ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ಮತ ಬೇಟೆ. ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ರೌಂಡ್ಸ್. ಗ್ರಾಮೀಣ ಕ್ಷೇತ್ರದ ಜನರಿಗೆ ಕುಕ್ಕರ್, ಮಿಕ್ಸರ್ ಕೊಡುವ ನಾಟಕ ನಡೆಯಲ್ಲ. ಗ್ರಾಮೀಣ ಭಾಗದಲ್ಲಿ ಕಮಲ ಅರಳುತ್ತೆ ಎಂದು ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಜಾರಕಿಹೊಳಿ.
ಮಾಜಿ ಸಚಿವ ರಮೇಶ್ ಜಾರಕಿಹೋಳಿ ದೆಹಲಿಗೆ ಭೇಟಿ ನೀಡಿದ್ದು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಒತ್ತಾಯ ಮಾಡಲಿದ್ದಾರೆ..
ಇಂದು ಅಮಿತಾ ಶಾ ಜೊತೆ ಸಾಹುಕಾರ್ ಸಿಡಿ ಹೋಮ್ವರ್ಕ್. ಸಿಡಿ ವಿಚಾರವಾಗಿ ಶಾ ಜೊತೆ ರಮೇಶ್ ಮಹತ್ವದ ಮೀಟಿಂಗ್
ಎಲ್ಲರ ಚಿತ್ತ ಅಮಿತ್ ಶಾ-ರಮೇಶ್ ಜಾರಕಿಜೊಳಿ ಮೀಟಿಂಗ್ನತ್ತ . ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಾಹುಕಾರ್ ಸಿಡಿ.
ಚುನಾವಣೆ ಹೊಸ್ತಿಲಲ್ಲಿ ಜಾರಕಿಹೊಳಿ ಸಿಡಿ ಷಡ್ಯಂತ್ರದ ಗಲಾಟೆ ಈಗ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಸಿಡಿ ಫ್ಯಾಕ್ಟರಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ, ವಿಡಿಯೋ, ಆಡಿಯೋ ಇರುವ ದಾಖಲೆ ಸಮೇತ ದೆಹಲಿಗೆ ಹಾರಿದ್ದಾರೆ. ಶತಾಯಗತಾಯ ಡಿಕೆಶಿಯನ್ನ ಜೈಲಿಗೆ ಕಳಿಸುತ್ತೇನೆ ಅಂತಿರುವ ಸಾಹುಕಾರ್, ಶಾ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ರಮೇಶ್ ಜಾರಕಿಹೊಳಿ ಅವರು ನನ್ನ ಜತೆಗೆ ಎರಡು ದಿನಗಳಿಂದ ಇದ್ದದ್ದು ನಿಜ. ಆದರೆ ಹಲವಾರು ಕಾರ್ಯಕ್ರಮಗಳು ಇದ್ದರಿಂದ ಅವರ ಜತೆಗೆ ಮಾತುಕತೆ ಆಗಿಲ್ಲ. ಸಿಡಿ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಡಿಕೆಶಿಯನ್ನ ಮುಗಿಸ್ತಿವಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಯಾರು ಯಾರನ್ನೂ ಮುಗಿಸೋಕೆ ಆಗಲ್ಲ ಎಂದು ರಮೇಶ್ ಜಾರಕಿಹೊಳಿಗೆ ತುಮಕೂರಿನಲ್ಲಿ ಶಾಸಕ ಜಮೀರ್ ಟಾಂಗ್ ನೀಡಿದ್ರು.
ಮೊದಲು ರಾಜರನ್ನು ಸಿಕ್ಕಿಸಲು ವಿಷಕನ್ಯೆಯರು ಇದ್ದರು. ಈಗ ಜಾರಕಿಹೊಳಿಯನ್ನು ಸಿಡಿ ಷಡ್ಯಂತ್ರದಲ್ಲಿ ಸಿಕ್ಕಿ ಹಾಕಿಸಿದ್ರು ಎಂದು ರಮೇಶ್ ಜಾರಕಿಹೊಳಿ ಪರ ಶಾಸಕ ಕುಮಠಳ್ಳಿ ಬ್ಯಾಟಿಂಗ್ ಬೀಸಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
"ನಾನು 6 ಬಾರಿ ಶಾಸಕನಾಗಿ ಈಗ 7 ನೆ ಬಾರಿ ಶಾಸಕನಾಗಿದ್ದೇನೆ.8 ನೆ ಬಾರಿ ಶಾಸಕನಾಗುವ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇನೆ.ಮುಂದಿನ ಬಾರಿ ಶಾಸಕನಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ.ಆದರೆ ಇದೆ ಬಾರಿ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಆದರೆ ಆ ಮಹಾನಾಯಕನಿಗೆ ಚಾಲೆಂಜ ಮಾಡಲಿಕ್ಕೆ ನಾನು ಚುನಾವಣೆ ನಿಲ್ಲುತಿದ್ದೇನೆ
ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಹೇಳಿಕೆ ವಿರುದ್ಧ ಕೈ ಪಡೆ ಸಮರ ಸಾರಿದೆ.. BJP ನಾಯಕರ ವಿರುದ್ಧ ʻಕೈʼ ನಾಯಕರು ದೂರು ನೀಡಲಿದ್ದಾರೆ.. ಮತದಾರರನ್ನು ಸೆಳೆಯಲು ಅಕ್ರಮ ಮಾರ್ಗ ಎಂದು ದೂರು ನೀಡಲಿದ್ದಾರೆ..
ನಿನ್ನೆ ಬೆಳಗಾವಿಯ ಸುಳೇಭಾವಿ ಗ್ರಾಮದಲ್ಲಿ ಬೃಹತ್ ಸಮಾವೇಶ ನಡೆದಿದೆ. ಜನರನ್ನು ಕರೆತಂದ ವಾಹನ ಚಾಲಕರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಹಣ ಕೊಟ್ಟು ಸಮಾವೇಶಕ್ಕೆ ಜನ ಸೇರಿಸಿದ್ರಾ ರಮೇಶ್ ಜಾರಕಿಹೊಳಿ? ಅನ್ನೋ ಚರ್ಚೆ ಶುರುವಾಗಿದೆ.
ಮೋದಿ ರಾಜ್ಯಕ್ಕೆ ಎಷ್ಟು ಸಾರಿ ಬರ್ತಾರೆ ಅಷ್ಟು ಒಳ್ಳೆಯದು. ಮೋದಿ ಕರ್ನಾಟಕ ಅಷ್ಟೇ ಅಲ್ಲ ದೇಶಕ್ಕೆ ಪ್ರಭಾವ ಬೀರಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
17 ಜನ ಶಾಸಕರ ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ್ ನನ್ನ ಅಂದಾಜು ತಪ್ಪು ಮಾತನಾಡಿರಬೇಕು. ಅಂತಹ ಮಾತಾಡುವ ಮನುಷ್ಯ ಅಲ್ಲ. ಈ ಬಗ್ಗೆ ನಮ್ಮ ಮಿತ್ರರು ಈಗಾಗಲೇ ಅವರಿಗೆ ಉತ್ತರ ನೀಡಿದ್ದಾರೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.