ಮೈದಾನದಲ್ಲೇ ಹೃದಯಾಘಾತ; ಮುಂಬೈ ಯುವ ಕ್ರಿಕೆಟಿಗ ಸಾವು

ವಾಣಿಜ್ಯನಗರಿ ಮುಂಬೈನ ಭಂಡುಪ್ ಏರಿಯಾದಲ್ಲಿ ಟೆನ್ನಿಸ್ ಭಾನುವಾರ ನಡೆಯುತ್ತಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್'ನಲ್ಲಿ ಆಡುತ್ತಿದ್ದ 24ವರ್ಷದ ಆಟಗಾರ ವೈಭವ್ ಕೇಸರ್ಕರ್ ಹೃದಯಾಘಾತಕ್ಕೆ ಒಳಗಾಗಿದ್ದರು.

Last Updated : Dec 25, 2018, 06:19 PM IST
ಮೈದಾನದಲ್ಲೇ ಹೃದಯಾಘಾತ; ಮುಂಬೈ ಯುವ ಕ್ರಿಕೆಟಿಗ ಸಾವು title=

ಮುಂಬೈ: ಉದಯೋನ್ಮುಖ ಕ್ರಿಕೆಟ್ ಆಟಗಾರನೋರ್ವ ಮೈದಾನದಲ್ಲೇ ಹೃದಯಾಘಾತಕೊಳಗಾಗಿ ಕೊನೆಯುಸಿರೆಳೆದ ಘಟನೆ ಮಂಗಳವಾರ ನಡೆದಿದೆ. 

ವಾಣಿಜ್ಯನಗರಿ ಮುಂಬೈನ ಭಂಡುಪ್ ಏರಿಯಾದಲ್ಲಿ ಟೆನ್ನಿಸ್ ಭಾನುವಾರ ನಡೆಯುತ್ತಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್'ನಲ್ಲಿ ಆಡುತ್ತಿದ್ದ 24ವರ್ಷದ ಆಟಗಾರ ವೈಭವ್ ಕೇಸರ್ಕರ್ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಒಂದು ತಿಂಗಳ ಹಿಂದೆ ಮುಂಬೈನ ಸೊಮಯ್ಯ ಕಾಲೇಜಿನಲ್ಲಿ ವಾರ್ಷಿಕೋತ್ಸವದ ವೇಳೆ 'ಟಗ್​ ಆಫ್​ ವಾರ್​​ ಗೇಮ್​' ನಡೆಯುತ್ತಿದ್ದಾಗ ಯುವ ವಿದ್ಯಾರ್ಥಿಯೊಬ್ಬ ಇದೇ ರೀತಿ ಹೃದಯಾಘಾತಕ್ಕೆ ಬಲಿಯಾಗಿದ್ದ ಘಟನೆ ನಡೆದಿತ್ತು.
 

Trending News