ಸ್ವಾಮೀಜಿ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಆದರೆ, ಅವರು ಮಠದಲ್ಲಿಯೇ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರಿಂದ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನವನ್ನು ನಿನ್ನೆಯಿಂದ ಕೈಗೊಳ್ಳಲಾಗಿದೆ. ಅವರ ದೇಹದಲ್ಲಿ ಪ್ರೋಟೀನ್ ಅಂಶ ಕೂಡ ಜಾಸ್ತಿಯಾಗಿದೆ ಎಂದು ಡಾ.ಪರಮೇಶ್ ಹೇಳಿದರು.
ಡಾ.ರೇಲಾ ಅವರು ಕಳೆದ ಎರಡು ವರ್ಷದ ಹಿಂದೆ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದ್ದರು. ಶುಕ್ರವಾರವೂ ಅವರೇ ಶ್ರೀಗಳ ತಪಾಸಣೆ ಮಾಡಿದ್ದು, ಇಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.