ನಿಮ್ಮ ಕಿಸೆಯಲ್ಲಿ ಈ ವ್ಯವಸ್ಥೆ ಇರಿಸಲ್ಪಟ್ಟಿದ್ದರೆ ಕರೆನ್ಸಿ ನೋಟುಗಳು, ಮೊಬೈಲ್ ಫೋನ್ಗಳು, ಐಪ್ಯಾಡ್ಗಳು, ಲ್ಯಾಪ್ಟಾಪ್ಗಳು, ಚೆಕ್ಗಳು, ಇನ್ವಾಯ್ಸ್ಗಳು, ಪಾಸ್ಬುಕ್ಗಳು ಮತ್ತು ಕಾಗದ ಏನೇ ಇರಲಿ ಕರೋನಾವೈರಸ್ ಅಲ್ಲ ಯಾವುದೇ ವೈರಸ್ ಬದುಕಲು ಸಾಧ್ಯವಾಗುವುದಿಲ್ಲ.
ಮೈಕ್ರೋವೇವ್ ಓವನ್ ರೀತಿ ಕಾಣಿಸುವ ಈ ವಿಶೇಷ ಡಿಸ್ ಇನ್ಫೆಕ್ಟೆಂಟ್ ಬಾಕ್ಸ್ 'ಅಲ್ಟ್ರವೈಲೆಟ್-ಸಿ' ತಂತ್ರಜ್ಞಾನದ ಆಧಾದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಅನ್ನು ಒಂದು ನಿಮಿಷ ಇಟ್ಟರೆ ನಿಮ್ಮ ಮೊಬೈಲ್ ಕ್ರಿಮಿ ಮುಕ್ತವಾಗುತ್ತದೆ. ಇನ್ನೊಂದೆಡೆ ಕುರ್ಚಿ, ಮೇಜು, ಫೈಲ್, ಆಹಾರದ ಪೊಟ್ಟಣಗಳನ್ನೂ ಕೊರೊನಾ ಮುಕ್ತವಾಗಿಸಲು ಯುವಿ-ಲ್ಯಾಂಪ್ ವೊಂದನ್ನು ಕೂಡ ಸಿದ್ಧಪಡಿಸಲಾಗಿದೆ.
ಜಲಾಂತರ್ಗಾಮಿ ನೌಕೆಗಳಿಂದ ಶತ್ರುಗಳ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಟ್ಟಿರುವ ಭಾರತ, ಆಂಧ್ರಪ್ರದೇಶದ ಕರಾವಳಿಯಲ್ಲಿ 3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಕೆ -4 ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಾಧನೆಗಳನ್ನು ಶ್ಲಾಘಿಸಿದ ಬಿಪಿನ್ ರಾವತ್, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತವು ಹೆಚ್ಚಿನ ಪ್ರಗತಿ ಸಾಧಿಸಲು ಡಿಆರ್ಡಿಒ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
'ಕಾಂಬ್ಯಾಟ್ ಕ್ಯಾಷುಯಲ್ಟಿ ಡ್ರಗ್'ಬಳಸಿ ಗಂಭಿರವಾಗಿ ಗಾಯಗೊಂಡ ಯೋಧರಿಗೆ ಸೂಕ್ತ ಸಮಯದಲ್ಲಿ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ ನೀಡಿದ್ದೇ ಆದರೆ, ಅಂಗ ವೈಫಲ್ಯತೆ ಪ್ರಮಾಣ ಕಡಿಮೆಯಾಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚುತ್ತದೆ.
ಭಾರತದ ರಕ್ಷಣಾ ಇಲಾಖೆ ಈಗ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಡಿಆರ್ಡಿಓ ಅಭಿವೃದ್ದಿಪಡಿಸಿದ ವಿಸ್ತೃತ ಶ್ರೇಣಿಯ ರಾಕೆಟ್ ಗಳು ಸೋಮವಾರದಂದು ಯಶಸ್ವಿಯಾಗಿ ಉಡಾವಣೆಯಾಗಿವೆ. 90 ಕಿಮೀ ವ್ಯಾಪ್ತಿಯನ್ನು ಎರಡು ರಾಕೆಟ್ ಗಳು ತಲುಪುವಲ್ಲಿ ಯಶಸ್ವಿಯಾಗಿವೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ರಾಡಾರ್ ಗಳು,ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್ಸ್ ಮತ್ತು ಟೆಲಿಮೆಟ್ರಿಯೂ ವಿಮಾನದ ಮಾರ್ಗವನ್ನು ಪಿಎಕ್ಸ್ಇಯಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಓ) ಅಧ್ಯಕ್ಷ ಜಿ. ಸತೀಶ ರೆಡ್ಡಿಯವರಿಗೆ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯನ್ನು ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.