ರೈಲ್ವೆ ಯಾವುದೇ ರೀತಿಯಲ್ಲೂ ಖಾಸಗೀಕರಣಗೊಳ್ಳುವುದಿಲ್ಲ: ರೈಲ್ವೆ ಸಚಿವರ ಸ್ಪಷ್ಟನೆ

ದೇಶದಲ್ಲಿ ಖಾಸಗಿ ರೈಲು ಚಲಿಸುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ. ಉದ್ಯೋಗಾವಕಾಶವು ಹೆಚ್ಚಾಗುತ್ತದೆ ಎಂದು ರೈಲ್ವೆ ಸಚಿವರು ತಿಳಿಸಿದರು.  

Last Updated : Jul 9, 2020, 10:37 AM IST
ರೈಲ್ವೆ ಯಾವುದೇ ರೀತಿಯಲ್ಲೂ ಖಾಸಗೀಕರಣಗೊಳ್ಳುವುದಿಲ್ಲ: ರೈಲ್ವೆ ಸಚಿವರ ಸ್ಪಷ್ಟನೆ title=

ನವದೆಹಲಿ: ಖಾಸಗಿ ಪ್ಲೇಯರ್ ಸಹಾಯದಿಂದ 109 ಮಾರ್ಗಗಳಲ್ಲಿ 151 ಆಧುನಿಕ ರೈಲುಗಳನ್ನು ಓಡಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ರೈಲ್ವೆ ಖಾಸಗೀಕರಣದ ಬಗ್ಗೆ ಚರ್ಚೆಗಳು ಜೋರಾಗಿವೆ. ಇಂತಹ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಸರ್ಕಾರ ಭಾರತೀಯ ರೈಲ್ವೆಯನ್ನು (Indian Railways) ಖಾಸಗೀಕರಣಗೊಳಿಸಲು ಹೊರಟಿದೆ ಎಂದು ಹೇಳಲಾಗುತ್ತಿದೆ.

ರೈಲ್ವೆ ಖಾಸಗೀಕರಣದ ಸುದ್ದಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್  (Piyush Goyal) ರೈಲ್ವೆ ಖಾಸಗೀಕರಣಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಕೆಲವು ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲುಪ್ರೈವೇಟ್ ಪ್ಲೇಯರ್ ಗಳ ಅನುಮೋದನೆಯು ರೈಲ್ವೆಯ ಸೇವೆಯನ್ನು ಸುಧಾರಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಆದರೆ ರೈಲ್ವೆ ಯಾವುದೇ ರೀತಿಯಲ್ಲೂ ಖಾಸಗೀಕರಣಗೊಳ್ಳುವುದಿಲ್ಲ. ರೈಲ್ವೆಯ ಎಲ್ಲಾ ಸೇವೆಗಳು ಸಾಮಾನ್ಯವಾಗಿ ಚಾಲನೆಯಲ್ಲಿದೆ ಎಂದು ರೈಲ್ವೆ ಸಚಿವರು ಹೇಳಿದರು.

ರೈಲ್ವೆಯ ಪ್ರಸ್ತುತ ಚಾಲನೆಯಲ್ಲಿರುವ ಸೇವೆಗಳಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಆಧುನಿಕ ಸೌಲಭ್ಯಗಳನ್ನು ಹೊಂದಿರುವ 151 ಹೊಸ ರೈಲುಗಳನ್ನು ಖಾಸಗಿ ಭಾಗವಹಿಸುವಿಕೆಯಿಂದ ನಡೆಸಲಾಗುವುದು ಎಂದು ಪಿಯೂಷ್ ಗೋಯಲ್ ತಮ್ಮ ಟ್ವೀಟ್ ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ರೈಲುಗಳಿಂದ ರೈಲ್ವೆ ಖಾಸಗೀಕರಣಗೊಳ್ಳುವುದಿಲ್ಲ, ಆದರೆ ಈ ಭಾಗವಹಿಸುವಿಕೆಯು ಆಧುನಿಕ ಸೌಲಭ್ಯಗಳು, ಭದ್ರತೆ ಸೇರಿದಂತೆ ಆಸನಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ, ಇದು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದವರು ವಿವರಿಸಿದ್ದಾರೆ.

ಉದ್ಯೋಗ ಹೆಚ್ಚಾಗುತ್ತದೆ -
ರೈಲ್ವೆ ಕಾರ್ಯಾಚರಣೆಯಲ್ಲಿ ಖಾಸಗಿ ವಲಯದ ಆಗಮನದೊಂದಿಗೆ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು, ರೈಲಿನಲ್ಲಿ ವಿಮಾನ ಪ್ರಯಾಣದ ಅನುಭವ ಸಿಗುವುದು ಮಾತ್ರವಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂದು ರೈಲ್ವೆ ಸಚಿವರು ಹೇಳಿದರು.

ಪೂರೈಕೆಗಿಂತ ಬೇಡಿಕೆ ಹೆಚ್ಚಿರುವ ಆ ಮಾರ್ಗಗಳಲ್ಲಿ ಖಾಸಗಿ ರೈಲುಗಳನ್ನು (Private Trains) ಓಡಿಸಲಾಗುವುದು. ಇದು ಅಸ್ತಿತ್ವದಲ್ಲಿರುವ ರೈಲುಗಳು ಮತ್ತು ಟಿಕೆಟ್‌ಗಳ ಮೇಲೂ ಪರಿಣಾಮ ಬೀರುವುದಿಲ್ಲ. ಆಧುನಿಕ ರೈಲುಗಳನ್ನು ಓಡಿಸುವ ಉದ್ದೇಶ ಆಧುನಿಕ ತಂತ್ರಜ್ಞಾನದಿಂದ ಮೂಲಸೌಕರ್ಯಗಳನ್ನು ಸುಧಾರಿಸುವುದು ಎಂದು ಪಿಯೂಷ್ ಗೋಯಲ್ ಹೇಳಿದರು.

ಕಳೆದ ಕೆಲವು ದಿನಗಳಲ್ಲಿ ರೈಲ್ವೆ ಸಚಿವಾಲಯವು ಕೆಲವು ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. 109 ಮಾರ್ಗಗಳಲ್ಲಿ 151 ಆಧುನಿಕ ರೈಲುಗಳನ್ನು ಓಡಿಸಲು ರೈಲ್ವೆ ಯೋಜಿಸಿದೆ. ಖಾಸಗಿ ವಲಯದಿಂದ ಸುಮಾರು 30,000 ಕೋಟಿ ರೂ. ರೈಲ್ವೆ ಜಾಲದಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆಗೆ ಇದು ಮೊದಲ ಹೆಜ್ಜೆ.

ಕಳೆದ ವರ್ಷವೇ ಐಆರ್‌ಸಿಟಿಸಿ (IRCTC) ಲಕ್ನೋ-ದೆಹಲಿ ತೇಜಸ್ ಎಕ್ಸ್‌ಪ್ರೆಸ್‌ನಿಂದ ಖಾಸಗಿ ರೈಲು ಸೇವೆಯನ್ನು ಪ್ರಾರಂಭಿಸಿತು. ಪ್ರಸ್ತುತ ಐಆರ್‌ಸಿಟಿಸಿ 3 ಖಾಸಗಿ ರೈಲುಗಳನ್ನು ಓಡಿಸುತ್ತಿದೆ, ವಾರಣಾಸಿ-ಇಂದೋರ್ ಮಾರ್ಗದಲ್ಲಿ ಕಾಶಿ-ಮಹಕಲ್ ಎಕ್ಸ್‌ಪ್ರೆಸ್, ಲಕ್ನೋ-ನವದೆಹಲಿ ತೇಜಸ್ ಮತ್ತು ಅಹಮದಾಬಾದ್-ಮುಂಬೈ ತೇಜಸ್ ಎಕ್ಸ್‌ಪ್ರೆಸ್‌ ಓಡಿಸುತ್ತಿದೆ.

Trending News