ಟು ಮಾನ್ಯವಾಗಿರಲಿದೆ? ವ್ಯಕ್ತಿಯ ಮರಣದ ನಂತರ ಎಷ್ಟು ಸಮಯದವರೆಗೆ ವೀರ್ಯವು ಚಲನಶೀಲವಾಗಿರಲಿದೆ? ಮತ್ತು ಅವುಗಳ ಸಂಖ್ಯೆಯು ಎಷ್ಟು ಸರಾಸರಿಯಲ್ಲಿ ಕಡಿಮೆಯಾಗುತ್ತದೆ? ಎಂಬ ಹಲವು ಪ್ರಶ್ನೆಗಳಿವೆ ಪ್ರಸ್ತುತ, ಭಾರತದಲ್ಲಿ ಈ ರೀತಿಯ  ಪ್ರಶ್ನೆಗಳ ಕುರಿತು ಯಾವುದೇ ಸಂಶೋಧನೆಯನ್ನು ನಡೆಸಲಾಗಿಲ್ಲ. ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಬಗ್ಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಇದನ್ನೂ ಓದಿ-'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ

ಈ ಮೊದಲು ಕೂಡ ಇಂತಹ ಪ್ರಕರಣ ಮುನ್ನೆಲೆಗೆ ಬಂದಿತ್ತು
ಜುಲೈ 2016 ರಲ್ಲಿ,  AIIMS New Delhiಗೆ ಚಿಕಿತ್ಸೆಗಾಗಿ ಕರೆದೊಯ್ಯುವಾಗ ಯುವಕನೋರ್ವ ಮೃತಪಟ್ಟಿದ್ದ. ಆಗ ಆತನ ವಿಧವೆ ಪತ್ನಿ ಆಸ್ಪತ್ರೆಯ ಆಡಳಿತ ಮಂಡಳಿಯ ಮುಂದೆ ವಿಚಿತ್ರ ಬೇಡಿಕೆ ಇಟ್ಟಿದ್ದಳು. ವಿಧವೆ ಪತ್ನಿ ಗರ್ಭಿಣಿಯಾಗಲು ತನ್ನ ಪತಿಯ ವೀರ್ಯಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ, ಮೃತ ವ್ಯಕ್ತಿಯ ದೇಹದಿಂದ ವೀರ್ಯ ತೆಗೆಯುವ ಕುರಿತು ನಮ್ಮ ದೇಶದಲ್ಲಿ ಸ್ಪಷ್ಟ ಮಾರ್ಗಸೂಚಿಗಳಿಲ್ಲದ ಕಾರಣ ಆಕೆಯ ಆಸೆ ಈಡೇರಿರಲಿಲ್ಲ. ಆ ಸಮಯದಲ್ಲಿ AIIMS ನ ವೈದ್ಯರು ಮರಣದ ನಂತರ 24 ಗಂಟೆಗಳ ಕಾಲ ಮಾನವ ದೇಹದಲ್ಲಿ ವೀರ್ಯವು ಜೀವಂತವಾಗಿರುತ್ತದೆ ಎಂದು ಹೇಳಿದ್ದರು. ಮೃತ ದೇಹದಿಂದ ವೀರ್ಯವನ್ನು ತೆಗೆದುಕೊಳ್ಳುವುದು ತುಂಬಾ ಸರಳ ಮತ್ತು ಐದು ನಿಮಿಷಗಳ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News