ನೀವು ಹರಿದ ಅಥವಾ ಟೇಪ್ ಮಾಡಿದ ನೋಟುಗಳನ್ನು ಹೊಂದಿದ್ದರೆ (ಟೋರ್ನ್ ನೋಟ್ಸ್) ಮತ್ತು ಆ ನೋಟನ್ನು ಎಲ್ಲಿಯೂ ಬಳಸಲು ಸಾಧ್ಯವಾಗದಿದ್ದರೆ, ಅಂಗಡಿಯವನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಆದ್ದರಿಂದ ಈಗ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಈ ಬಗ್ಗೆ ಇಲ್ಲಿದೆ ಮಾಹಿತಿ, ಹರಿದ.
New Currency Notes : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಟುಗಳನ್ನು ನೀಡಲಾಗುತ್ತದೆ, ಆದರೆ ನೋಟು ಅಮಾನ್ಯೀಕರಣದ ನಂತರ ದೇಶಾದ್ಯಂತ, ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿವೆ.
ಈ ಟೇಪ್ ಸ್ಟಿಕ್ಕಿಂಗ್ ನೋಟ್ ಅನ್ನು ಬದಲಿಸಲು ಆರ್ಬಿಐ ನಿಯಮಗಳನ್ನು ಮಾಡಿದೆ. ಬ್ಯಾಂಕ್ ನಿಯಮಗಳ ಪ್ರಕಾರ, ನೀವು ಈ ನೋಟುಗಳನ್ನು ಹೇಗೆ ಬದಲಾಯಿಸಬಹುದು ಮತ್ತು ನೀವು ಪೂರ್ಣ ಹಣವನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನು ನಾವು ನಿಮಗಾಗಿ ಮಾಹಿತಿ ತಂದಿದ್ದೇವೆ. ಅಂದರೆ, ಈ ಟೇಪ್ ಅಂಟಿಸಿದ ಅಥವಾ ಹರಿದ ನೋಟುಗಳನ್ನ ನೀವು ಹೇಗೆ ಬದಲಿಸಬಹುದು ಇಲ್ಲಿದೆ ನೋಡಿ..
ATM: ನೀವು ಕೂಡ ಡ್ಯಾಮೇಜ್ ನೋಟುಗಳನ್ನು ಹೊಂದಿದ್ದರೆ, ನೀವು ಚಿಂತಿಸಬೇಕಾಗಿಲ್ಲ. ಈಗ ನೀವು ಈ ನೋಟಿಗೆ ಬದಲಾಗಿ ಪೂರ್ಣ ಹಣವನ್ನು ಪಡೆಯುತ್ತೀರಿ. ನಿಮ್ಮ ಬಳಿಯಿರುವ ಹರಿದ ನೋಟನ್ನು ಬದಲಾಯಿಸುವುದು ಹೇಗೆ ಎಂದು ತಿಳಿಯಿರಿ.
ಭಾರತೀಯ ರಿಸರ್ವ್ ಬ್ಯಾಂಕ್ 2017 ರ ಕರೆನ್ಸಿ ನೋಟ್ ವಿನಿಮಯ ನಿಯಮಗಳ ಪ್ರಕಾರ, ಎಟಿಎಂನಲ್ಲಿ ಹರಿದ ನೋಟುಗಳು ಸಿಕ್ಕಿದರೆ, ಅವುಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಮತ್ತು ಯಾವುದೇ ಸರ್ಕಾರಿ ಬ್ಯಾಂಕ್ಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ.
ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಿದಾಗ ಒಂದೊಮ್ಮೆ ಹರಿದ ನೋಟುಗಳನ್ನು ಪಡೆದರೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ನೀವು ಈ ನೋಟುಗಳನ್ನು ಸುಲಭವಾಗಿ ಬದಲಾಯಿಸಿ ಹೊಸ ನೋಟುಗಳನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.