ದೇಶದಲ್ಲಿ 5G ಇಂಟರ್ನೆಟ್‌ ಸೇವೆ ಆರಂಭ: ಯಾವಾಗ? ಇಲ್ಲಿದೆ ಮಾಹಿತಿ

ಸ್ಪೆಕ್ಟ್ರಮ್ ಹರಾಜಿಗಾಗಿ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರ ಅಡಿಯಲ್ಲಿ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5G ಸೇವೆಗಳನ್ನು ಒದಗಿಸಲು ಯಶಸ್ವಿ ಬಿಡ್ಡರ್‌ಗಳಿಗೆ ಸ್ಪೆಕ್ಟ್ರಮ್ ಅನ್ನು ಹಂಚಲಾಗುತ್ತಿದೆ. 

Written by - Bhavishya Shetty | Last Updated : Jun 15, 2022, 01:36 PM IST
  • 5ಜಿ ಇಂಟರ್ನೆಟ್ ಸೇವೆ ಶೀಘ್ರದಲ್ಲೇ ಆರಂಭ
  • ಹರಾಜಿಗೆ ಸರ್ಕಾರ ಅನುಮೋದನೆ ನೀಡಿದೆ
  • 5ಜಿ ಹರಾಜಿಗೆ ಅರ್ಜಿ ಸಲ್ಲಿಕೆ ಜುಲೈ 8ರಿಂದ ಆರಂಭ
ದೇಶದಲ್ಲಿ 5G ಇಂಟರ್ನೆಟ್‌ ಸೇವೆ ಆರಂಭ: ಯಾವಾಗ? ಇಲ್ಲಿದೆ ಮಾಹಿತಿ title=
5G Internet Service

ದೇಶದಲ್ಲಿ 5ಜಿ ಇಂಟರ್ನೆಟ್ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಅದರ ಹರಾಜಿಗೆ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಇಂದು ಈ ವಿಷಯವನ್ನು ಪ್ರಕಟಿಸಿದ್ದಾರೆ. 5ಜಿ ಹರಾಜಿಗೆ ಅರ್ಜಿ ಸಲ್ಲಿಕೆ ಜುಲೈ 8ರಿಂದ ಆರಂಭವಾಗಲಿದ್ದು, ಜುಲೈ 26ರಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷದ ಅಕ್ಟೋಬರ್‌ನಿಂದ 5G ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ಓದಿ: ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್‌ ಬೆಡಗಿಯರು!

ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡಲು IMT/5G ಸ್ಪೆಕ್ಟ್ರಮ್ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. 5G ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. 72 GHz ಗಿಂತ ಹೆಚ್ಚಿನ ಸ್ಪೆಕ್ಟ್ರಮ್, 4G ಗಿಂತ ಸುಮಾರು 10 ಪಟ್ಟು ವೇಗವನ್ನು 20 ವರ್ಷಗಳ ಅವಧಿಗೆ ಹರಾಜು ಮಾಡಲಾಗುತ್ತದೆ" ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ಸ್ಪೆಕ್ಟ್ರಮ್ ಹರಾಜಿಗಾಗಿ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರ ಅಡಿಯಲ್ಲಿ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5G ಸೇವೆಗಳನ್ನು ಒದಗಿಸಲು ಯಶಸ್ವಿ ಬಿಡ್ಡರ್‌ಗಳಿಗೆ ಸ್ಪೆಕ್ಟ್ರಮ್ ಅನ್ನು ಹಂಚಲಾಗುತ್ತಿದೆ. 

ಇದನ್ನೂ ಓದಿ: ಐಪಿಎಲ್‌ ಇತಿಹಾಸದ ಅದ್ಭುತ ಕ್ಯಾಚ್‌: ಮೈದಾನದಲ್ಲಿ 'ಸೂಪರ್‌ಮ್ಯಾನ್' ಆದ ಆಟಗಾರರು

ಜುಲೈ ಅಂತ್ಯದ ವೇಳೆಗೆ ಸರ್ಕಾರವು 20 ವರ್ಷಗಳ ಮಾನ್ಯತೆಯೊಂದಿಗೆ ಒಟ್ಟು 72097.85 MHz ತರಂಗಾಂತರವನ್ನು ಹರಾಜು ಮಾಡಲಿದೆ. ಇದಲ್ಲದೆ, ವಿವಿಧ ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಆವರ್ತನ ಬ್ಯಾಂಡ್‌ಗಳಿಗೆ ಸ್ಪೆಕ್ಟ್ರಮ್ ಹರಾಜು ಕೂಡ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News