Money Plants Vastu Tips: ಮನಿ ಪ್ಲಾಂಟ್ ಮನೆಗೆ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ. ಆದರೆ, ವಾಸ್ತು ಶ್ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಖರೀದಿಸಿ ನೆಡುವುದರಿಂದ ಅದೃಷ್ಟ ಬರುತ್ತದೋ ಅಥವಾ ಬೇರೆಯವರಿಗೆ ಉಡುಗೊರೆಯಾಗಿ ಪಡೆದ ಮನಿ ಪ್ಲಾಂಟ್ ಇದ್ದರೆ ಅದೃಷ್ಟವೋ ಇಂದು ತಿಳಿಯೋಣ...
ಸಸ್ಯಗಳು ಪರಿಸರವನ್ನು ಸ್ವಚ್ಛವಾಗಿರಿಸುವುದರ ಜೊತೆಗೆ ಕೆಲವು ಸಸ್ಯಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮನೆಯಿಂದ ಗ್ರಹಗಳ ಕೆಟ್ಟ ಪರಿಣಾಮಗಳು ಮತ್ತು ನಕಾರಾತ್ಮಕತೆಯನ್ನು ನಾಶಪಡಿಸುತ್ತವೆ (Spiritual News In Kannada).
ನವರಾತ್ರಿಯ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು, ಕಾರು ಅಥವಾ ಮನೆ ಖರೀದಿಸುವುದು ತುಂಬಾ ಶುಭ. ಆದರೆ ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಅಂತಹ ಕೆಲವು ಸಸ್ಯಗಳಿವೆ, ಅದನ್ನು ನೆಡುವುದರಿಂದ, ದುರ್ಗೆಯ ಜೊತೆಗೆ, ಲಕ್ಷ್ಮಿದೇವಿಯ ಆಶೀರ್ವಾದವು ನಿಮ್ಮ ಮನೆಯಲ್ಲಿ ಸುರಿಸಿ ನಿಮ್ಮ ಸಂಪತ್ತು ತುಂಬುತ್ತದೆ. ನಮ್ಮ ಅದೃಷ್ಟವನ್ನು ಬದಲಾಯಿಸುವ ಈ ಗಿಡಗಳು ಯಾವವು ಇಲ್ಲಿದೆ ನೋಡಿ..
ವಾಸ್ತು ಶಾಸ್ತ್ರದಲ್ಲಿ, ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕುವುದು ಸೂಕ್ತ ಎನ್ನುತ್ತಾರೆ. ಈ ದಿಕ್ಕನ್ನು ವಿಘ್ನ ವಿನಾಶಕ ಸ್ವಾಮಿ ಗಣೇಶನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕುವುದು ಅತ್ಯಂತ ಶುಭ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.