ಮಾರುತಿಯ ಈ ಕಾರನ್ನು ಬುಕ್ ಮಾಡಿ ಕಾಯುತ್ತಿದ್ದಾರೆ ಒಂದು ಲಕ್ಷಕ್ಕೂ ಅಧಿಕ ಮಂದಿ

Maruti Suzuki Pending Order: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಪ್ರಸ್ತುತ 380,000 ಬುಕ್ಕಿಂಗ್‌ಗಳನ್ನು ಬಾಕಿ ಉಳಿಸಿಕೊಂಡಿದೆ. ಇವುಗಳಲ್ಲಿ, ಎರ್ಟಿಗಾ, ಡಿಜೈರ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಬಲೆನೊ, ಫ್ರಾಂಕ್ಸ್ ಮತ್ತು ಎಕ್ಸ್‌ಎಲ್ 6ನ ಅತಿ ಹೆಚ್ಚು ಆರ್ಡರ್‌ಗಳು ಬಾಕಿ ಉಳಿದಿವೆ. 

Written by - Ranjitha R K | Last Updated : Apr 4, 2023, 01:35 PM IST
  • ಮಾರುತಿ ಸುಜುಕಿ ದೇಶದ ಅತಿ ದೊಡ್ಡ ಕಾರು ಮಾರಾಟ ಕಂಪನಿ
  • ಆಲ್ಟೊ, ವ್ಯಾಗನಾರ್, ಸ್ವಿಫ್ಟ್ ಹೀಗೆ ಕಂಪನಿಯ ಕಾರುಗಳಿಗೆ ಹೆಚ್ಚಾದ ಬೇಡಿಕೆ
  • 2 ವಾಹನಗಳಿಗಾಗಿ ಇದೀಗ ಲಕ್ಷಗಟ್ಟಲೆ ಗ್ರಾಹಕರು ಕಾಯುತ್ತಿದ್ದಾರೆ.
ಮಾರುತಿಯ ಈ  ಕಾರನ್ನು ಬುಕ್ ಮಾಡಿ ಕಾಯುತ್ತಿದ್ದಾರೆ ಒಂದು ಲಕ್ಷಕ್ಕೂ ಅಧಿಕ ಮಂದಿ  title=

Maruti Suzuki Pending Order : ಮಾರುತಿ ಸುಜುಕಿ ದೇಶದ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ಆಲ್ಟೊ, ವ್ಯಾಗನಾರ್, ಸ್ವಿಫ್ಟ್ ಹೀಗೆ ಕಂಪನಿಯ ಕಾರುಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮಾರುತಿಯ ಕಾರುಗಳೇ ಅಗ್ರಸ್ಥಾನದಲ್ಲಿರುತ್ತದೆ. ಆದರೆ, ಕಂಪನಿಯ 2 ವಾಹನಗಳಿಗಾಗಿ ಇದೀಗ  ಲಕ್ಷಗಟ್ಟಲೆ ಗ್ರಾಹಕರು ಕಾಯುತ್ತಿದ್ದಾರೆ. ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಕಾರುಗಳ ಬಾಕಿ ಆರ್ಡರ್‌ಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾರುತಿ ಎರ್ಟಿಗಾ ಮತ್ತು ಡಿಜೈರ್‌ ಆರ್ಡರ್‌ಗಳು ಬಾಕಿ ಉಳಿದಿವೆ.  

ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಪ್ರಸ್ತುತ 380,000 ಬುಕ್ಕಿಂಗ್‌ಗಳನ್ನು ಬಾಕಿ ಉಳಿಸಿಕೊಂಡಿದೆ. ಇವುಗಳಲ್ಲಿ, ಎರ್ಟಿಗಾ, ಡಿಜೈರ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಬಲೆನೊ, ಫ್ರಾಂಕ್ಸ್ ಮತ್ತು ಎಕ್ಸ್‌ಎಲ್ 6ನ ಅತಿ ಹೆಚ್ಚು ಆರ್ಡರ್‌ಗಳು ಬಾಕಿ ಉಳಿದಿವೆ. 

ಇದನ್ನೂ ಓದಿ : Twitter new logo: ಟ್ವಿಟ್ಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್​: ನೀಲಿ ಹಕ್ಕಿ ಬದಲು ನಾಯಿ ಚಿತ್ರ

1 ಲಕ್ಷ  ಆರ್ಡರ್‌ಗಳು  ಬಾಕಿ :
ಮಾರುತಿ ಸುಜುಕಿ ಎರ್ಟಿಗಾ ಕಂಪನಿಯ ಅತ್ಯಧಿಕ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ಆರ್ಡರ್ ಆಗಿದೆ. ಕಂಪನಿಯ ಪ್ರಕಾರ, ಎರ್ಟಿಗಾದ ಸುಮಾರು 100,000 ಬುಕಿಂಗ್‌ಗಳು ಬಾಕಿ ಉಳಿದಿವೆ. ನಂತರ ಕ್ರಮವಾಗಿ ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ ಎಸ್‌ಯುವಿಯ  40,000 ಮತ್ತು 34,000 ಬುಕಿಂಗ್  ಬಾಕಿ ಉಳಿದಿವೆ. 

ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ : 
5-ಡೋರ್ ಜಿಮ್ನಿ ಎಸ್‌ಯುವಿ 24,500 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಇದುವರೆಗೆ 16,500 ಬುಕ್ಕಿಂಗ್‌ಗಳನ್ನು ಪಡೆದಿದೆ. ಮಾರುತಿ ಈ ತಿಂಗಳ ಎರಡನೇ ವಾರದಲ್ಲಿ ಫ್ರಾಂಕ್ಸ್‌ಗಳ ಬೆಲೆಗಳನ್ನು ಪ್ರಕಟಿಸಲಿದೆ. ಜನಪ್ರಿಯ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ 20,000 ಬುಕ್ಕಿಂಗ್‌ಗಳು ಬಾಕಿ ಉಳಿದಿವೆ. ಕಂಪನಿಯ ಪ್ರೀಮಿಯಂ MPV ಮಾರುತಿ ಸುಜುಕಿ XL6 9,000 ಬಾಕಿ ಬುಕಿಂಗ್ ಹೊಂದಿದೆ.

ಇದನ್ನೂ ಓದಿ : ತಲೆ ದಿಂಬಿನ ಪಕ್ಕದಲ್ಲಿಯೇ ಮೊಬೈಲ್ ಇಟ್ಟು ಮಲಗುವ ಅಭ್ಯಾಸ ಬಲು ಅಪಾಯಕಾರಿ! ಇಂದೇ ಬದಲಾಯಿಸಿಕೊಳ್ಳಿ

ಮಾರುತಿ ಕಾರುಗಳ ವೈಟಿಂಗ್ ಪಿರಿಯಡ್ : 
ಮಾರುತಿ ಸುಜುಕಿ ಎರ್ಟಿಗಾಫಾ ಗರಿಷ್ಟ ವೈಟಿಂಗ್ ಪಿರಿಯಡ್ 33-34 ವಾರಗಳು, ಮಾರುತಿ ಸುಜುಕಿ ಬ್ರೆಝಾಗೆ 21-22 ವಾರಗಳು, ಮಾರುತಿ ಸುಜುಕಿ ಡಿಜೈರ್‌ಗೆ 20-21 ವಾರಗಳು, ಮಾರುತಿಗೆ 20-21 ವಾರಗಳು ಸುಜುಕಿ 16-17 ವಾರಗಳು, ಗ್ರಾಂಡ್ ವಿಟಾರಾ ಮತ್ತು XL6 ಗೆ 14-15 ವಾರಗಳು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News