ಡಿಕೆಶಿ ವಿರುದ್ಧ ಯತ್ನಾಳ್ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಕೆ. ಯತ್ನಾಳ್ ಕಾನೂನು ಹೋರಾಟಕ್ಕೆ ಬೆಳಗಾವಿ ಸಾಹುಕಾರ್ ಸಾಥ್. ಸಾಹುಕಾರ್ ಬೆಂಬಲದೊಂದಿಗೆ ಕೋರ್ಟ್ಗೆ ದಾವೆ ಹೂಡಿದ ಯತ್ನಾಳ್. ಅರ್ಜಿ ಸಲ್ಲಿಸುವ ಮುನ್ನ ಯತ್ನಾಳ್-ರಮೇಶ್ ಜಾರಕಿಹೊಳಿ ಚರ್ಚೆ. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿರುವ ಉಭಯ ನಾಯಕರು .
45 ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಯತ್ನಾಳ್ ಹೇಳಿಕೆ ವಿಚಾರ. 4 ಶಾಸಕರ ಹೆಸರೇಳಲಿ ಎಂದು ಯತ್ನಾಳ್ಗೆ ಜಗದೀಶ್ ಶೆಟ್ಟರ್ ಸವಾಲು. ವಿಧಾನಸಭಾ ಚುನಾವಣೆಯ ಬಿಜೆಪಿ ಫಲಿತಾಂಶ ಏನಾಗಿದೆ ಅಂತ ಗೊತ್ತಿದೆ.
ಬಸವರಾಜ ಬೊಮ್ಮಾಯಿ ಏನೇನ್ ಆಟ ಆಡ್ತಾರೆ ನೋಡೋಣ.. ಸಿಎಂ ಸಿಹಿ ಸುದ್ದಿ ಕೊಡ್ತಾರೋ.. ನಾಟಕ ಆಡ್ತಾರೋ.. ನೋಡೋಣ ಎಂದು ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಈ ದೇಶದಲ್ಲಿ ಮೊದಲು ಕಾಂಗ್ರೆಸ್ ಬ್ಯಾನ್ ಮಾಡಬೇಕು. ಈ ದೇಶಕ್ಕೆ ಕಾಂಗ್ರೆಸ್ ಒಂದು ಶಾಪವಾಗಿದೆ ಎಂದು ಬಾಗಲಕೋಟೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದಾರೆ. RSS ದೇಶಭಕ್ತರ ಸಂಘಟನೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಹಿರಿಯ ನಾಯಕರಿದ್ದಾರೆ. ಅವರ ಹೇಳಿಕೆಗೆ ಯಾರು ಒತ್ತಡ ಹಾಕಿದ್ರು ಅಂತಾ ಅವರೇ ಹೇಳಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.. ಕೇಂದ್ರದ ನಾಯಕರು, ಮುಖ್ಯಮಂತ್ರಿಗಳು, ರಾಜ್ಯದ ಅಧ್ಯಕ್ಷರು ಎಲ್ಲರೂ ಕೂಡಾ ಗಮನಿಸಿದ್ದಾರೆ. ಅವರ ಹೇಳಿಕೆ ಬಗ್ಗೆ ಅವರು ನಿರ್ಧಾರ ಮಾಡ್ತಾರೆ ಅಂತಾ ಹೇಳಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.