ಭಾರತೀಯ ಖಾದ್ಯಗಳಲ್ಲಿ ಸಾಮಾನ್ಯವಾಗಿ ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಆದರೆ, ಇದು ಕೇವಲ ಆಹಾರವನ್ನು ಆಕರ್ಷಕವಾಗಿ ಕಾಣಲು ಮಾತ್ರ ಅಂತ ಅನ್ಕೋಬೇಡಿ, ಹಲವು ಆರೋಗ್ಯ ಸಮಸ್ಯೆಗಳಿಗೂ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತೆ. ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ...
Coriander Leaves Benefits: ಕೊತ್ತಂಬರಿ ಸೊಪ್ಪನ್ನು ಮಲಬದ್ದತೆ ನಿವಾರಿಸಲು ದಿವ್ಯೌಷಧ ಎಂದು ಹೇಳಲಾಗುತ್ತದೆ. ಕೊತ್ತಂಬರಿಯಲ್ಲಿ ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣದಂತಹ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.
ಉಪ್ಪು, ಮೆಣಸು, ಹುಳಿ, ತೆಂಗಿನ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ ಮಾಡಿದ ಕೊತ್ತಂಬರಿ ಸೊಪ್ಪಿನ ಚಟ್ನಿಅದೇ ರೀತಿ ಉಪ್ಪು, ಹುಳಿ, ಮೆಣಸು, ಮತ್ತು ಪುದಿನ ಬೆರೆಸಿ ಮಾಡಿದ ಪುದಿನ ಚಟ್ನಿ ಊಟಕ್ಕೆ ನಂಜಿಕೊಳ್ಳಲು ಇದ್ದರೆ ಅದೇ ಬ್ರಹ್ಮಾಂಡ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.