ತೆರಿಗೆದಾರರೇ ಗಮನಿಸಿ! GST ಹೆಸರಿನಿಂದ ನಡೆಯುತ್ತಿರುವ ವಂಚನೆ ಬಗ್ಗೆ ಇರಲಿ ಎಚ್ಚರ

ದೇಶದಲ್ಲಿ ಕರೋನಾವೈರಸ್ ಭೀತಿ ನಡುವೆಯೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಕು ಮತ್ತು ಸೇವಾ ತೆರಿಗೆ ಜಾಲ (GSTN) ಇಂತಹ ವಂಚನೆಯನ್ನು ತಪ್ಪಿಸಲು ತೆರಿಗೆ ಪಾವತಿದಾರರನ್ನು ಎಚ್ಚರಿಸಿದೆ.  

Last Updated : May 7, 2020, 01:04 PM IST
ತೆರಿಗೆದಾರರೇ ಗಮನಿಸಿ! GST ಹೆಸರಿನಿಂದ ನಡೆಯುತ್ತಿರುವ ವಂಚನೆ ಬಗ್ಗೆ ಇರಲಿ ಎಚ್ಚರ title=
Image courtesy: Zeebiz

ನವದೆಹಲಿ: ದೇಶದಲ್ಲಿ ಕರೋನಾವೈರಸ್ ಭೀತಿ ನಡುವೆಯೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಕು ಮತ್ತು ಸೇವಾ ತೆರಿಗೆ ಜಾಲ (GSTN) ಇಂತಹ ವಂಚನೆಯನ್ನು ತಪ್ಪಿಸಲು ತೆರಿಗೆ ಪಾವತಿದಾರರನ್ನು ಎಚ್ಚರಿಸಿದೆ. ಈ ಸಮಯದಲ್ಲಿ, ದೇಶದಲ್ಲಿ ಜಿಎಸ್ಟಿ ಮರುಪಾವತಿ (GST Refund) ಯ ಹೆಸರಿನಲ್ಲಿ ವಂಚನೆ ನಡೆಯುವ ಬಗ್ಗೆ ಎಚ್ಚರವಹಿಸಿ. ಇಲ್ಲದಿದ್ದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ತಿಳಿದಿದೆ.

ಜಿಎಸ್‌ಟಿಎನ್ ಟ್ವೀಟ್ :
ಜಿಎಸ್ಟಿಎನ್ ಇಲಾಖೆಯ ಪರವಾಗಿ ಟ್ವೀಟ್ ಮಾಡುವ ಮೂಲಕ ಇಂತಹ ಸೈಬರ್ ವಂಚನೆ ಬಗ್ಗೆ  ಮಾಹಿತಿ ನೀಡಲಾಗಿದ್ದು ತೆರಿಗೆ ಪಾವತಿದಾರರಿಗೆ ಮೋಸ ಮಾಡಲಾಗುತ್ತಿರುವ ಬಗ್ಗೆ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಜಿಎಸ್‌ಟಿಎನ್ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಪ್ರತಿಯೊಬ್ಬರೂ ಈ ರೀತಿಯ ವೆಬ್‌ಸೈಟ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದೆ.

ಈ ರೀತಿಯ ವೆಬ್‌ಸೈಟ್‌ ಬಗ್ಗೆ ಜಾಗರೂಕರಾಗಿರಿ:
ಈ ವೆಬ್‌ಸೈಟ್ https://onlinefilingindia.in ಕುರಿತು ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ. ಜನರು ತಮ್ಮ ಯಾವುದೇ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಅಂತಹ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಬಾರದು ಎಂದು ಸರ್ಕಾರ ಹೇಳಿದೆ. ಜಿಎಸ್‌ಟಿಎನ್ ಕೂಡ ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಟ್ವೀಟ್ ಅನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಐಸಿ) ಕೂಡ ರಿಟ್ವೀಟ್ ಮಾಡಿದೆ.

ತೆರಿಗೆದಾರರೇ ಎಚ್ಚರ:

  • ಕೋವಿಡ್ -19 ರ ಕಾರಣದಿಂದಾಗಿ ವಂಚಕರು ನಕಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ, ಅದು ಫಿಶಿಂಗ್ ಲಿಂಕ್ ಹೊಂದಿದೆ ಎಂದು ಜಿಎಸ್ಟಿಎನ್ ಹೇಳಿದೆ.
  • ವಾಟ್ಸಾಪ್, ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಜಿಎಸ್‌ಟಿ ಮರುಪಾವತಿ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದೆ. ಇಂತಹ ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ಹೇಳಲಾಗಿದೆ.
  • ತೆರಿಗೆದಾರರು ಜಿಎಸ್ಟಿ ಪೋರ್ಟಲ್ನಲ್ಲಿ ನಿಮ್ಮ ಮರುಪಾವತಿಗೆ ಮಾತ್ರ ಅರ್ಜಿ ಸಲ್ಲಿಸಿ.
  • ವಂಚಕರು ತಮ್ಮನ್ನು ತೆರಿಗೆ ಅಧಿಕಾರಿಗಳು ಅಥವಾ ಜಿಎಸ್‌ಟಿಎನ್ ಸಿಬ್ಬಂದಿಗಳು ಎಂದು ಸುಳ್ಳು ಹೇಳುವ  ಮೂಲಕ ನಕಲಿ ಇಮೇಲ್‌ಗಳನ್ನು ಕಳುಹಿಸಬಹುದು, ಅದರ ಮೂಲಕ ಅವರು ಜಿಎಸ್‌ಟಿ ಖಾತೆಯನ್ನು ತ್ವರಿತವಾಗಿ ಪರಿಶೀಲಿಸಲು ಅಥವಾ ನವೀಕರಿಸಲು ನಿಮ್ಮನ್ನು ಕೇಳಬಹುದು.
  • ಜಿಎಸ್ಟಿ ಪೋರ್ಟಲ್ ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದಾಯ ತೆರಿಗೆ ಇಲಾಖೆಯಿಂದಲೂ ಎಚ್ಚರಿಕೆ:
ಈ ಹಿಂದೆ ಆದಾಯ ತೆರಿಗೆ ಇಲಾಖೆಯು ಗ್ರಾಹಕರಿಗೆ ಮರುಪಾವತಿ ಮಾಡುವ ಬಗ್ಗೆ ಎಚ್ಚರಿಕೆ ನೀಡಿತ್ತು. ಮರುಪಾವತಿಗಾಗಿ ನೀವು ಯಾವುದೇ ರೀತಿಯ ವಿಶೇಷ ಸಂದೇಶಗಳು ಮತ್ತು ಲಿಂಕ್‌ಗಳನ್ನು ಪಡೆದರೆ ಯಾವುದೇ ಕಾರಣಕ್ಕೂ ಅಂತಹ ಲಿಂಕ್ ಗಳನ್ನೂ ಕ್ಲಿಕ್ ಮಾಡಬೇಡಿ. ಆದಾಯ ತೆರಿಗೆ ಇಲಾಖೆ ವತಿಯಿಂದ ಆ ರೀತಿಯ ಯಾವುದೇ ಲಿಂಕ್ ಕಳುಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
 

Trending News