7 ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ರಚಿಸಲಾಯಿತು, ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಹೀಗಾಗಿ 7 ನೇ ವೇತನ ಆಯೋಗವು ಜನವರಿ 1, 2016 ರಿಂದ ಜಾರಿಗೆ ಬಂದಿದೆ. ಈಗ, 8 ನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಯಾವುದೇ ಸಮಿತಿಯನ್ನು ರಚಿಸಲು ಸರ್ಕಾರ ಮುಂದಾಗಿದೆಯೇ ಎನ್ನುವ ವಿಚಾರವಾಗಿ ಹೊಸ ಅಪ್ಡೇಟ್ ಅನ್ನು ಸರ್ಕಾರ ನೀಡಿದೆ.
8ನೇ ವೇತನ ಆಯೋಗ: 8ನೇ ವೇತನ ಆಯೋಗದ ಅಧಿಕೃತ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಕಾಯುತ್ತಿರುವಾಗಲೇ, ಕೇಂದ್ರ ಸರ್ಕಾರಿ ನೌಕರರು ತಮ್ಮ ಕನಿಷ್ಠ ವೇತನದಲ್ಲಿ ಶೇ.186ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸಿವೆ.ಉದ್ಯೋಗಿಗಳು ಪ್ರಸ್ತುತ 7 ನೇ ವೇತನ ಆಯೋಗದ ಅಡಿಯಲ್ಲಿ ತಿಂಗಳಿಗೆ ಕನಿಷ್ಠ 18,000 ರೂ ಮೂಲ ವೇತನವನ್ನು ಪಡೆಯುತ್ತಾರೆ, ಇದನ್ನು 6 ನೇ ವೇತನ ಆಯೋಗದ 7,000 ರೂ.ನಿಂದ ಹೆಚ್ಚಿಸಲಾಗಿದೆ.
ಏಳನೇ ವೇತನ ಆಯೋಗವನ್ನು 10 ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು. ಈಗ ಹತ್ತು ವರ್ಷಗಳು ಪೂರ್ಣಗೊಳ್ಳಲಿವೆ. ಹೀಗಾಗಿ ಎಂಟನೇ ವೇತನ ಆಯೋಗದತ್ತ ನೌಕರರ ನಿರೀಕ್ಷೆ ಹೆಚ್ಚಿದೆ. ಹೊಸ ವೇತನ ಆಯೋಗ ಜಾರಿಯಾದರೆ ನೌಕರರ ವೇತನ ಶೇ.44ಕ್ಕಿಂತ ಹೆಚ್ಚಬಹುದು.
7th Pay Commission Report: ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.