Yuvraj Singh : ಮತ್ತೆ ಭಾರತ ತಂಡ ಸೇರುವ ಇಂಗಿತ ವ್ಯಕ್ತಪಡಿಸಿದ ಸಿಕ್ಸರ್‌ ಕಿಂಗ್‌ ಯುವಿ 

ಆಲ್​ರೌಂಡರ್ ಯುವರಾಜ್ ಸಿಂಗ್ ಮತ್ತೊಮ್ಮೆ ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿ ತಂಡದ ಆಟಗಾರರನ್ನು ಭವಿಷ್ಯದಲ್ಲಿ ಉತ್ತಮಗೊಳಿಸಲು ನಾನು ಕೆಲಸ ಮಾಡಬಹುದು. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ನಾನು ಕೊಡುಗೆ ನೀಡಬಹುದೆಂಬ ನಂಬಿಕೆ ನನಗಿದೆ ಅವರು ಹೇಳಿಕೊಂಡಿದ್ದಾರೆ.

Written by - Krishna N K | Last Updated : Jan 14, 2024, 04:53 PM IST
  • ಮಧ್ಯಮ ಕ್ರಮಾಂಕದಲ್ಲಿ ನಾನು ಕೊಡುಗೆ ನೀಡಬಹುದೆಂಬ ನಂಬಿಕೆ ನನಗಿದೆ.
  • ಮಾನಸಿಕವಾಗಿ ತಂಡದ ಆಟಗಾರರನ್ನು ಭವಿಷ್ಯದಲ್ಲಿ ಉತ್ತಮಗೊಳಿಸಲು ನಾನು ಕೆಲಸ ಮಾಡಬಹುದು.
  • ಆಲ್​ರೌಂಡರ್ ಯುವರಾಜ್ ಸಿಂಗ್ ಮತ್ತೊಮ್ಮೆ ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
Yuvraj Singh : ಮತ್ತೆ ಭಾರತ ತಂಡ ಸೇರುವ ಇಂಗಿತ ವ್ಯಕ್ತಪಡಿಸಿದ ಸಿಕ್ಸರ್‌ ಕಿಂಗ್‌ ಯುವಿ  title=

Yuvraj Singh : ಭಾರತ ತಂಡ 2007 ರ ಟಿ20 ವಿಶ್ವಕಪ್ ಹಾಗೂ 2011 ರ ಏಕದಿನ ವಿಶ್ವಕಪ್ ಗೆಲ್ಲೋದಕ್ಕೆ ಕಾರಣವಾಗಿದ್ದ ಆಲ್​ರೌಂಡರ್ ಯುವರಾಜ್ ಸಿಂಗ್ ಮತ್ತೊಮ್ಮೆ ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಯುವಿ ಟೀಂ ಇಂಡಿಯಾದ ಕಳೆದ ಕೆಲವು ವರ್ಷಗಳ ಪ್ರದರ್ಶನ, ಐಸಿಸಿ ಈವೆಂಟ್​ಗಳ ಫೈನಲ್​ ಪಂದ್ಯಗಳಲ್ಲಿ ತಂಡದ ಸೋಲು ಇದೆಲ್ಲವನ್ನು ನೆನಪಿಸಿಕೊಂಡರು. ಕೊನೆಯ ಟೀಂ ಇಂಡಿಯಾ ಎಡವುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಸಹ ಹೇಳಿದ್ದಾರೆ.

ನಾವು ಕಳೆದ ಕೆಲ ವರ್ಷಗಳಿಂದ ಅನೇಕ ಐಸಿಸಿ ಈವೆಂಟ್​ಗಳ ಫೈನಲ್‌ ಪಂದ್ಯಗಳನ್ನು ಆಡಿದರೂ ಸಹ ಒಂದನ್ನು ಗೆಲ್ಲಲಿಲ್ಲ. 2017 ರಲ್ಲಿ, ನಾವು ಪಾಕಿಸ್ತಾನದ ವಿರುದ್ಧ ಸೋತ ಫೈನಲ್‌ನಲ್ಲಿ ನಾನು ಭಾಗವಾಗಿದ್ದೆ. ಮುಂಬರುವ ವರ್ಷಗಳಲ್ಲಿ ನಾವು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಇದನ್ನೂ ಓದಿ: ಟೆಸ್ಟ್, ODI. ಟಿ20… ಮೂರು ಸ್ವರೂಪಕ್ಕೂ ನಿವೃತ್ತಿ ಘೋಷಿಸಿದ ಸ್ಟಾರ್ ಬ್ಯಾಟ್ಸ್’ಮನ್: 23 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ

ಒಂದು ದೇಶವಾಗಿ ಮತ್ತು ಭಾರತೀಯ ತಂಡವಾಗಿ, ನಾವು ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ನನ್ನ ಪ್ರಕಾರ ಏನೋ ತಪ್ಪಿದೆ, ದೊಡ್ಡ ಮ್ಯಾಚ್ ಇದ್ದಾಗ ನಾವು ದೈಹಿಕವಾಗಿ ಸಿದ್ಧರಾಗುತ್ತಿದ್ದೇವೆ. ಮಾನಸಿಕವಾಗಿಯೂ ಸಹ ಬಲವಾಗಿದ್ದರೆ ಮಾತ್ರ ನಮಗೆ ಜಯ ದೊರೆಯುತ್ತದೆ ಎಂದರು.

ಯುವ ಆಟಗಾರರಿಗೆ ಸ್ಫೂರ್ತಿ ನೀಡುವುದು, ಒತ್ತಡ ನಿಭಾಯಿಸಿ ಆಟವನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕಲಿಸುವುದು ಮುಖ್ಯವಾಗುತ್ತದೆ. ನಮ್ಮಲ್ಲಿ ಒತ್ತಡದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರಿದ್ದಾರೆ, ಒಬ್ಬ ಅಥವಾ ಇಬ್ಬರು ಆಟಗಾರಿಂದ ಈ ರೀತಿಯ ಪ್ರದರ್ಶನ ಬಂದರೆ ಸಾಲದು. ಇಡೀ ತಂಡ ಇದನ್ನು ಕಲಿಯಬೇಕು.  

ಇದನ್ನೂ ಓದಿ:ಒಂದೇ ಇನ್ನಿಂಗ್ಸ್’ನಲ್ಲಿ 8 ವಿಕೆಟ್ ಪಡೆದ ಟೀಂ ಇಂಡಿಯಾದ ಸ್ವಿಂಗ್ ಮಾಸ್ಟರ್: 6 ವರ್ಷಗಳ ಬಳಿಕ ತಂಡಕ್ಕೆ ಭರ್ಜರಿ ಕಂಬ್ಯಾಕ್!

ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ನಾನು ಟೀಂ ಇಂಡಿಯಾಕ್ಕೆ ಮಾರ್ಗದರ್ಶನ ನೀಡಲು ಬಯಸುತ್ತೇನೆ. ಮುಂಬರುವ ವರ್ಷಗಳಲ್ಲಿ ನಾನು ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಯುವ ಆಟಗಾರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ ಎಂದು ಯುವಿ ಹೇಳಿದ್ದಾರೆ.

ಮಾನಸಿಕವಾಗಿ ತಂಡದ ಆಟಗಾರರನ್ನು ಭವಿಷ್ಯದಲ್ಲಿ ಉತ್ತಮಗೊಳಿಸಲು ನಾನು ಕೆಲಸ ಮಾಡಬಹುದು. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ನಾನು ಕೊಡುಗೆ ನೀಡಬಹುದೆಂಬ ನಂಬಿಕೆ ನನಗಿದೆ ಎಂದು ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News