ಭಾರತೀಯ ರೇಲ್ವೆ ಇಲಾಖೆಯ ಮೊದಲ ಪ್ರಿಬಿಡ್ ಸಭೆಯಲ್ಲಿ ಒಟ್ಟು 16 ದೊಡ್ದ ಕಂಪನಿಗಳು ಭಾಗಿಯಾಗಿವೆ. ಭಾರತ ಸರ್ಕಾರದ ಒಟ್ಟು 3 ಪ್ರೈವೇಟ್ ಸೆಕ್ಟರ್ ಯುನಿಟ್ ಗಳೂ ಸೇರಿದಂತೆ ಆಸ್ಟ್ರೇಲಿಯದ ಸಂಸ್ಥೆಯೊಂದಕ್ಕೆ ರೈಲು ಹಳಿಗಳ ಮೇಲೆ ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲು ರೇಲ್ವೆ ಇಲಾಖೆ ಆಸಕ್ತಿ ತೋರಿದೆ ಎನ್ನಲಾಗಿದೆ.
ಖಾಸಗಿ ಕಂಪನಿಗಳ ಪ್ರಯಾಣಿಕರ ರೈಲುಗಳು ತನ್ನ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಯೋಜನೆಯನ್ನು ಔಪಚಾರಿಕವಾಗಿ ಮುಂದುವರಿಸಲು ಈ ತಿಂಗಳ ಆರಂಭದಲ್ಲಿ ದೇಶಾದ್ಯಂತ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ರೈಲ್ವೆ ಪ್ರಸ್ತಾಪಗಳನ್ನು ಆಹ್ವಾನಿಸಿದೆ.
ಭಾರತೀಯ ರೈಲ್ವೆ ಇಲಾಖೆ ತನ್ನ ನೆಟ್ವರ್ಕ್ನಲ್ಲಿ ಖಾಸಗಿ ರೈಲುಗಳನ್ನು ಓಡಿಸುವ ದಿಕ್ಕಿನಲ್ಲಿ ಒಂದು ಒಂದು ಹೆಜ್ಜೆ ಮುಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 2023 ರ ಹೊತ್ತಿಗೆ ಖಾಸಗಿ ರೈಲುಗಳು ರೈಲ್ವೆ ಹಳಿಗಳಲ್ಲಿ ಸಂಚರಿಸಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.