“ಈತನ ಎದುರು ಮಾತ್ರ ನಾನು ಬೌಲಿಂಗ್ ಮಾಡಲ್ಲ”- ವಿಶ್ವದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆದರಿದ್ದು ಯಾರಿಗೆ?

jasprit bumrah statement on romario shepherd: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌’ಗಳ ಗೆಲುವು ಸಾಧಿಸಿತ್ತು. ಇದು ಈ ಸೀಸನ್’ನ ಮೊದಲ ಜಯವಾಗಿದೆ.

Written by - Bhavishya Shetty | Last Updated : Apr 10, 2024, 04:24 PM IST
    • ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌’ಗಳ ಗೆಲುವು ಸಾಧಿಸಿತ್ತು
    • ರೊಮಾರಿಯೊ ಶೆಫರ್ಡ್ ಬ್ಯಾಟಿಂಗ್ ಬಗ್ಗೆ ಕೊಂಡಾಡಿದ ಜಸ್ಪ್ರೀತ್ ಬುಮ್ರಾ
    • ರೊಮಾರಿಯೊ ಶೆಫರ್ಡ್ ಅದ್ಭುತ ಪ್ರದರ್ಶನದಿಂದ ತಂಡಕ್ಕೆ ಗೆಲುವು
“ಈತನ ಎದುರು ಮಾತ್ರ ನಾನು ಬೌಲಿಂಗ್ ಮಾಡಲ್ಲ”- ವಿಶ್ವದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆದರಿದ್ದು ಯಾರಿಗೆ? title=
Jasprit Bumrah

jasprit bumrah statement on romario shepherd: ಮುಂಬೈ ಇಂಡಿಯನ್ಸ್ ಈ ಸೀಸಮ್’ನಲ್ಲಿ ಮೊದಲ ಗೆಲುವು ಸಾಧಿಸಿದ ಬಳಿಕ, ವಿಶ್ವದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು, ತಮ್ಮ ಸಹ ಆಟಗಾರ ರೊಮಾರಿಯೊ ಶೆಫರ್ಡ್ ಅವರ ಬ್ಯಾಟಿಂಗ್ ಬಗ್ಗೆ ಕೊಂಡಾಡಿದ್ದಾರೆ.  

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌’ಗಳ ಗೆಲುವು ಸಾಧಿಸಿತ್ತು. ಇದು ಈ ಸೀಸನ್’ನ ಮೊದಲ ಜಯವಾಗಿದೆ. ಆಲ್ ರೌಂಡರ್ ರೊಮಾರಿಯೊ ಶೆಫರ್ಡ್ ಅವರ ಅದ್ಭುತ ಪ್ರದರ್ಶನದಿಂದ ತಂಡಕ್ಕೆ ಗೆಲುವು ಲಭಿಸಿದ್ದು, ಇದೇ ಕಾರಣದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: Sandalwood Actress: 3 ಮದುವೆಯಾದ್ರೂ ತಪ್ಪಲಿಲ್ಲ ನರಕಯಾತನೆ.. ಅಷ್ಟು ದೊಡ್ಡ ಮಗಳಿದ್ದ ನಟಿ ಜೂಲಿ ಲಕ್ಷ್ಮೀ ಪ್ರೀತಿಸಿ ವಿವಾಹವಾಗಿದ್ದು ಯಾರನ್ನು ಗೊತ್ತಾ? 

18ನೇ ಓವರ್‌’ನಲ್ಲಿ ಹಾರ್ದಿಕ್ ಪಾಂಡ್ಯ ಔಟಾದ ನಂತರ ರೊಮಾರಿಯೊ ಶೆಫರ್ಡ್ ಕ್ರೀಸ್‌’ಗೆ ಬಂದರು. ಶೆಫರ್ಡ್ ಆರನೇ ವಿಕೆಟ್‌’ಗೆ ಕೇವಲ 13 ಎಸೆತಗಳಲ್ಲಿ 53 ರನ್ ಜೊತೆಯಾಟ ನಡೆಸಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅಂದಹಾಗೆ ಕೇವಲ 10 ಎಸೆತಗಳಲ್ಲಿ 39 ರನ್ ಗಳಿಸಿದ್ದು, ಇನ್ನಿಂಗ್ಸ್’ನಲ್ಲಿ ಮೂರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌’ ಸೇರಿದ್ದವು.

ಅಂದಹಾಗೆ ಈ ನಂತರ ಡ್ರೆಸ್ಸಿಂಗ್ ರೂಂ ವಿಡಿಯೋ ಶೇರ್ ಮಾಡಿರುವ ಮುಂಬೈ ಇಂಡಿಯನ್ಸ್, ಮುಖ್ಯ ಕೋಚ್ ಮಾರ್ಕ್ ಬೌಚರ್ ಅವರು ಜಸ್ಪ್ರೀತ್ ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್’ಗೆ ಪ್ರಶಸ್ತಿಯನ್ನು ನೀಡಿದ್ದರು. ಅದೇ ಸಂದರ್ಭದಲ್ಲಿ ಮಾತನಾಡಿದ ಬುಮ್ರಾ, ರೊಮಾರಿಯೊ ಶೆಫರ್ಡ್ ಅವರಿಗೆ ಬೌಲ್ ಮಾಡಲು ಬಯಸುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ.

"ಗೆಲುವನ್ನು ಪಡೆದಿರುವುದು ನಿಜವಾಗಿಯೂ ಖುಷಿ ತಂದಿದೆ. ಈ ವಾತಾವರಣವು ತುಂಬಾ ಶಕ್ತಿಯುತವಾಗಿದ್ದು, ವಿರಾಮದ ನಂತರ ನಮ್ಮ ತಂಡವು ಉಲ್ಲಾಸಗೊಂಡಿದೆ. ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ಇನ್ನು ರೊಮಾರಿಯೊ ಶೆಫರ್ಡ್‌ಗೆ ವಿಶೇಷವಾದ ಧನ್ಯವಾದ ತಿಳಿಸುತ್ತೇನೆ. ಆತ ಆಟ ಮುಕ್ತಾಯಗೊಳಿಸುವ ರೀತಿ ನೋಡುವುದೇ ಅದ್ಭುತ. ನಾನು ಅವರಿಗೆ ಬೌಲಿಂಗ್ ಮಾಡಬೇಕಾಗಿಲ್ಲ ಎಂಬುದೇ ನನಗೆ ಖುಷಿ” ಎಂದು ತಮಾಷೆಯ ಮಾತುಗಳನ್ನಾಡಿದ್ದಾರೆ ಬುಮ್ರಾ.

ಇದನ್ನೂ ಓದಿ: ಸಹೋದರಿಯ ಸ್ನೇಹಿತೆಯನ್ನೇ ಪಟಾಯಿಸಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ಈತ! ಆದ್ರೆ ವಿವಾಹದ ಬಳಿಕ ಇಬ್ಭಾಗವಾಯ್ತಂತೆ ಮನೆ!!

ಅಂದಹಾಗೆ ಮುಂಬೈ ಇಂಡಿಯನ್ಸ್ ಗುರುವಾರ ಅಂದರೆ ಏಪ್ರಿಲ್ 11 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ವಿರುದ್ಧ ಸೆಣಸಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News