ಶೀಘ್ರದಲ್ಲೇ ಶುಭ್ಮನ್ ಗಿಲ್-ಸಾರಾ ತೆಂಡೂಲ್ಕರ್ ಮದುವೆ: ಸೀಕ್ರೆಟ್ ರಿವೀಲ್ ಮಾಡಿದ ಸ್ಟಾರ್ ಕ್ರಿಕೆಟಿಗ!

Shubman Gill-Sara Tendulkar Marriage Rumour: ಇತ್ತೀಚೆಗೆಯಷ್ಟೇ ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮತ್ತು ಮುಂಬೈನಲ್ಲಿ ನಡೆದ ಶ್ರೀಲಂಕಾ ನಡುವಿನ ಭಾರತ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಸಾರಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ಬೆನಲ್ಲೇ ಇವರಿಬ್ಬರ ಬಗ್ಗೆ ಭಾರೀ ಚರ್ಚೆಗಳು ಪ್ರಾರಂಭವಾದವು,

Written by - Bhavishya Shetty | Last Updated : Nov 10, 2023, 06:07 PM IST
    • ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಮದುವೆ ವದಂತಿ
    • ಗಿಲ್ ಮತ್ತು ಸಾರಾ ಮದುವೆ ಬಗ್ಗೆ ಮಾತನಾಡಿದ ಆಟಗಾರ
    • ಚಿರಾಗ್ ಸೂರಿ ಯುಎಇಯ ಪ್ರಸಿದ್ಧ ಕ್ರಿಕೆಟಿಗ
ಶೀಘ್ರದಲ್ಲೇ ಶುಭ್ಮನ್ ಗಿಲ್-ಸಾರಾ ತೆಂಡೂಲ್ಕರ್ ಮದುವೆ: ಸೀಕ್ರೆಟ್ ರಿವೀಲ್ ಮಾಡಿದ ಸ್ಟಾರ್ ಕ್ರಿಕೆಟಿಗ! title=
Shubman Gill and Sara Tendulkar Marriage Rumour

Shubman Gill-Sara Tendulkar Marriage Rumour: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌’ಮನ್ ಶುಭ್ಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ಶಮಿ ಜೊತೆ 2ನೇ ಮದುವೆಯಾಗೋಕೆ ರೆಡಿಯಾದ ಖ್ಯಾತ ನಟಿ… ಆದ್ರೆ ಈ ಷರತ್ತಿನ ಮೇಲೆ!!

ಇತ್ತೀಚೆಗೆಯಷ್ಟೇ ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮತ್ತು ಮುಂಬೈನಲ್ಲಿ ನಡೆದ ಶ್ರೀಲಂಕಾ ನಡುವಿನ ಭಾರತ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಸಾರಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ಬೆನಲ್ಲೇ ಇವರಿಬ್ಬರ ಬಗ್ಗೆ ಭಾರೀ ಚರ್ಚೆಗಳು ಪ್ರಾರಂಭವಾದವು, ಇದೀಗ ಯುಎಇ ಕ್ರಿಕೆಟಿಗರೊಬ್ಬರು ಸಂದರ್ಶನವೊಂದರಲ್ಲಿ ಗಿಲ್ ಮತ್ತು ಸಾರಾ ಮದುವೆ ಬಗ್ಗೆ ಮಾತನಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಆಟಗಾರನ ಸಂದರ್ಶನದ ವೀಡಿಯೊ ಸಂಚಲನ ಸೃಷ್ಟಿಸಿದೆ.  

ಯುಎಇ ಕ್ರಿಕೆಟಿಗನ ವಿಡಿಯೋ ವೈರಲ್:

ಯುಎಇ ಕ್ರಿಕೆಟಿಗ ಚಿರಾಗ್ ಸೂರಿ ಅವರ ಸಂದರ್ಶನದ ವಿಡಿಯೋ ಇದಾಗಿದೆ. ಆದರೆ, ಈ ವಿಡಿಯೋ ಯಾವಾಗದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕಳೆದ ಒಂದೆರಡು ದಿನಗಳಿಂದ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹೆಚ್ಚು ಚರ್ಚೆಯಾಗುತ್ತಿದೆ. ಈ ವಿಡಿಯೋದಲ್ಲಿ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಸಂಬಂಧದಲ್ಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಮದುವೆಯಾಗುವುದಾಗಿಯೂ ಚಿರಾಗ್ ಹೇಳಿದ್ದಾರೆ.

ಈ ಸಂದರ್ಶನದಲ್ಲಿ ಚಿರಾಗ್ ಸೂರಿ ಬಳಿ ಪ್ರಶ್ನೆಯೊಂದನ್ನು ಕೇಳಲಾಗಿತ್ತು, ಅದೇನೆಂದರೆ “ನಿಮಗೆ ತಿಳಿದಿರುವಂತೆ ಮುಂದೆ ಮದುವೆಯಾಗಲಿರುವ ಕ್ರಿಕೆಟಿಗ ಯಾರು?” ಎಂದು. ಇದಕ್ಕೆ ಉತ್ತರಿಸಿದ ಚಿರಾಗ್, “ಶುಭ್ಮನ್ ಗಿಲ್ ಮತ್ತು ಸಾರಾ... ಸಚಿನ್ ತೆಂಡೂಲ್ಕರ್ ಅವರ ಮಗಳು. ನೀವು ಯಾವುದನ್ನಾದರೂ ಹೆಚ್ಚು ದೂರವಿರಲು ಪ್ರಯತ್ನಿಸಿದರೆ, ಅದು ಮತ್ತಷ್ಟು ಹತ್ತಿರವಾಗುತ್ತದೆ. ಈ ಇಬ್ಬರಲ್ಲೂ ಅದೇ ಆಗುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: “ಮೊಮ್ಮಗನಿಗೆ ಯಾರ ಕಣ್ಣೂ ಬೀಳದಿರಲಿ…” ಎನ್ನುತ್ತಾ ದೃಷ್ಟಿ ತೆಗೆದ ರಚಿನ್ ರವೀಂದ್ರ ಅಜ್ಜಿ! ವಿಡಿಯೋ

ಚಿರಾಗ್ ಸೂರಿ ಯುಎಇಯ ಪ್ರಸಿದ್ಧ ಕ್ರಿಕೆಟಿಗ. 37 ODI ಮತ್ತು 31 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು ಏಕದಿನದಲ್ಲಿ 946 ರನ್ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 819 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News