ಕರೋನಾ ಸೋಂಕಿನಿಂದಾಗಿ ಈ ಸಮಯದಲ್ಲಿ ಸೈಬರ್ ದಾಳಿಯ ಬಗ್ಗೆ ದೇಶದ ಗುಪ್ತಚರ ಕಾರ್ಯಸೂಚಿಯಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಎಚ್ಚರಿಕೆ ನೀಡಿದೆ. ಸ್ವಲ್ಪ ಸಮಯದ ಹಿಂದೆ ಅಪಾಯವನ್ನು ಗ್ರಹಿಸಿದ ಸಿಬಿಐ ತನ್ನ ಗ್ರಾಹಕರನ್ನು ಎಚ್ಚರಿಸಿದೆ.
ದೇಶದಲ್ಲಿ ಕರೋನಾವೈರಸ್ ಭೀತಿ ನಡುವೆಯೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಕು ಮತ್ತು ಸೇವಾ ತೆರಿಗೆ ಜಾಲ (GSTN) ಇಂತಹ ವಂಚನೆಯನ್ನು ತಪ್ಪಿಸಲು ತೆರಿಗೆ ಪಾವತಿದಾರರನ್ನು ಎಚ್ಚರಿಸಿದೆ.
ಸಾಮಾಜಿಕ ಅಂತರ (Social Distancing)ವನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಜನರು ತಮ್ಮ ಮನೆಯಿಂದ ಆನ್ಲೈನ್ ಮಾಧ್ಯಮಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಈ ಅವಕಾಶದ ಲಾಭವನ್ನು ಪಡೆದುಕೊಳ್ಳಲು ಸೈಬರ್ ಕ್ರಿಮಿನಲ್ ಸಹ ಬಹಳ ಸಕ್ರೀಯರಾಗಿದ್ದಾರೆ. ಜನರಿಗೆ ವಂಚನೆ ಎಸಗಲು ಆನ್ಲೈನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯ ಸೈಬರ್ ವನ್ಚಕರಿಗೆ ಕಡಿವಾಣ ಹಾಕಲು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.