Republic day Parade Karnataka Tableau: ಹೆಜ್ಜೆಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Republic Day 2023: ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನಕ್ಕಾಗಿ ತಮಿಳುನಾಡು, ಕೇರಳ ಸೇರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ದೊರಕಿರಲಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರ ಆಯ್ಕೆ ಸಮಿತಿ ಅವಕಾಶ ನಿರಾಕರಿಸಿದೆ ಎನ್ನಲಾಗಿತ್ತು.
ಆಯ್ಕೆ ಸಮಿತಿಯಲ್ಲಿ ಇಂಥ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲವೆಂದು ಕಿಡಿಕಾರಿರುವ ಕುಮಾರಸ್ವಾಮಿ ಕೇಂದ್ರದ ಸಚಿವಾಲಯ ಮತ್ತು ಅಧಿಕಾರಿಗಳು ಈ ಅಚಾತುರ್ಯವನ್ನು ಸರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಿಶ್ವಪ್ರಸಿದ್ಧ ಚನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್ ಇರುವ ರಾಜ್ಯದ 16 ಕರಕುಶಲ ವಸ್ತುಗಳು(Handicrafts) ಅನಾವರಣಗೊಳ್ಳಲಿವೆ.
ಕೃಷ್ಣದೇವರಾಯನ ಕಾಲದ ಆಡಳಿತ ವೈಭವ, ಸೈನ್ಯದ ಮಹತ್ವ, ಮತ್ತು ವಾಸ್ತುಶಿಲ್ಪಗಳೆಲ್ಲದರ ಸಂಕ್ಷಿಪ್ತ ರೂಪವು ಸ್ತಬ್ದಚಿತ್ರದಲ್ಲಿ ರೂಪುಗೊಂಡಿವೆ. ಇದಲ್ಲದೆ ಹಂಪಿಯಲ್ಲಿನ ಐತಿಹಾಸಿಕ ದೇವಾಲಯಗಳು, ಹನುಮಂತನ ಜನ್ಮಸ್ಥಾನ ಅಂಜನಾದ್ರಿ ಬೆಟ್ಟ, ಸಂಗೀತ ಹೊಮ್ಮಿಸುವ ಕಂಬಗಳೆಲ್ಲವನ್ನೂ ಕಾಣಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.