CSK vs KKR Playing 11: IPL ಎರಡು ಬಾರಿ ವಿಜೇತ ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ತವರು ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಗೆದ್ದ ನಂತರ ಮಾತನಾಡಿದ ಅವರು, 'ನಾವು ಮೊದಲು ಫೀಲ್ಡಿಂಗ್ ಮಾಡಲು ಬಯಸುತ್ತೇವೆ. ಪಿಚ್ ಚೆನ್ನಾಗಿ ಕಾಣುತ್ತಿದೆ
MS Dhoni retirement: ಧೋನಿಯ ಮೇಲೆ ಅಭಿಮಾನಿಗಳಿಗೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂದರೆ, ಕೇವಲ ಧೋನಿಯನ್ನು ನೋಡೋದಕ್ಕೆಂದೇ ಓರ್ವ ಅಭಿಮಾನಿ ತನ್ನ ಬೈಕ್ ಮಾರಿ ಗೋವಾದಿಂದ ಬೆಂಗಳೂರಿಗೆ ಬಂದಿದ್ದ, ಇದೊಂದೇ ಅಲ್ಲ, ಸಾವಿರಾರು ನಿದರ್ಶನಗಳು ನಮಗೆ ಕಾಣ ಸಿಗುತ್ತವೆ. ಆದರೆ ಈ ಮಧ್ಯೆ, ಧೋನಿ ತನ್ನ ಐಪಿಎಲ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವ ಸುಳಿವನ್ನು ನೀಡಿದ್ದಾರೆ.
Richest Captains of IPL: ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಮಾರ್ಚ್ 31 ರಂದು ಪ್ರಾರಂಭವಾಗಿದ್ದು, ಸದ್ಯ ನಡೆಯುತ್ತಿದೆ. ಭಾರೀ ಕ್ರೇಜ್ ಹುಟ್ಟು ಹಾಕಿರುವ ಲೀಗ್’ನ ಬಗ್ಗೆ ನಿಮಗೆ ತಿಳಿಯದ ಕೆಲವು ಸಂಗತಿಗಳಿವೆ. ಇಂದು ನಾವು, ಐಪಿಎಲ್ ಕ್ರಿಕೆಟ್ ಲೋಕದ ಟಾಪ್ 5 ಶ್ರೀಮಂತ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
MS Dhoni Fans: ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ ಎಂದು ತಿಳಿದರೆ ಸಾಕು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಇನ್ನು ಕಳೆದ ಏಪ್ರಿಲ್ 17ರಂದು ನಡೆದ ಸಿ ಎಸ್ ಕೆ vs ಆರ್ ಸಿ ಬಿ ಪಂದ್ಯದಲ್ಲೂ ಇಂತಹ ಅಭಿಮಾನದ ದೃಶ್ಯ ಕಂಡುಬಂದಿತ್ತು. ಓರ್ವ ಸಿಎಸ್’ಕೆ ಅಭಿಮಾನಿ ತನ್ನ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬೈಕ್’ನ್ನು ಮಾರಾಟ ಮಾಡಿ ಬಂದಿದ್ದನಂತೆ.
RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯದಲ್ಲಿ ಜಿಯೋಸಿನಿಮಾ ವೀಕ್ಷಕರ ವೀಕ್ಷಣೆ ದಾಖಲೆಯನ್ನು ಮುರಿದಿದೆ.
Virat Kohli Hugs MS Dhoni: ಆರ್ ಸಿ ಬಿ ಮತ್ತು ಸಿ ಎಸ್ ಕೆ ನಡುವಿನ ಬ್ಲಾಕ್ ಬಸ್ಟರ್ ಹಣಾಹಣಿಗೂ ಮುನ್ನ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ತರಬೇತಿ ಅವಧಿಯಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. 2011ರ ವಿಶ್ವಕಪ್ ಗೆದ್ದ ಭಾರತದ ಮಾಜಿ ನಾಯಕನನ್ನು ಸ್ಟಾರ್ ಬ್ಯಾಟರ್ ಕೊಹ್ಲಿ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ.
Pakistan vs New Zealand 2nd T20I: ಬಾಬರ್ ಅಜಮ್ ಅವರು ಭಾರತದ ಮಾಜಿ ನಾಯಕ ಮತ್ತು ಅನುಭವಿ ವಿಕೆಟ್ ಕೀಪರ್ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನವು 42 ನೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಗೆದ್ದುಕೊಂಡಿದೆ. ಇವರು ಇದುವರೆಗೆ 68 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ನಾಯಕತ್ವ ವಹಿಸಿದ್ದು, ಈ ಪೈಕಿ 42 ಪಂದ್ಯಗಳನ್ನು ಗೆದ್ದಿದ್ದಾರೆ.
CSK vs RCB: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಸಿ ಎಸ್ ಕೆ ತಂಡದ ನಾಯಕ ಎಂ ಎಸ್ ಧೋನಿ ತಮ್ಮ ನಿವೃತ್ತಿಯನ್ನು ಘೋಷಿಸಲಿದ್ದಾರೆ. ಮೇ 14ರ ಬಳಿಕ ಈ ವಿಚಾರ ಕನ್ಫರ್ಮ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ನಾಳೆ ಅಂದರೆ ಏಪ್ರಿಲ್ 17ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ.
MS Dhoni: ಎಂ ಎಸ್ ಧೋನಿ ಎಂದರೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಕೀರ್ತಿ ಕ್ಯಾಪ್ಟನ್ ಕೂಲ್’ ಗೆ ಸೇರುತ್ತದೆ. ಅಷ್ಟೇ ಅಲ್ಲದೆ ಕ್ರಿಕೆಟ್’ನ ಮೂರು ಸ್ವರೂಪದಲ್ಲೂ ಚಾಂಪಿಯನ್ ಪ್ರಶಸ್ತಿ ಗೆದ್ದ ಏಕೈಕ ನಾಯಕ ಇವರು. ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ.
Ben Stokes Injury Update: ಚೆನ್ನೈ ತಂಡ ಐಪಿಎಲ್-2023ರಲ್ಲಿ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದಿದ್ದರೆ ಎರಡು ಪಂದ್ಯಗಳು ಸೋತಿವೆ. ಚೆನ್ನೈ ತನ್ನ ತವರು ನೆಲ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸಿತ್ತು. ಈಗ ತಂಡವು ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಪ್ರಿಲ್ 17 ರಂದು ಆಡಬೇಕಾಗಿದೆ.
Indian Premier League, CSK Team: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದರೆ ಎರಡರಲ್ಲಿ ಸೋತಿದೆ. ಈ ತಂಡದ ಆಟಗಾರನೊಬ್ಬ ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾನೆ.
Jio cinema IPL live : ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಚ್ ವೇಳೆ ಎಂಎಸ್ ಧೋನಿ ಸಿಕ್ಸರ್ ಸಿಡಿಸಿದಾಗ ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ದಾಟಿದೆ. ಪ್ರಸ್ತುತ 2023ರ ಐಪಿಎಲ್ ಸೀಸನ್ ನಲ್ಲಿ ಇದು ಅತಿ ಹೆಚ್ಚು ವೀಕ್ಷಕರ ದಾಖಲೆ ಆಗಿದೆ. ಕೊನೆಯ ಎಸೆತದವರೆಗೂ ವೀಕ್ಷಕರು ಉಸಿರು ಬಿಗಿಹಿಡಿದುಕೊಂಡು ಪಂದ್ಯದ ಏರಿಳಿತಗಳನ್ನು ವೀಕ್ಷಿಸಿದರು.
Sunil Gavaskar on MS Dhoni: ಭಾರತದಲ್ಲಿ ಸದ್ಯ ಐಪಿಎಲ್ 16 ನೇ ಸೀಸನ್ ನಡೆಯುತ್ತಿದೆ. ಈ ಕ್ರೇಜ್ ಮಧ್ಯೆ, ಸುನಿಲ್ ಗವಾಸ್ಕರ್ ಅನುಭವಿ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಧೋನಿ ಪ್ರಸ್ತುತ ಐಪಿಎಲ್ 16 ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಸಿ ಎಸ್ ಕೆ ತಂಡದಲ್ಲಿ 200 ಪಂದ್ಯಗಳನ್ನು ಓರ್ವ ನಾಯಕನಾಗಿ ಮುನ್ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
CSK vs RR: ಟಾಸ್ ಗೆದ್ದ ಧೋನಿ ಮೊದಲು ರಾಜಸ್ಥಾನವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸಂದರ್ಭದಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿದರು. ಗೆಲುವಿನ ಗುರಿ ಬೆನ್ನತ್ತಿದ್ದ ಚೆನ್ನೈ 20 ಓವರ್ ಅಂತ್ಯಕ್ಕೆ 172 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು, ತವರಿನಲ್ಲಿ ಸೋಲುಂಡ ನೋವನ್ನು ಹೊರತು ಪಡಿಸಿದರೆ ಚೆನ್ನೈ ತಂಡ ಅದ್ಭುತವಾಗಿ ಆಟವಾಡಿದ್ದಾರೆ.
Most captaincy in IPL: 41 ವರ್ಷದ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಐಪಿಎಲ್ನಲ್ಲಿ ಇದುವರೆಗೆ 214 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (ಆರ್ಪಿಎಸ್) ತಂಡದ ನಾಯಕರಾಗಿ 14 ಬಾರಿ ಮತ್ತು 200 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
Chennai Super Kings, IPL 2023: ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯ ಏಪ್ರಿಲ್ 12 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯಲಿದೆ. ತಂಡದ ಇಬ್ಬರು ಆಟಗಾರರು ಗಾಯದ ಕಾರಣ ಮುಂದಿನ ಪಂದ್ಯದಲ್ಲಿ ಆಡುವುದು ಕಷ್ಟ ಎಂದು ಹೇಳಲಾಗುತ್ತಿದೆ.
CSK vs MI: ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈಗೆ ವೇಗದ ಆರಂಭ ನೀಡಲು ಯತ್ನಿಸಿ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದರು. ಬಳಿಕ ಇಶಾನ್ ಕಿಶನ್ (32) ಅವರೊಂದಿಗೆ 38 ರನ್ಗಳ ಜೊತೆಯಾಟವನ್ನಾಡಿದ್ದಾರೆ.
MS Dhoni Net Worth: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರಬಹುದು, ಆದರೆ ಅವರ ಬ್ರ್ಯಾಂಡ್ ಮೌಲ್ಯವು ಇನ್ನೂ ಹಾಗೇ ಇದೆ. ಅವರು 38 ಕೋಟಿ ತೆರಿಗೆ ಪಾವತಿಸಿದ್ದಾರೆ. ಮತ್ತೆ ಜಾರ್ಖಂಡ್ನ ಅತಿದೊಡ್ಡ ತೆರಿಗೆದಾರರಾಗಿ ಹೊರಹೊಮ್ಮಿದ್ದಾರೆ.
ಐಪಿಎಲ್ ನ ಹಿಂದಿನ ಋತುವಿನಲ್ಲಿ ಗಾಯಕ್ವಾಡ್ ಅವರ ಅತ್ಯುತ್ತಮ ಪ್ರದರ್ಶನವು ಅವರಿಗೆ ಭಾರತೀಯ ತಂಡದಲ್ಲಿ ಸ್ಥಾನವನ್ನು ತಂದುಕೊಟ್ಟಿತು,ಅವರು 2021 ರಲ್ಲಿ ಶ್ರೀಲಂಕಾದಲ್ಲಿ ಟಿ೨೦ ಸರಣಿಯಲ್ಲಿ ಪಾದಾರ್ಪಣೆ ಮಾಡಿದರು, ನಂತರ 2022 ರಲ್ಲಿ ಅವರ ಚೊಚ್ಚಲ ಏಕದಿನ ಪಂದ್ಯವನ್ನು ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.