WCR Recruitment 2022 : ಅರ್ಜಿಗಳು ಆನ್ಲೈನ್ನಲ್ಲಿ ಮಾತ್ರ ಇರುತ್ತದೆ, ಇದಕ್ಕಾಗಿ ಅಭ್ಯರ್ಥಿಗಳು ಪಶ್ಚಿಮ ಮಧ್ಯ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.
ಅಹಮದಾಬಾದ್ - ಯಶವಂತಪುರ - ಅಹಮದಾಬಾದ್ ಎಕ್ಸ್ಪ್ರೆಸ್ ರೈಲಿನ ಸಮಯ ಬದಲಾವಣೆಯಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಯಾಣ ಬೆಳೆಸುವ ಪ್ರಯಾಣಿಕರು ಸಹಕರಿಸಬೇಕಾಗಿ ಇಲಾಖೆ ಮನವಿ ಮಾಡಿದೆ.
Railway Travel Insurance: ರೈಲ್ವೆ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ನೀವು ಮುಂಭಾಗದ ವಿಂಡೋದಲ್ಲಿ ಈ ಆಯ್ಕೆಯನ್ನು ನೋಡುತ್ತೀರಿ. ಈ ಆಯ್ಕೆಯನ್ನು ಪರಿಶೀಲಿಸಿ ಅದರ ನಂತರ ನೀವು ಈ ವಿಮೆ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
IRCTC New Facility: ಧನತ್ರಯೋದಶಿ ಹಾಗೂ ದೀಪಾವಳಿ ಹಬ್ಬದಾಚರಣೆಗೆ ನೀವೂ ಕೂಡ ನಿಮ್ಮ ಮನೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, IRCTC 'ಟ್ರಾವೆಲ್ ನೌ, ಪೇ ಲೇಟರ್' ಸೇವೆಯನ್ನು ಬಳಸಿಕೊಂಡು ನೀವು ರೈಲಿನಲ್ಲಿ ಆಸನವನ್ನು ಬುಕ್ ಮಾಡಬಹುದು.
ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ಲಾಟ್ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಇಲಾಖೆ ತಿಳಿಸಿದೆ.
IRCTC ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸದೆ ಟಿಕೆಟ್ಗಳನ್ನು ರದ್ದುಗೊಳಿಸಿದರೆ ಮರುಪಾವತಿಯನ್ನು ನೀಡುತ್ತದೆ. ಇದಕ್ಕಾಗಿ, ನೀವು ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸಬೇಕು ಎಂದು ಸೂಚನೆಯನ್ನು ನೀಡಿದೆ.
Free Wifi: ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ರೈಲ್ವೇಯಿಂದ ಒದಗಿಸಲಾಗುತ್ತಿದೆ. ಇದರಿಂದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಸುಧಾರಿಸಬಹುದು. ಇದೀಗ, ರೈಲ್ವೇ ನಿಲ್ದಾಣದಲ್ಲಿ ಉಚಿತ ವೈಫೈಗೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 1ರಿಂದ ಹಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಬದಲಾವಣೆಯಾಗಲಿದೆ. ಪ್ರಯಾಣಿಕರ ಸೌಲಭ್ಯ ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಇದರ ಸಿಸಿಟಿವಿ ವಿಡಿಯೋವನ್ನು ಆರ್ಪಿಎಫ್ ಇಂಡಿಯಾದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ಶೌರ್ಯ ಮತ್ತು ಧೈರ್ಯದ ಮತ್ತೊಂದು ಕಥೆ ಎಂದು ಬರೆಯಲಾಗಿದೆ.
Indian Railways Free Meal Policy: ಹಲವು ಬಾರಿ ರೈಲಿನಲ್ಲಿ ಯಾತ್ರಿಗಳಿಗೆ ಉಚಿತ ಊಟ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಅದಕ್ಕಾಗಿ ಯಾವುದೇ ರೀತಿಯ ಹಣ ಖರ್ಚು ಮಾಡಬೇಕಾಗಿಲ್ಲ. ಹಾಗಾದರೆ ಬನ್ನಿ ಭಾರತೀಯ ರೇಲ್ವೆ ಒದಗಿಸುವ ಈ ಸೇವೆಯ ಕುರಿತು ತಿಳಿದುಕೊಳ್ಳೋಣ,
Indian Railway: ದೂರ ಪ್ರಯಾಣಕ್ಕೆ ಜನರು ಸಾಮಾನ್ಯವಾಗಿ ರೈಲು ಸಂಚಾರವನ್ನು ಇಷ್ಟಪಡುತ್ತಾರೆ. ಪ್ರಯಾಣದ ವೇಳೆ ನಿದ್ರೆ ಬರುವುದು ಸಹಜವೇ. ಆದರೆ, ನಿದ್ರೆ ಮಾಡಿದರೆ ಎಲ್ಲಿ ನಮ್ಮ ಸ್ಟೇಷನ್ ಬಂದಾಗ ಎಚ್ಚರ ಆಗುವುದಿಲ್ಲವೋ ಎಂಬ ಚಿಂತೆ ಹಲವರಿಗೆ ಇದ್ದೇ ಇರುತ್ತದೆ. ಇನ್ನೂ ಕೆಲವರು ನಿದ್ರಿಸುತ್ತ ತಮ್ಮ ನಿಲ್ದಾಣದಲ್ಲಿ ಇಳಿಯದೆ ಮುಂದಿನ ನಿಲ್ದಾಣಕ್ಕೆ ಹೋಗಿ ಇಳಿದಿರುವ ಹಲವು ಉದಾಹರಣೆಗಳನ್ನು ನೀವು ನೋಡಿರಬಹುದು. ಆದರೆ ಇನ್ನು ಮುಂದೆ ಈ ಚಿಂತೆ ಇರುವುದಿಲ್ಲ. ಭಾರತೀಯ ರೈಲ್ವೆ ಇದಕ್ಕಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ.
ಭಾರತೀಯ ರೈಲ್ವೆ ಇಲಾಖೆಯು 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ಶಿಪ್ಗೆ ಉತ್ತಮ ಅವಕಾಶ ನೀಡುತ್ತಿದೆ. ಒಟ್ಟು 1659 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
24 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ರೈಲ್ವೇ ಉದ್ಯೋಗಿ ಎಚ್ ಸತೀಶ್ ಕುಮಾರ್ ಅವರು ಮುಂಬರುವ ಗೂಡ್ಸ್ ರೈಲನ್ನು ಫ್ಲ್ಯಾಗ್ ಆಫ್ ಮಾಡಲು ಪ್ಲಾಟ್ಫಾರ್ಮ್ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಹಿಂತಿರುಗಿ ನೋಡಿದಾಗ ಯಾರೋ ಟ್ರ್ಯಾಕ್ ಮೇಲೆ ಬಿದ್ದಿದ್ದಾರೆಂದು ಅರಿವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.