ಲಂಡನ್: ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರಂಭಿಕ ಆಟಗಾರರ ವೈಫಲ್ಯದೊಂದಿಗೆ ಭಾರತ ತಂಡವು ಈಗ ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಮೊದಲ ದಿನದಂದು ಲಂಚ್ ವಿರಾಮಕ್ಕೂ ಮುನ್ನ ಆಸಿಸ್ ತಂಡದ ಮೂರು ಪ್ರಮುಖ ಆಟಗಾರರ ವಿಕೆಟ್ ಕಬಳಿಸುವ ಮೂಲಕ ಮುನ್ನಡೆಯನ್ನು ಸಾಧಿಸಿತ್ತು. ಆದರೆ ತದನಂತರ ಟ್ರಾವಿಸ್ ಹೆಡ್ 163, ಹಾಗೂ ಸ್ಟೀವನ್ ಸ್ಮಿತ್ ಅವರ 121 ರನ್ ಗಳ ನೆರವಿನೊಂದಿಗೆ ಎರಡನೇ ದಿನ ಒಟ್ಟು 469 ರನ್ ಗಳಿಸುವ ಮೂಲಕ ಸರ್ವಪತನವನ್ನು ಕಂಡಿತು.
ಟೀಮ್ ಇಂಡಿಯಾದ ಪರವಾಗಿ ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಪಡೆದರೆ ಶಮಿ ಹಾಗೂ ಠಾಕೂರ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
The five Indian wickets to fall were shared evenly between Australia’s five-man attack 👌
Report from another day 🇦🇺 dominated 👇#WTC23 | #AUSvIND
— ICC (@ICC) June 8, 2023
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಕುಂಟು ನೆಪ ನೀಡಿ ಅರ್ಜಿ ತಿರಸ್ಕರಿಸುವಂತಿಲ್ಲ- ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಇನ್ನೊಂದೆಡೆಗೆ ಮೊದಲ ಇನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ತಂಡವು ತಂಡದ ಮೊತ್ತ 74 ಆಗುವಷ್ಟರಲ್ಲಿ ರೋಹಿತ್ ಶರ್ಮ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ,ಚೆತೇಶ್ವರ ಪೂಜಾರ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಭಾರಿ ಆಘಾತವನ್ನು ಎದುರಿಸಿತು. ಭಾರತದ ಪರವಾಗಿ ರವೀಂದ್ರ ಜಡೇಜಾ 48 ರನ್ ಗಳನ್ನು ಗಳಿಸುವ ಮೂಲಕ ಬೃಹತ್ ಇನಿಂಗ್ಸ್ ಕಟ್ಟುವ ಸಂದರ್ಭದಲ್ಲಿಯೇ ವಿಕೆಟ್ ಒಪ್ಪಿಸಿದರು.
ಸದ್ಯ ಕ್ರೀಸ್ ನಲ್ಲಿ ಅಜಿಂಕ್ಯಾ ರಹಾನೆ 29, ಹಾಗೂ ಶ್ರೀಕರ್ ಭರತ್ 5 ರನ್ ಗಳೊಂದಿಗೆ ಆಡುತ್ತಿದ್ದಾರೆ.ಟೀಮ್ ಇಂಡಿಯಾ ಎರಡನೇ ದಿನದ ಮುಕ್ತಾಯಕ್ಕೆ 38 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 151 ರನ್ ಗಳನ್ನು ಗಳಿಸಿದೆ. ಮುನ್ನಡೆಯನ್ನು ಪಡೆಯಲು ಟೀಮ್ ಇಂಡಿಯಾಗೆ ಇನ್ನೂ 318 ರನ್ ಗಳ ಅಗತ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.