ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ವೈಯಕ್ತಿಕ ಪ್ರತಿಭೆ ನಿರ್ವಹಣಾ ಕೇಂದ್ರ (DRDO CEPTAM) ಅಡಿಯಲ್ಲಿ ಹಿರಿಯ ತಾಂತ್ರಿಕ ಸಹಾಯಕರ ಹುದ್ದೆಗಾಗಿ ಅಧಿಸೂಚನೆ ಹೊರಡಿಸಿದೆ. ಇದರ ಅಡಿಯಲ್ಲಿ, 494 ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಪ್ರವೇಶ ಪರೀಕ್ಷೆ ಮೂಲಕ DRDOನಲ್ಲಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಹುದ್ದೆಗಾಗಿ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಆಗಸ್ಟ್ 4, 2018 ರಿಂದ ಪ್ರಾರಂಭವಾಗುತ್ತದೆ. ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆಗಸ್ಟ್ 29 ಆಗಿದೆ. ಇದರ ಸಂಪೂರ್ಣ ವಿವರವನ್ನು drdo.gov.in ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ನಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. DRDO ಪರೀಕ್ಷೆಗೆ ಎರಡು ವಾರಗಳ ಮೊದಲು ಇ-ಅಡ್ಮಿಟ್ ಕಾರ್ಡ್ ಬಿಡುಗಡೆಯಾಗುತ್ತದೆ.
ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ 28 ಆಗಿರಬೇಕು.
ಶೈಕ್ಷಣಿಕ ಅರ್ಹತೆ: ಪ್ರತಿ ಹುದ್ದೆಗೆ ಶೈಕ್ಷಣಿಕ ಅರ್ಹತೆ ಭಿನ್ನವಾಗಿದೆ. ಇದಕ್ಕಾಗಿ, ತಾಂತ್ರಿಕ ವಿಜ್ಞಾನ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಪದವೀಧರರಾಗಿರುವುದು ಅವಶ್ಯಕ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನೇಮಕಾತಿ ಜಾಹೀರಾತನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ಲಿಂಕ್ ಅನ್ನು ಪರಿಶೀಲಿಸಿ http://davp.nic.in/writereaddata/ADS/eng_10301_101_1819b.pdf.
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅವರ ಶೈಕ್ಷಣಿಕ ಅರ್ಹತೆಗೆ ಸರಿಹೊಂದುತ್ತದೆಯೇ ಎಂದು ಪರಿಶೀಲಿಸಿ. ಅರ್ಜಿಯಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ಅಂತಹ ಅರ್ಜಿ ಸ್ವೀಕಾರಾರ್ಹವಾಗಿರುವುದಿಲ್ಲ.