ಸಿಲಿಂಡರ್ ಸ್ಪೋಟದಿಂದಾಗಿ ಹೊಟೆಲ್ ಕಿಟಕಿಯ ಗ್ಲಾಸ್ ಪುಡಿ, ಪುಡಿಯಾಗಿವೆ. ಅಷ್ಟೇ ಅಲ್ಲದೆ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದರಿಂದಾಗಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಈಗ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಜುಲೈ 26 ರಿಂದ 29ರ ವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಶಾಲೆ & ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದ ಪ್ರತಿ (Fake) ವಾಟ್ಸ್ಯಾಪ್ನಲ್ಲಿ ಹರಿದಾಡುತ್ತಿದೆ.ಇದು ಸುಳ್ಳು ಸುದ್ದಿಯಾಗಿದ್ದು, ಈ ಕುರಿತು ಡಿ.ಸಿ. ಕಚೇರಿಯಿಂದ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಷದ ಬಾಟಲಿ ತಗೊಂಡು ಡಿಸಿ ಬಳಿ ಬಂದ ಸಂಘಟನೆಯ ಮುಖಂಡನೊಬ್ಬನಿಗೆ ಕಲಬುರಗಿ ಜಿಲ್ಲಾಧಿಕಾರಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.. ಡ್ರಾಮಾ ಎಲ್ಲಾ ಮಾಡಬೇಡ.. ಗೆಟ್ ಔಟ್ ಎಂದು ಗದರಿಸಿ ಕಳುಹಿಸಿದ್ದಾರೆ.. ಅಫಜಲಪುರ ತಾಲೂಕಿನ ಗೌರ ಬಿ ಗ್ರಾಮ ಪಂಚಾಯತಿಯ ನಾಲ್ವರು ನಿವೃತ್ತ ಬಿಲ್ ಕಲೆಕ್ಟರ್ಗಳ ಬಾಕಿ ವೇತನಕ್ಕೆ ಆಗ್ರಹಿಸಿ CITU ಮುಖಂಡ ಶ್ರೀಮಂತ ಬಿರಾದಾರ ಡಿಸಿ ಭೇಟಿ ಮಾಡಿದ್ದಾರೆ. ಕೈಯಲ್ಲೊಂದು ವಿಷದ ಬಾಟಲಿ, ಹೂವಿನ ಹಾರ ತೆಗೆದುಕೊಂಡು ಹೋಗಿ ವೇತನ ಕೊಡಿ ಇಲ್ಲವೇ ವಿಷ ಕೊಡಿ ಎಂದು ಡಿಸಿ ಅವರ ಮುಂದೆ ಹೇಳಿದ್ದಾರೆ. ಈ ವೇಳೆ ಡಿಸಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಕೊಡ್ತಾ ಇದ್ದೀಯಾ ನಿನ್ನ ಮೇಲೆ ಕೇಸ್ ಹಾಕಬೇಕಾಗುತ್ತೆ ಗೆಟ್ ಔಟ್ ಎಂದು ಆವಾಜ್ ಹಾಕಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.