Smart TV Deal: ಕೇವಲ ರೂ.999ಕ್ಕೆ ಸಿಗುತ್ತಿದೆ 22 ಸಾವಿರ ಬೆಲೆ ಬಾಳುವ ಸ್ಮಾರ್ಟ್ ಟಿವಿ!

LED Smart TV: Fifa World Cup 2022 ಇಂದಿನಿಂದ ಆರಂಭಗೊಳ್ಳುತ್ತಿದೆ ಹಾಗೂ ಭಾರತ ಸೇರಿದಂತೆ ವಿಶ್ವಾದ್ಯಂತದ ಜನರಲ್ಲಿ ಈ ಕುರಿತು ಭಾರಿ ಕ್ರೇಜ್ ಇದೆ. ಆದರೆ, ನಾವು ನಿಮಗೆ ಹೇಳಲು ಹೊರಟಿರುವ ಸ್ಮಾರ್ಟ್ ಟಿವಿಯನ್ನು ಬಳಸಿ ನೀವೂ ಕೂಡ ನಿಮ್ಮ ಫುಟ್ಬಾಲ್ ವರ್ಲ್ಡ್ ಕಪ್ ನೋಡುವ ಹುರುಪನ್ನು ಇಮ್ಮಡಿಗೊಳಿಸಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿಯಲ್ಲಿ ಧೂಳೆಬ್ಬಿಸುವ ವೈಶಿಷ್ಟ್ಯಗಳನ್ನು ನೀಡಲಾಗಿದೆ.  

Written by - Nitin Tabib | Last Updated : Nov 20, 2022, 07:17 PM IST
  • ಫಿಫಾ ವಿಶ್ವಕಪ್ 2022 ಇಂದಿನಿಂದ ಆರಂಭವಾಗಲಿದೆ.
  • ಭಾರತದಲ್ಲಿಯೂ ಕೂಡ ಫುಟ್ ಬಾಲ್ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ.
  • ಆದರೂ ಕೂಡ ಭಾರತದಲ್ಲಿ ಮನೆಯಲ್ಲಿಯೇ ಕುಳಿತು ಲೈವ್ ಪಂದ್ಯಗಳನ್ನು ವೀಕ್ಷಿಸಲು ಬಹುತೇಕರು ಬಯಸುತ್ತಾರೆ,
Smart TV Deal: ಕೇವಲ ರೂ.999ಕ್ಕೆ ಸಿಗುತ್ತಿದೆ 22 ಸಾವಿರ ಬೆಲೆ ಬಾಳುವ ಸ್ಮಾರ್ಟ್ ಟಿವಿ! title=
Smart TV Offer

Realme Smart TV: ಫಿಫಾ ವಿಶ್ವಕಪ್ 2022 ಇಂದಿನಿಂದ ಆರಂಭವಾಗಲಿದೆ. ಭಾರತದಲ್ಲಿಯೂ ಕೂಡ ಫುಟ್ ಬಾಲ್ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಆದರೂ ಕೂಡ ಭಾರತದಲ್ಲಿ ಮನೆಯಲ್ಲಿಯೇ ಕುಳಿತು ಲೈವ್ ಪಂದ್ಯಗಳನ್ನು ವೀಕ್ಷಿಸಲು ಬಹುತೇಕರು ಬಯಸುತ್ತಾರೆ, ಇಂದು ನಾವು ನಿಮಗಾಗಿ ಸ್ಮಾರ್ಟ್ ಟಿವಿ ಕೊಡುಗೆಯೊಂದನ್ನು ಹೊತ್ತು ತಂದಿದ್ದೇವೆ ಮತ್ತು ಇದು ನಿಮ್ಮ ಫುಟ್‌ಬಾಲ್‌ನ ಮೋಜನ್ನು ದ್ವಿಗುಣಗೊಳಿಸುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಸ್ಮಾರ್ಟ್ ಎಲ್ಇಡಿ ಟಿವಿಯ ಬೆಲೆ ನೀವು ಊಹಿಸಲು ಸಾಧ್ಯವಿಲ್ಲದಷ್ಟು ಕಡಿಮೆಯಾಗಿದೆ. ಹಾಗಾದರೆ ಈ ಸ್ಮಾರ್ಟ್ ಎಲ್ ಇಡಿ ಟಿವಿ ಯಾವುದು ಮತ್ತು ಅದರ ವಿಶೇಷತೆ ಏನು ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-Male To Get Pregnant: ಪುರುಷರು ಕೂಡ ಮಕ್ಕಳಿಗೆ ಜನ್ಮ ನೀಡಬಹುದು! ಈ ರೀತಿ ಗರ್ಭ ಧರಿಸಬಹುದು

ಯಾವುದು ಆ ಸ್ಮಾರ್ಟ್ LED ಟಿವಿ ಮತ್ತು ಅದರ ವಿಶೇಷತೆ ಏನು
realme NEO 80 cm (32 inch) HD Ready LED Smart Linux TV ಆ ಸ್ಮಾರ್ಟ್ LED TV, ಇಂದು ನಾವು ಈ ಟಿವಿಯ ವಿಶೇಷತೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಏಕೆಂದರೆ ಅದರ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ, ನೀವು ಊಹಿಸಲೂ ಸಾಧ್ಯವಿಲ್ಲದಷ್ಟು ರಿಯಾಯಿತಿಯನ್ನು ಅದರ ಮೇಲೆ ನೀಡಲಾಗುತ್ತಿದೆ. ಇದು 30-ಇಂಚಿನ ಸ್ಮಾರ್ಟ್ LED ಟಿವಿ ಇದೆ, ಇದರ ಮೂಲ ಬೆಲೆ ₹ 21999, ಆದರೆ ಫ್ಲಿಪ್‌ಕಾರ್ಟ್ ಈಗಾಗಲೇ ಅದರ ಬೆಲೆಯಲ್ಲಿ 45% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 45% ರಷ್ಟು ರಿಯಾಯಿತಿ ಪಡೆದ ನಂತರ, ಈ ಸ್ಮಾರ್ಟ್ LED ಟಿವಿಯ ಬೆಲೆ ಕೇವಲ ₹ 11999 ಆಗಿ ಉಳಿಯುತ್ತದೆ. ಇದು ಕೈಗೆಟುಕುವ ಬೆಲೆ ಮತ್ತು ಸ್ಮಾರ್ಟ್ ಟಿವಿಯನ್ನು ನಿಮಗೆ ಅರ್ಧದಷ್ಟು ಬೆಲೆಗೆ ನೀಡಲಾಗುತ್ತಿದೆ, ಆದರೆ ನೀವು ಬಯಸಿದರೆ, ನೀವು ಇದನ್ನು ಕೇವಲ ₹ 999 ಕ್ಕೆ ಖರೀದಿಸಬಹುದು ಮತ್ತು ಅದು ಹೇಗೆ ಸಾಧ್ಯ ಎಂಬುದನ್ನು ನಾವು ನಿಮಗೆ ಹೇಳಿಕೊಡುತ್ತೇವೆ,

ಇದನ್ನೂ ಓದಿ-ಬೆಂಗಳೂರಿನಾಚೆಗಿನ ಉದಯೋನ್ಮುಖ ಟೆಕ್ ಕ್ಲಸ್ಟರ್ ಗಳಿಗೆ ಆದ್ಯತೆ

ಕಂಪನಿಯು ಎಕ್ಸ್ ಚೇಂಜ್ ಆಫರ್ ನೀಡುತ್ತಿದೆ
ಈ ಸ್ಮಾರ್ಟ್ LED ಟಿವಿಯಲ್ಲಿ ಫ್ಲಿಪ್‌ಕಾರ್ಟ್ ₹ 11000 ಎಕ್ಸ್‌ಚೇಂಜ್ ಆಫರ್ ಅನ್ನು ನೀಡುತ್ತಿದೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು ಮತ್ತು ಈ ಆಫರ್ ಸಂಪೂರ್ಣವಾಗಿ ಜಾರಿಯಾದರೆ ಸ್ಮಾರ್ಟ್ ಟಿವಿಯ ಬೆಲೆ ₹ 11999 ರಿಂದ ₹ 11000 ಕ್ಕೆ ಇಳಿಕೆಯಾಗಿದೆ. ಅಂದರೆ ಗ್ರಾಹಕರು ಕೇವಲ ₹ 999 ಪಾವತಿಸಬೇಕಾಗುತ್ತದೆ, ಇದು ಇದುವರೆಗಿನ ಅತ್ಯಂತ ಬಂಬಾಟ್ ಕೊಡುಗೆಯಾಗಿದೆ. ನೀವು ಈ ಕೊಡುಗೆಯ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ಅದು ನಿಮಗೆ ಮಾನ್ಯವಾಗಿರುತ್ತದೆ ಮತ್ತು ಇದರ ಲಾಭವನ್ನು ಪಡೆದುಕೊಳ್ಳುವ ಮೂಲಕ ನೀವು ಸಾಕಷ್ಟು ಹಣ ಉಳಿತಾಯ ಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News