ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನದ ಪೂಜಾ ಪದ್ದತಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಮೂರು ಗಂಟೆಗೆ ಅಲಂಕಾರ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ಏಕದಶವಾರ ರುದ್ರಾಭಿಷೇಕ ಮಹಾಮಂಗಳಾರತಿ, ನೈವೇದ್ಯ ಇಡಲಾಗುತ್ತೆ. ಸಂಜೆ 4 ಗಂಟೆವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಅಕ್ಟೋಬರ್ 25 ರಂದು ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣವು ಯುರೋಪ್, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ವಿವಿಧ ಭಾಗಗಳಲ್ಲಿ ಗೋಚರಿಸಲಿವೆ. ಇನ್ನು ದೇಶದ ಕೆಲವು ಸ್ಥಳಗಳಲ್ಲಿಯೂ ಗ್ರಹಣ ದರ್ಶನವಾಗಲಿದೆ. ಇನ್ನು ಭಾರತದಲ್ಲಿ ಈ ಗ್ರಹಣವು ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ. ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾದಲ್ಲಿ ಈ ಗ್ರಹಣ ಗೋಚರವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.