ಭಾರತದ ಮೋಸ್ಟ್ ವಾಂಟೆಡ್ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ಪತ್ತೆಯಾಗಿದ್ದು, 56 ಕೋಟಿ ರೂ. ಬೆಲೆಯ ಲಕ್ಷುರಿ ಅಪಾರ್ಟ್ಮೆಂಟ್ನಲ್ಲಿ ಜೀವನ ನಡೆಸುತ್ತಿದ್ದಾನೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಕರಾವಳಿ ನಿಯಂತ್ರಣ ವಲಯ ನಿಯಮಗಳು ಹಾಗೂ ಮಹಾರಾಷ್ಟ್ರದ ರಾಜ್ಯದ ನಿಯಮಾವಳಿಗಳನ್ನು ಉಲ್ಲಂಘಿಸಿ 33,000 ಚದರ ಅಡಿಯ 100 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಬಂಗಲೆಯನ್ನು ಕಹಿಂ ಬೀಚ್ ಸಮಿಪದಲ್ಲಿ ನೀರವ್ ಮೋದಿ ಅನಧಿಕೃತವಾಗಿ ನಿರ್ಮಿಸಿದ್ದರು.
ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಮುಂಬೈ ಅಪಾರ್ಟ್ಮೆಂಟ್ನಲ್ಲಿ 12 ಸಾವಿರ ಕೋಟಿ ಪಿಎನ್ಬಿ ಮೋಸದ ಪ್ರಕರಣದಲ್ಲಿ 26 ಕೋಟಿ ಮೌಲ್ಯದ ಆಭರಣಗಳು, ದುಬಾರಿ ಕೈಗಡಿಯಾರಗಳು ಮತ್ತು ಅಮೃತಾ ಶೆರ್ಗಿಲ್ ಮತ್ತು ಎಮ್.ಎಫ್ ಹುಸೇನ್ರ ಅಮೂಲ್ಯ ವರ್ಣಚಿತ್ರಗಳನ್ನು ಜಾರಿ ನಿರ್ದೇಶನಾಲಯ(ಇಡಿ) ವಶಪಡಿಸಿಕೊಂಡಿದ್ದಾರೆ.
ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ 12,600 ಕೋಟಿ ರೂಪಾಯಿಗಳಿಗೆ ಪಿಎನ್ಬಿಯಿಂದ ಲೂಟಿ ಮಾಡಿದ ಬಳಿಕ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚಾಗಿದೆ. ಇತ್ತೀಚಿನ ಪ್ರಕರಣದಲ್ಲಿ ಸಿಬಿಐ ಬುಧವಾರ 515.15 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಾ ಹಗರಣದ ಮುಖ್ಯ ಆರೋಪಿ ನೀರವ್ ಮೋದಿ ಅವರ ನೆಲೆಗಳನ್ನು ನಿರಂತರವಾಗಿ ಆಕ್ರಮಣ ಮಾಡಲಾಗುತ್ತಿದೆ. ನೀರವ್ ಮೋದಿಯ ಬ್ಯಾಂಕ್ ಖಾತೆಗಳು, ಷೇರುಗಳು ಮತ್ತು ವಿದೇಶಿ ಕೈಗಡಿಯಾರಗಳನ್ನು ವಶಪಡಿಸಿಕೊಂಡ ED.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.