Rohit Sharma : ವಾಂಖೆಡೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

IND vs SL : ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ODI ವಿಶ್ವಕಪ್ 2023 ಪಂದ್ಯದ ಎರಡನೇ ಎಸೆತದಲ್ಲಿ ಶ್ರೀಲಂಕಾದ ದಿಲ್ಶನ್ ಮಧುಶಂಕ ಅವರಿಂದ ಕ್ಲೀನ್ ಬೌಲ್ಡ್ ಆದರು.   

Written by - Chetana Devarmani | Last Updated : Nov 2, 2023, 03:45 PM IST
  • ಭಾರತ ತಂಡದ ನಾಯಕ ರೋಹಿತ್ ಶರ್ಮಾ
  • ವಾಂಖೆಡೆಯಲ್ಲಿ ರೋಹಿತ್ ಶರ್ಮಾ ದಾಖಲೆ
  • ಹೊಸ ಇತಿಹಾಸ ಬರೆದ ರೋಹಿತ್‌ ಶರ್ಮಾ
Rohit Sharma : ವಾಂಖೆಡೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ title=
Rohit Sharma

Rohit Sharma Records : ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ODI ವಿಶ್ವಕಪ್ 2023 ಪಂದ್ಯದ ಎರಡನೇ ಎಸೆತದಲ್ಲಿ ಶ್ರೀಲಂಕಾದ ದಿಲ್ಶನ್ ಮಧುಶಂಕ ಅವರಿಂದ ಕ್ಲೀನ್ ಬೌಲ್ಡ್ ಆದರು.  ರೋಹಿತ್ ಪಂದ್ಯದ ಮೊದಲ ಎಸೆತದಲ್ಲಿ ಫೈನ್ ಲೆಗ್ ಕಡೆಗೆ ಬೌಂಡರಿ ಬಾರಿಸುವುದರ ಜೊತೆ ಆರಂಭಿಸಿದ್ದರು ಆದರೆ ಎರಡನೇ ಎಸೆತದಲ್ಲಿ ಔಟಾದರು.

ಇದನ್ನೂ ಓದಿ : ಶ್ರೀಲಂಕಾ ವಿರುದ್ದದ ಪಂದ್ಯದಿಂದ ಈ ಆಟಗಾರ ಔಟ್ ! ಎಂಟ್ರಿ ಕೊಡಲಿದ್ದಾರೆ ಮ್ಯಾಚ್ ವಿನ್ನರ್ 

ದಿಲ್ಶನ್ ಮಧುಶಂಕ ಎಸೆದ ಚೆಂಡು ಆಫ್ ಸ್ಟಂಪ್ ಮೇಲೆ ಕ್ಯಾಂಟರ್ ಮಾಡಿತು. ಚೆಂಡಿನ ವೇಗಕ್ಕೆ ಸ್ಟಂಪ್‌ ಕಿತ್ತು ಹೋಯಿತು. ಎರಡನೇ ಎಸೆತಕ್ಕೆ ರೋಹಿತ್‌ ಶರ್ಮಾ ವಿಕೆಟ್‌ ಕ್ರಿಕೆಟ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು. ಮುಂಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತವು ಸತತ ಆರು ಪಂದ್ಯಗಳನ್ನು ಗೆದ್ದಿದೆ. 

 

 
 
 
 

 
 
 
 
 
 
 
 
 
 
 

A post shared by ICC (@icc)

 

2023 ರ ODI ವಿಶ್ವಕಪ್‌ನಲ್ಲಿ ಭಾರತ ಏಕೈಕ ಅಜೇಯ ತಂಡವಾಗಿದೆ. ಭಾರತವು ಕಳೆದ ಆರು ಪಂದ್ಯಗಳಲ್ಲಿ ಒಮ್ಮೆ ಮಾತ್ರ ಮೊದಲು ಬ್ಯಾಟ್ ಮಾಡಿದೆ.  

ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ 

ಬೇಗ ಔಟಾಗುವ ಮೂಲಕವೂ ರೋಹಿತ್‌ ಶರ್ಮಾ ದಾಖಲೆ ಬರೆದಿದ್ದಾರೆ. ಇಡೀ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ನಾಯಕ ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌​ನಲ್ಲಿ ನಾಯಕನಾಗಿ ತವರು ಮೈದಾನದಲ್ಲಿ ಆಡಿದ ಮೊದಲ ಪಂದ್ಯ ಇದಾಗಿದೆ. ವಿಶ್ವಕಪ್‌ನಲ್ಲಿ ನಾಯಕನಾಗಿ ತವರಿನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಟೀಂ ಇಂಡಿಯಾ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್‌ ಶರ್ಮಾ ಪಾತ್ರರಾಗಿದ್ದಾರೆ. ಕಡಿಮೆ ರನ್‌ಗೆ ಔಟಾದರೂ ರೋಹಿತ್‌ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ ಪಂದ್ಯದಲ್ಲಿ ಪಾಂಡ್ಯ ಆಡುತ್ತಾರೋ ಇಲ್ಲವೋ? ನಾಯಕ ರೋಹಿತ್ ಶರ್ಮಾ ಕೊಟ್ಟ ಅಪ್ಡೇಟ್ ಹೀಗಿದೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News