Ritika Singh : ಹಿಂದಿ , ತೆಲುಗು ಮತ್ತು ಮಲಯಾಳಂ ಚಿತ್ರಗಳ ಜೊತೆಗೆ ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವ ನಟಿ ತರಿತಿಕಾ ಸಿಂಗ್. 2009 ರ ಏಷ್ಯನ್ ಇಂಡೋರ್ ಗೇಮ್ಸ್ನಲ್ಲಿ ಭಾರತಕ್ಕಾಗಿ ಸ್ಪರ್ಧಿಸಿದ ನಂತರ ಮತ್ತು ಸೂಪರ್ ಫೈಟ್ ಲೀಗ್ನಲ್ಲಿ ಭಾಗವಹಿಸಿ ನಂತರ, ಸುಧಾ ಕೊಂಗರ ಪ್ರಸಾದ್ ಅವರ ತಮಿಳು ಚಲನಚಿತ್ರ ದ್ವಿಭಾಷಾ ಚಿತ್ರ ಇರುಧಿ ಸುಟ್ರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Nikhat Zareen World Champion 2023: ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಭಾನುವಾರ ಅಬ್ಬರದ ಆಟ ಪ್ರದರ್ಶಿಸಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಅವರು ವಿಶ್ವ ಚಾಂಪಿಯನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಅವರ ಎರಡನೇ ವಿಶ್ವ ಪ್ರಶಸ್ತಿಯಾಗಿದೆ.
CWG 2022: ಭಾರತೀಯ ಬಾಕ್ಸಿಂಗ್ ಪಟು ನಿಖಹತ್ ಜರೀನ್ ಬಾಕ್ಸಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ನಿಖಹತ್ ಜರೀನ್ ಬಾಕ್ಸಿಂಗ್ನಲ್ಲಿ ಮಹಿಳೆಯರ 48-50 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ವಿಭಾಗದ ಫೈನಲ್ ಪಂದ್ಯದಲ್ಲಿ ನಿಖಹತ್ ಜರೀನ್ ನಾರ್ತ್ ಐರ್ಲೆಂಡ್ನ ಕಾರ್ಲಿಯನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಇದು ಕಾಮನ್ವೆಲ್ತ್ ಕ್ರೀಡಾಕೂಟ2022 ರಲ್ಲಿ ಭಾರತಕ್ಕೆ 48 ನೇ ಪದಕ ಮತ್ತು ಬಾಕ್ಸಿಂಗ್ನಲ್ಲಿ ಮೂರನೇ ಚಿನ್ನದ ಪದಕವಾಗಿದೆ. ನಿಖಹತ್ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದಾರೆ.
Mary Kom: ಸಾಮಾಜಿಕ ಮಾಧ್ಯಮ ಕೂ ನಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡು, ಮಾಡು ಇಲ್ಲವೇ ಮಡಿ... ಪ್ರಯತ್ನ ಅಥವಾ ಯಾವುದೇ ಶಾರ್ಟ್ಕಟ್ ಇಲ್ಲಿಲ್ಲ.. ಕೇವಲ ಕಠಿಣ ಪರಿಶ್ರಮ ಎಂದು ಬರೆದುಕೊಂಡಿದ್ದಾರೆ.
ಭಾರತದ ಮೇರಿ ಕೋಮ್ ಬಾಕ್ಸಿಂಗ್ ನಲ್ಲಿ ಆರು ವಿಶ್ವ ಚಾಂಪಿಯನ್ಶಿಪ್ಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿ ಪಡೆದ ಎರಡು ತಿಂಗಳ ನಂತರ ಗುರುವಾರದಂದು ಬಾಕ್ಸಿಂಗ್ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇಲ್ಲಿನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಬಾಕ್ಸರ್ ಮೇರಿ ಕೊಮ್ ಅವರು ಉಕ್ರೇನ್ನ ಹನ್ನಾ ಒಖೋಟಾ ಅವರನ್ನು ಸೋಲಿಸುವ ಮೂಲಕ ದಾಖಲೆ ಆರನೇ ಬಾರಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಗೆ ಪಾತ್ರರಾದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.