ನೀರಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಉತ್ತಮ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಆದರೆ, ಹಾಗಂತ ಮಿತಿ ಮೀರಿ ನೀರು ಕುಡಿಯುವುದು ಕೂಡ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?
Water Drinking: ಆರೋಗ್ಯವಾಗಿರಲು ಹೆಚ್ಚು ನೀರು ಕುಡಿಯುವುದು ಬಹಳ ಅಗತ್ಯ. ಆದರೆ, ಊಟ ಮಾಡುವಾಗ ಮಧ್ಯೆ ನೀರು ಕುಡಿಯದಂತೆ ಮನೆಯಲ್ಲಿ ಹಿರಿಯರು ಬೈಯುವುದನ್ನು ನಾವು ಕೇಳಿಯೇ ಇರುತ್ತೇವೆ. ನಮ್ಮ ಹಿರಿಯರು ಏನೇ ಹೇಳಿದರು ಅದರ ಹಿಂದೆ ಸಂಪ್ರದಾಯ ಮಾತ್ರವಲ್ಲ, ಕೆಲವು ವೈಜ್ಞಾನಿಕ ಕಾರಣಗಳೂ ಇರುತ್ತೆ. ಹಾಗಿದ್ದರೆ, ಊಟದ ನಡುವೆ ಏಕೆ ನೀರು ಕುಡಿಯಬಾರದು? ಇದರಿಂದ ಆಗುವ ಸಮಸ್ಯೆ ಎಂದು ಎಂಬುದನ್ನು ತಿಳಿಯೋಣ...
ನಮ್ಮ ದೇಹವು ಶೇ.70 ರಷ್ಟು ನೀರಿನಿಂದ ಕೂಡಿದೆ. ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಶೇ.80 ರಷ್ಟು ನೀರು ಬೇಕು. ಹಾಗೆ, 90% ಶ್ವಾಸಕೋಶಗಳು, 83% ರಕ್ತ, 30% ಮೂಳೆಗಳು ಮತ್ತು 64% ಚರ್ಮಕ್ಕೆ ನೀರಿನ ಅಗತ್ಯವಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.