ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್ಶಾ ನಗರದಲ್ಲಿ ಭಾನುವಾರ ರಾವಲ್ಪಿಂಡಿಗೆ ಹೋಗುವ ರೈಲಿನ ಹಲವಾರು ಬೋಗಿಗಳು ಹಳಿತಪ್ಪಿದ ನಂತರ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್ಪ್ರೆಸ್ ರೈಲು ನವಾಬ್ಶಾ ಜಿಲ್ಲೆಯ ಸರ್ಹರಿ ರೈಲು ನಿಲ್ದಾಣದ ಬಳಿ ಹಳಿತಪ್ಪಿದೆ.
Pakistan flour crisis : ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಗೋಧಿ ಮತ್ತು ಇತರೆ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಕರಾಚಿಯಲ್ಲಿ ಪ್ರತಿ ಕಿಲೋಗ್ರಾಂಗೆ ಹಿಟ್ಟಿನ ಬೆಲೆ 140 ರೂ.ನಿಂದ 160 ರೂ.ಗೆ ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟು 1,500 ರೂ. ರಂತೆ, 20 ಕೆಜಿ ಹಿಟ್ಟನ್ನು 2,800 ರೂ.ಗೆ ಮಾರಾಟಮಾಡಲಾಗುತ್ತಿದೆ. ಪಂಜಾಬ್ ಪ್ರಾಂತ್ಯದ ಗಿರಣಿ ಮಾಲೀಕರು ಹಿಟ್ಟಿನ ಬೆಲೆಯನ್ನು ಕಿಲೋಗ್ರಾಂಗೆ 160 ರೂ.ಗೆ ಹೆಚ್ಚಿಸಿದ್ದಾರೆ.
ಪಾಕಿಸ್ತಾನವು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಭೀಕರ ಪ್ರವಾಹವನ್ನು ಅನುಭವಿಸುತ್ತಿದೆ ಮತ್ತು ದಿ ನ್ಯೂಸ್ ಇಂಟರ್ನ್ಯಾಷನಲ್ ಪ್ರಕಾರ, ಇದು ದೇಶದಲ್ಲಿ 5.7 ಮಿಲಿಯನ್ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ದಕ್ಷಿಣ ಸಿಂಧ್ ಪ್ರಾಂತ್ಯವನ್ನು ಪಾಕಿಸ್ತಾನದಲ್ಲಿ ಪ್ರತ್ಯೇಕ ಸಿಂಧುದೇಶನ್ನಾಗಿ ಮಾಡುವ ಸಲುವಾಗಿ ಜಿಎಂ ಸೈಯದ್ ಬೆಂಬಲಿಗರು ರ್ಯಾಲಿಯನ್ನು ನಡೆಸಿ ಪ್ರಧಾನಿ ಮೋದಿ (ನರೇಂದ್ರ ಮೋದಿ) ಮತ್ತು ಇತರ ವಿಶ್ವ ನಾಯಕರ ಸಹಾಯವನ್ನು ಕೋರಿದರು.
ಪಾಕಿಸ್ತಾನವು ದೀರ್ಘಕಾಲದವರೆಗೆ ಯುದ್ಧ ಅಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ನರಮೇಧದಲ್ಲಿ ಭಾಗಿಯಾಗಿದೆ ಆದರೆ ಬಲೂಚಿಸ್ತಾನ್ ಮತ್ತು ಸಿಂಧ್ನಲ್ಲಿ ಇತ್ತೀಚೆಗೆ ಚಿತ್ರಿಸಲಾದ ಅನಾಗರಿಕತೆ ಮತ್ತು ಅಮಾನವೀಯತೆಯ ಸಂಗತಿಗಳು ಅತ್ಯಂತ ಆಘಾತಕಾರಿಯಾಗಿವೆ. ಬಲೂಚಿಸ್ತಾನದಿಂದ ಸಾವಿರಾರು ಬಲೂಚ್ ರಾಷ್ಟ್ರೀಯತಾವಾದಿ ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ.
1971 ರಲ್ಲಿ ಭಾರತವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು ಬಂಗಾಳದೇಶಕ್ಕೆ ಸಹಾಯ ಮಾಡಿತ್ತು. ಈಗ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು ಸಿಂಧ್ ಸಮುದಾಯಕ್ಕೆ ನವದೆಹಲಿ ಸಹಕರಿಸಬೇಕು ಎಂದು ಜಾಫರ್ ಹೇಳಿದರು.
ನಮೃತ ಚಂದಾನಿ ಅವರು ಲಾರ್ಕಾನಾದ ಬಿಬಿ ಆಸಿಫಾ ದಂತ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ನಮ್ರತಾ ಅವರ ದೇಹವು ಹಾಸ್ಟೆಲ್ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದಿತ್ತು ಮತ್ತು ಅವರ ಕುತ್ತಿಗೆಗೆ ಹಗ್ಗ ಸುತ್ತುಕೊಂಡಿತ್ತು.
ಸಿಂಧ್ ಪ್ರಾಂತ್ಯದ ಶಾಲೆಯಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಾಂಶುಪಾಲರ ವಿರುದ್ಧ ಧರ್ಮನಿಂದೆಯ ಪ್ರಕರಣ ದಾಖಲಾದ ನಂತರ ಭಾನುವಾರ ಪ್ರಾಂತ್ಯದ ಹಲವಾರು ಪ್ರದೇಶಗಳಲ್ಲಿ ಗಲಭೆಗಳು ನಡೆದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.