ಆಧಾರ್ ಕಾರ್ಡ್ನಲ್ಲಿ, ಹೆಸರು, ಫೋಟೋ, ಜನ್ಮ ದಿನಾಂಕ, ಕಾರ್ಡ್ದಾರರ ವಿಳಾಸ ಮುಂತಾದ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮಾತ್ರವಲ್ಲ, ಇದರಲ್ಲಿ ಪ್ರತಿಯೊಬ್ಬರ ಬೆರಳಚ್ಚು ಮತ್ತು ಕಣ್ಣುಗಳ ರೆಟಿನಾವನ್ನು ಸ್ಕ್ಯಾನ್ ಮಾಡಲಾಗುತ್ತದೆ.
Aadhaar Card Latest News: ಆಧಾರ್ ಬಳಕೆದಾರರಿಗೆ ಮತ್ತೊಮ್ಮೆ ಪ್ರಮುಖ ಸುದ್ದಿ ಪ್ರಕಟವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇತ್ತೀಚೆಗಷ್ಟೇ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಆಧಾರ್ನ ಫೋಟೋಕಾಪಿಗಳ ದುರ್ಬಳಕೆಯನ್ನು ತಡೆಯಲು ದೇಶನ ನಾಗರಿಕರು ಅವುಗಳನ್ನು ಹಂಚಿಕೊಳ್ಳಬಾರದು ಎಂಬ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತ್ತು. ಆದರೆ ಇದೀಗ ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯನ್ನು ಹಿಂದಕ್ಕೆ ಪಡೆದಿದೆ.
Aadhar Card New Rules: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಹೊಸ ಸಲಹೆಗಳನ್ನು ನೀಡಿದೆ. ದುರುಪಯೋಗವನ್ನು ತಡೆಗಟ್ಟಲು ಕೇವಲ ತಮ್ಮ ಆಧಾರ್ ಕಾರ್ಡ್ಗಳ ಮಾಸ್ಕ್ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳಲು ಸರ್ಕಾರ ದೇಶದ ನಾಗರಿಕರಿಗೆ ಮನವಿ ಮಾಡಿಕೊಂಡಿದೆ.
Masked Aadhaar Card: ಈಗ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಸುರಕ್ಷಿತವಾಗಿರಿಸಲು ಮನೆಯಲ್ಲಿ ಕುಳಿತು ಮಾಸ್ಕ್ ಮಾಡಿದ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಈ ಆಧಾರ್ ಕಾರ್ಡ್ನಲ್ಲಿ, ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳು ಮಾತ್ರ ಗೋಚರಿಸುತ್ತವೆ.
ಇದರಲ್ಲಿ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳು ಮಾತ್ರ ಗೋಚರಿಸುತ್ತವೆ. ಅಂದರೆ "xxxx-xxxx" ನಂತಹ ಮೂಲ ಸಂಖ್ಯೆಯ ಮೊದಲ 8 ಅಂಕೆಗಳು ಗೋಚರಿಸುವುದಿಲ್ಲ. ಮಾಸ್ಕೇಡ್ ಆಧಾರ್ನಲ್ಲಿ, ಮೂಲ ಆಧಾರ್ ಸಂಖ್ಯೆಯನ್ನು ಮರೆಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರೂ ಅದನ್ನು ದುರುಪಯೋಗಪಡಿಸಿಕೊಳ್ಳಲು ಬರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.