Baal Aadhaar Latest Update: ಪ್ರಸ್ತುತ ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮಹತ್ವದ ದಾಖಲೆಯಾಗಿದೆ. ಭಾರತೀಯ ನಾಗರೀಕರ ವಿಶಿಷ್ಟ ದಾಖಲೆಯಾಗಿರುವ ಆಧಾರ್ ಕಾರ್ಡ್ ಆನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಒದಗಿಸುತ್ತದೆ. ಮಕ್ಕಳಿಗೆ ಬಾಲ್ ಆಧಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ ಒದಗಿಸುವ ಯುಐಡಿಎಐ ಇದೀಗ ಬಾಲ್ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ.
ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ತೀರ್ಪಿನ ನಂತರ, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ಯೋಜನೆಗಳನ್ನು ಮಾರ್ಚ್ 31 ರೊಳಗೆ ಸಂಪರ್ಕಿಸಲು ಇದು ಅಗತ್ಯವಾಗಿದೆ.
ಜನರ ಮನಸ್ಸಿನಲ್ಲಿ ಆಧಾರ್ ಲಿಂಕ್ ಬಗ್ಗೆ ಹಲವು ರೀತಿಯ ಪ್ರಶ್ನೆಗಳಿವೆ. ಆಧಾರ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ಬಗ್ಗೆ ಗೊಂದಲವಿದೆ. ಮಾರ್ಚ್ 31, 2018 ಕ್ಕೆ ಅಗತ್ಯ ದಾಖಲೆಗಳನ್ನು ಸಂಪರ್ಕಿಸಲು ಸರ್ಕಾರವು ಕೊನೆಯ ದಿನಾಂಕವನ್ನು ನಿಗದಿಗೊಳಿಸಿದೆ.
ಆಧಾರ್ ನೊಂದಿಗೆ ಲಿಂಕ್ ಮಾಡಬೇಕಾದ ಸೇವೆಗಳ ಕುರಿತು ಈವರೆಗೂ ಗೊಂದಲಗಳಿವೆ. ಆಧಾರ್ ಅನ್ನು ಯಾವಾಗ ಲಿಂಕ್ ಮಾಡಬೇಕು? ಆಧಾರ್ ಸಂಖ್ಯೆ ಇಲ್ಲದಿದ್ದರೆ ಯಾವ ಸೇವೆಗಳು ನಮಗೆ ಲಭಿಸುವುದಿಲ್ಲ? ಹೀಗೆ ಹಲವಾರು ಗೊಂದಲಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.