IND vs SL T20: ಗಂಭೀರ್ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ಫೀಲ್ಡಿಂಗ್ ಕೋಚ್ ಡಿ ದಿಲೀಪ್ ಅವರನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಭಾರತ ತಂಡದ ಕೋಚ್ ಆಗಿ ದಿಲೀಪ್ ಅವರನ್ನು ಕರೆತಂದ ನಂತರ, ಅವರು ಪ್ರತಿ ಐಸಿಸಿ ಪಂದ್ಯಾವಳಿಯಲ್ಲಿ ಆಟಗಾರರಿಗೆ ಅತ್ಯುತ್ತಮ ಫೀಲ್ಡರ್ ಪದಕವನ್ನು ನೀಡುತ್ತಿದ್ದರು.
IND vs SL T20: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
IND vs SL T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್ XI ಅಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಭಿಮಾನಿಗಳು ತೀವ್ರ ಟೀಕೆ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.