ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಸಚಿವ ಮಾರ್ಕ್ ಟಿ ಎಸ್ಪರ್ ಅವರು ತಮ್ಮ ಸಹವರ್ತಿಗಳಾದ ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ 2+2 ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.
ಭಾರತ-ಚೀನಾದ ನಡುವೆ ಇತ್ತೀಚಿಗೆ ನಡೆದ ಸಂಘರ್ಷದ ವಿಚಾರವಾಗಿ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಚೀನಾ ವರ್ತನೆಗೆ ಭಾರತ ತಕ್ಕ ಪಾಠವನ್ನು ಕಲಿಸಿದೆ ಎಂದು ಹೇಳಿದರು.
ಮಂಗಳವಾರ ರಾತ್ರಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ನವದೆಹಲಿಗೆ ಆಗಮಿಸಿದರು.ಈ ಹಿನ್ನಲೆಯಲ್ಲಿ ಯುಎಸ್ ರಾಜ್ಯ ಇಲಾಖೆ ಒಂದು ಟಿಪ್ಪಣಿಯನ್ನು ಬಿಡುಗಡೆ ಮಾಡಿ ಭಾರತ ಮತ್ತು ಅಮೇರಿಕಾ ದೇಶಗಳು' ನೈಸರ್ಗಿಕ ಕಾರ್ಯತಂತ್ರದ ಪಾಲುದಾರರು' ಎಂದು ವಿವರಿಸಿದೆ.
ಅಮೆರಿಕಾದ ಸ್ಟೇಟ್ ವಿಭಾಗ ಪ್ರಕಟಿಸಿದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ಭಾರತ ತಿರಸ್ಕರಿಸಿದೆ. ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಉಗ್ರಗಾಮಿ ಹಿಂದೂ ಗುಂಪುಗಳ ಜನಸಮೂಹ ದಾಳಿಗಳು ವರ್ಷಪೂರ್ತಿ ನಡೆದಿವೆ ಎಂದು ಉಲ್ಲೇಖಿಸಿರುವ ವರದಿಯನ್ನು ಭಾರತವು ಸಾರಾಸಗಾಟಾಗಿ ತಳ್ಳಿಹಾಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.