Sri Lanka Economic Crisis: ದೇಶದ ಅತ್ಯಂತ ಸುರಕ್ಷಿತ ಸ್ಥಳಗಳು ಎಂದು ಹೇಳಲಾಗುವ ಈ ಠಿಕಾಣಿಗಳಲ್ಲಿ ಪ್ರತಿಭಟನಾಕಾರರು ಮೋಜು-ಮಸ್ತಿಗಿಳಿದಿದ್ದಾರೆ. ಶ್ರೀಲಂಕಾದಲ್ಲಿ ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸಗಳು ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರ ಹಲವು ವಿಡಿಯೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಹಲವರು ಅಡುಗೆ ಮಾಡುತ್ತಿರುವುದು, ಕೇರಂ ಬೋರ್ಡ್ ಆಡುತ್ತಿರುವುದನ್ನು ನೀವು ನೋಡಬಹುದು.
"ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಅವರ ಕುಟುಂಬಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳು ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವುದನ್ನು ಹೈಕಮಿಷನ್ ಇತ್ತೀಚೆಗೆ ಗಮನಿಸಿದೆ. ಇದು ನಕಲಿ ಸುದ್ದಿ ಮತ್ತು ಸ್ಪಷ್ಟವಾದ ಸುಳ್ಳು ವರದಿಗಳು. ಈ ವಿಚಾರವನ್ನು ಹೈಕಮಿಷನ್ ಬಲವಾಗಿ ನಿರಾಕರಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದ ಜನತೆ ಇಂದು ತಡ ರಾತ್ರಿ 2000 ಕ್ಕೂ ಹೆಚ್ಚು ಜನರು ಲಂಕಾ ರಾಜಧಾನಿಯಲ್ಲಿ ಅಧ್ಯಕ್ಷರ ಭವನದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.