ATM Card Cloning: ಭಾರತದಲ್ಲಿ, ಕಳೆದ ಕೆಲವು ದಿನಗಳಿಂದ, ಎಟಿಎಂಗಳ ಮೂಲಕ ಖಾತೆಯನ್ನು ತೆರವುಗೊಳಿಸುವ ಅನೇಕ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ನೀವು ಎಟಿಎಂ ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ನಿಮ್ಮ ಒಂದು ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು, ಅಂತಹ ಪರಿಸ್ಥಿತಿಯಲ್ಲಿ, ಎಟಿಎಂ ಬಳಸುವಾಗ, ಇಲ್ಲಿ ಉಲ್ಲೇಖಿಸಿರುವ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.
ATM Card Cloning: ಎಟಿಎಂ ಯಂತ್ರದಲ್ಲಿ (ATM Machine) ಕಾರ್ಡ್ ಬಳಕೆಗಾಗಿ ಅಳವಡಿಸಲಾಗಿರುವ ಸ್ಲಾಟ್ನಿಂದ (ATM Card Slot) ಯಾವುದೇ ಗ್ರಾಹಕರ ಡೇಟಾವನ್ನು ಹ್ಯಾಕರ್ಗಳು ಕದಿಯುತ್ತಾರೆ. ಇದಕ್ಕಾಗಿ ಸಾಧನವೊಂದನ್ನು ಅವರು ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್ನಲ್ಲಿ ಇರಿಸುತ್ತಾರೆ, ಅದು ನಿಮ್ಮ ಕಾರ್ಡ್ನ (ATM Card) ಸಂಪೂರ್ಣ ಮಾಹಿತಿಯನ್ನು ಸ್ಕ್ಯಾನ್ ಮಾಡುತ್ತದೆ. ಇದರ ನಂತರ, ಅವರು ಬ್ಲೂಟೂತ್ ಅಥವಾ ಯಾವುದೇ ಇತರ ವೈರ್ಲೆಸ್ ಸಾಧನದಿಂದ ಡೇಟಾವನ್ನು ಕದಿಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.