Solar Eclipse 2022: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಆದರೆ ದೀಪಾವಳಿಯ ಮರುದಿನ ವರ್ಷದ ಕೊನೆಯ ಸೂರ್ಯಗ್ರಹಣ ಬೀಳಲಿದೆ. ಅಕ್ಟೋಬರ್ 25 ರಂದು ಸಂಭವಿಸಲಿರುವ ಈ ಸೂರ್ಯಗ್ರಹಣವನ್ನು ಕೇತು ಖಗ್ರಾಸ ಸೂರ್ಯಗ್ರಹಣ ಅಥವಾ ಖಂಡಗ್ರಾಸ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಗ್ರಹಣದ ಸಮಯ, ಆ ಸಂದರ್ಭದಲ್ಲಿ ಮಾಡಬೇಕಾದ ಪೂಜೆಗಳು, ಅವುಗಳ ವಿಧಾನ ಮತ್ತು ಗ್ರಹಣ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.
ಇದನ್ನೂ ಓದಿ: Surya Grahan 2022: ಒಂದೇ ಮಾಸದಲ್ಲಿ 2 ಗ್ರಹಣ, ಮಹಾಭಾರತ ಯುದ್ಧದಂತಹ ಸ್ಥಿತಿ ನಿರ್ಮಾಣ...ಎಚ್ಚರ!
ಅಕ್ಟೋಬರ್ 25 ರಂದು ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣವು ಯುರೋಪ್, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ವಿವಿಧ ಭಾಗಗಳಲ್ಲಿ ಗೋಚರಿಸಲಿವೆ. ಇನ್ನು ದೇಶದ ಕೆಲವು ಸ್ಥಳಗಳಲ್ಲಿಯೂ ಗ್ರಹಣ ದರ್ಶನವಾಗಲಿದೆ. ಇನ್ನು ಭಾರತದಲ್ಲಿ ಈ ಗ್ರಹಣವು ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ. ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾದಲ್ಲಿ ಈ ಗ್ರಹಣ ಗೋಚರವಾಗಲಿದೆ.
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ಸ್ವಲ್ಪ ಸಮಯದವರೆಗೆ ತಡೆಯುವುದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:29 ಕ್ಕೆ ಪ್ರಾರಂಭವಾದರೆ, ಮುಂಬೈನಲ್ಲಿ ಸೂರ್ಯಗ್ರಹಣವು ಸಂಜೆ 4:49 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈ ಎರಡಕ್ಕೂ ಕ್ರಮವಾಗಿ 1 ಗಂಟೆ 13 ನಿಮಿಷಗಳು ಮತ್ತು 1 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರವಾಗಲಿದೆ. ಕೋಲ್ಕತ್ತಾದಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:52 ಕ್ಕೆ ಪ್ರಾರಂಭವಾಗುತ್ತದೆ. ಚೆನ್ನೈನಲ್ಲಿ ಸಂಜೆ 5:14 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕರ್ನಾಟಕದ ಉಡುಪಿಯಲ್ಲಿ ಗ್ರಹಣ ಸ್ಪರ್ಶ ಸಂಜೆ 5:08 ರಿಂದ ಗ್ರಹಣ ಮೋಕ್ಷ ಸಂಜೆ 6:29ರವರೆಗೆ ಇರಲಿದೆ.
ಇದನ್ನೂ ಓದಿ: Dhanatrayodashi 2022: ಧನತ್ರಯೋದಶಿಯ ದಿನ ಖರೀದಿಗಾಗಿ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗಗಳು
ತುಲಾ, ವೃಶ್ಚಿಕ, ಮೀನ, ವೃಷಭ, ಕರ್ಕಾಟಕ ರಾಶಿಯವರಿಗೆ ಗ್ರಹಣದ ಅರಿಷ್ಠ ಪ್ರಭಾವವಿದ್ದರೆ, ಕುಂಭ, ಮೇಷ, ಮಿಥುನ, ಕನ್ಯಾ ರಾಶಿಯವರಿಗೆ ಮಧ್ಯಮ ಪ್ರಭಾವವಿರುತ್ತದೆ. ಇನ್ನು ಗ್ರಹಣದ ದಿನದಂದು ಉಪಹಾರ ಮಾತ್ರ ತೆಗೆದುಕೊಳ್ಳಬೇಕು. ಭೋಜನ ನಿಷಿದ್ಧವಾಗಿರುತ್ತದೆ. ಉಪಹಾರವನ್ನುಮಧ್ಯಾಹ್ನ 2 ಗಂಟೆಯ ಮುಂಚಿತವಾಗಿ ಸೇವನೆ ಮಾಡಬೇಕು. ಗ್ರಹಣ ಮೋಕ್ಷ ರಾತ್ರಿ 7 ರ ಸಂಭವಿಸಲಿದ್ದು, ಆ ಬಳಿಕ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ವ್ಯಕ್ತಿಗಳು ಆಹಾರ ಸೇವನೆ ಮಾಡಬಹುದು. ಇನ್ನು ಈ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ - ತಪ, ಅನುಷ್ಠಾನ, ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ. ಇನ್ನು ಮುಖ್ಯವಾದ ವಿಚಾರವೆಂದರೆ ಗ್ರಹಣ ಹಿಡಿಯುವ ಮುನ್ನ ಮತ್ತು ಮುಗಿದ ನಂತರ ಸ್ನಾನ ಮಾಡಲೇಬೇಕು. ಆ ಬಳಿಕ ಆಹಾರ ಸೇವನೆ ಮಾಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.