ಒಟ್ಟು 10 ಕಲಾಕೃತಿಗಳ ಕಲಾವಿದರಿಗೆ ತಲಾ ₹25 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಪ್ರವೇಶ ಶುಲ್ಕ ₹300 ನಗದು ರೂಪದಲ್ಲಿ ಅಥವಾ ಡಿಡಿ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಪಾವತಿಸಬೇಕಾಗುತ್ತದೆ.
ಖ್ಯಾತ ಚಿತ್ರಕಲಾವಿದ ಯೂಸುಫ್ ಆರಕ್ಕಲ್ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಸರಣಿಯ ಪ್ರದರ್ಶನವನ್ನು ಸಂದೀಪ್ & ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣದ ಮೆಜ್ಜಾನೈನ್ ಲೆವೆಲ್ನ 38 ಮೈನಿ ಸದನ್ ನಲ್ಲಿ ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೂನ್ 5ರಂದು ಆರಂಭಗೊಂಡಿರುವ ಈ ಪ್ರದರ್ಶನ ಜುಲೈ 10, 2024ರವರೆಗೆ ನಡೆಯಲಿದೆ.
Raja Ravivarma: ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್, ಮೆಜ್ಜನೈನ್ ಲೆವೆಲ್, 38 ಮೈನಿ ಸದನ್, 7ನೇ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು 560001 ನಲ್ಲಿ ಮೇ 30 ರವರೆಗೆ ಪ್ರದರ್ಶನ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.