ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಯಾವೊಬ್ಬ ಭಾರತೀಯ ನಾಯಕನೂ ಮಾಡಲು ಸಾಧ್ಯವಾಗದ ವಿಶೇಷ ರೆಕಾರ್ಡ್ ಇದು!

Rohit Sharma World Records: ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಸಿಕ್ಸರ್ ಬಾರಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಇಡೀ ಟೂರ್ನಿಯಂತೆಯೇ ತಂಡಕ್ಕೆ ಭರ್ಜರಿ ಆರಂಭ ನೀಡಿ 29 ಎಸೆತಗಳಲ್ಲಿ 47 ರನ್ ಗಳಿಸಿದ್ದಾರೆ.

Written by - Bhavishya Shetty | Last Updated : Nov 15, 2023, 03:48 PM IST
    • 2023ರ ODI ವಿಶ್ವಕಪ್‌’ನಲ್ಲಿ ಸಿಕ್ಸರ್‌’ಗಳ ಸುರಿಮಳೆಗೈದ ರೋಹಿತ್ ಶರ್ಮಾ
    • ಒಂದಲ್ಲ, ಎರಡಲ್ಲ ಇದೀಗ ಮೂರು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ
    • ನ್ಯೂಜಿಲೆಂಡ್ ವಿರುದ್ಧ ಮೂರು ಸಿಕ್ಸರ್ ಬಾರಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ
ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಯಾವೊಬ್ಬ ಭಾರತೀಯ ನಾಯಕನೂ ಮಾಡಲು ಸಾಧ್ಯವಾಗದ ವಿಶೇಷ ರೆಕಾರ್ಡ್ ಇದು!   title=
Rohit Sharma

IND vs NZ, Rohit Sharma World Records: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2023ರ ODI ವಿಶ್ವಕಪ್‌’ನಲ್ಲಿ ಸಿಕ್ಸರ್‌’ಗಳ ಸುರಿಮಳೆಗೈದಿದ್ದಾರೆ. ಈ ಟೂರ್ನಿಯಲ್ಲಿ ಒಂದಲ್ಲ, ಎರಡಲ್ಲ ಇದೀಗ ಮೂರು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಈ ಟೂರ್ನಿಯ ಆರಂಭದಲ್ಲೇ ರೋಹಿತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದರು. ಆ ಬಳಿಕ ಕಳೆದ ಪಂದ್ಯದಲ್ಲಿ, ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ಗಳ ಸಿಡಿಸಿದ ದಾಖಲೆಯನ್ನು ಬರೆದರು,

ಇದನ್ನೂ ಓದಿ:  ಭಾರತ vs ನ್ಯೂಜಿಲೆಂಡ್ ಪಂದ್ಯಕ್ಕೆ 2019ರ ಅಂಪೈರ್ಸ್! ಇವರಿದ್ದಾಗ 3 ಪಂದ್ಯಗಳಲ್ಲಿ ಸೋತಿದ್ದ ಟೀಂ

ಇದೀಗ ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಸಿಕ್ಸರ್ ಬಾರಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಇಡೀ ಟೂರ್ನಿಯಂತೆಯೇ ತಂಡಕ್ಕೆ ಭರ್ಜರಿ ಆರಂಭ ನೀಡಿ 29 ಎಸೆತಗಳಲ್ಲಿ 47 ರನ್ ಗಳಿಸಿದ್ದಾರೆ.

ಹಿಟ್‌ ಮ್ಯಾನ್‌ ಮತ್ತೊಂದು ವಿಶ್ವ ದಾಖಲೆ

ರೋಹಿತ್ ಶರ್ಮಾ ಕ್ರಿಸ್ ಗೇಲ್ ಅವರ ಅತಿ ಹೆಚ್ಚು ಸಿಕ್ಸರ್‌’ಗಳ ದಾಖಲೆಯಲ್ಲಿ ಬ್ರೇಕ್ ಮಾಡಿದ್ದಾರೆ. ಗೇಲ್ ಏಕದಿನ ವಿಶ್ವಕಪ್‌’ನಲ್ಲಿ 49 ಸಿಕ್ಸರ್‌’ಗಳನ್ನು ಬಾರಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಮೂರು ಸಿಕ್ಸರ್‌’ಗಳನ್ನು ಬಾರಿಸುವ ಮೂಲಕ ರೋಹಿತ್ ವಿಶ್ವಕಪ್‌’ನಲ್ಲಿ 50 ಸಿಕ್ಸರ್‌’ಗಳನ್ನು ಪೂರೈಸಿದ್ದಲ್ಲದೆ, ಈ ವಿಶ್ವ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್‌’ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್.

ಇದರೊಂದಿಗೆ ರೋಹಿತ್ ಶರ್ಮಾ ವಿಶ್ವಕಪ್‌’ನಲ್ಲಿ 1000 ರನ್ ಪೂರೈಸಿದರು. ಸೆಮಿಫೈನಲ್‌’ನಲ್ಲಿ ಭಾರತವನ್ನು ಮುನ್ನಡೆಸಿದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಎಂಎಸ್ ಧೋನಿ 2015ರ ವಿಶ್ವಕಪ್‌’ನಲ್ಲಿ 33ನೇ ವಯಸ್ಸಿನಲ್ಲಿ ತಂಡವನ್ನು ಸೆಮಿಫೈನಲ್‌’ಗೆ ಕೊಂಡೊಯ್ದಿದ್ದರು. ನಂತರ ವಿರಾಟ್ ಕೊಹ್ಲಿ 2019 ರಲ್ಲಿ 30 ನೇ ವಯಸ್ಸಿನಲ್ಲಿ ಭಾರತದ ನಾಯಕರಾಗಿದ್ದರು.

ಏಕದಿನ ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌

  • 50 – ರೋಹಿತ್ ಶರ್ಮಾ*
  • 49 - ಕ್ರಿಸ್ ಗೇಲ್
  • 43 - ಗ್ಲೆನ್ ಮ್ಯಾಕ್ಸ್‌ವೆಲ್
  • 37 - ಎಬಿ ಡಿವಿಲಿಯರ್ಸ್
  • 37 - ಡೇವಿಡ್ ವಾರ್ನರ್

ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌

  • 27 – ರೋಹಿತ್ ಶರ್ಮಾ (2023)*
  • 26 – ಕ್ರಿಸ್ ಗೇಲ್ (2015)
  • 22 - ಇಯಾನ್ ಮಾರ್ಗನ್ (2019)
  • 22 – ಗ್ಲೆನ್ ಮ್ಯಾಕ್ಸ್‌ವೆಲ್ (2023)*
  • 21 – ಎಬಿ ಡಿವಿಲಿಯರ್ಸ್ (2015)
  • 21 – ಕ್ವಿಂಟನ್ ಡಿ ಕಾಕ್ (2023)*

ಇದನ್ನೂ ಓದಿ: ಸೌರವ್ ಗಂಗೂಲಿ ಅಧಿಕಾರ ಕಳೆದುಕೊಳ್ಳಲು ಕಾರಣ ಜೈ ಶಾ ಮಾಡಿದ ಕುತಂತ್ರ! ಸ್ಟಾರ್ ಕ್ರಿಕೆಟಿಗನ ಹೇಳಿಕೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News