“ಕೊಹ್ಲಿ ಸ್ವಾರ್ಥಿ… ರೋಹಿತ್”- 49ನೇ ಶತಕ ಸಿಡಿಸಿದ ವಿರಾಟ್ ಬಗ್ಗೆ ಪಾಕ್ ಆಟಗಾರ ಹೇಳಿದ್ದೇನು?

Mohammad Hafeez Statement on Virat Kohli: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಭಾರತ 326 ರನ್ ಗಳಿಸಿತ್ತು. ಈ ವೇಳೆ ಕೊಹ್ಲಿ 121 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಇದು ಕೊಹ್ಲಿಯ 49ನೇ ಏಕದಿನ ಶತಕವಾಗಿತ್ತು. ದೇಶವಷ್ಟೇ ಅಲ್ಲ ಇಡೀ ಕ್ರಿಕೆಟ್ ಜಗತ್ತು ಕೊಹ್ಲಿಯನ್ನು ಅಭಿನಂದಿಸಿದೆ.

Written by - Bhavishya Shetty | Last Updated : Nov 6, 2023, 09:13 PM IST
    • ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ
    • ಪಾಕಿಸ್ತಾನಿ ಟಿವಿ ಚಾನೆಲ್‌’ನಲ್ಲಿ ಮಾತನಾಡಿದ ಮೊಹಮ್ಮದ್ ಹಫೀಜ್
    • ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮಾತ್ರ ಅವರನ್ನು ಸ್ವಾರ್ಥಿ ಎಂದು ಕರೆದಿದ್ದಾರೆ
“ಕೊಹ್ಲಿ ಸ್ವಾರ್ಥಿ… ರೋಹಿತ್”- 49ನೇ ಶತಕ ಸಿಡಿಸಿದ ವಿರಾಟ್ ಬಗ್ಗೆ ಪಾಕ್ ಆಟಗಾರ ಹೇಳಿದ್ದೇನು?  title=
Mohammad Hafeez Statement About Virat Kohli

Mohammad Hafeez Statement on Virat Kohli: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಶತಕದ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದು ಶತಕ ಬಾರಿಸಿದರೂ ಸಹ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಮತ್ತು ಸಚಿನ್ ದಾಖಲೆ ಮುರಿಯುವ ಹಂತಕ್ಕೆ ತಲುಪುತ್ತಾರೆ.

ಈ ಸ್ಮರಣೀಯ ಇನ್ನಿಂಗ್ಸ್‌’ನ ಬಳಿಕ ಎಲ್ಲರೂ ಕೊಹ್ಲಿಯನ್ನು ಅಭಿನಂದಿಸಿದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮಾತ್ರ ಅವರನ್ನು ಸ್ವಾರ್ಥಿ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಈ 4 ರಾಶಿಗೆ ದೀಪಾವಳಿ ಮುಗಿಯುತ್ತಿದ್ದಂತೆ ಶುಕ್ರದೆಸೆ ಶುರು: ಮಹಾಲಕ್ಷ್ಮೀ ಒಲುಮೆಯಿಂದ ಅದೃಷ್ಟ-ಸಂಪತ್ತಿನ ಜೊತೆ ಕೈ ಸೇರಲಿದೆ ಸರ್ಕಾರಿ ನೌಕರಿ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಭಾರತ 326 ರನ್ ಗಳಿಸಿತ್ತು. ಈ ವೇಳೆ ಕೊಹ್ಲಿ 121 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಇದು ಕೊಹ್ಲಿಯ 49ನೇ ಏಕದಿನ ಶತಕವಾಗಿತ್ತು. ದೇಶವಷ್ಟೇ ಅಲ್ಲ ಇಡೀ ಕ್ರಿಕೆಟ್ ಜಗತ್ತು ಕೊಹ್ಲಿಯನ್ನು ಅಭಿನಂದಿಸಿದೆ. 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕೊಹ್ಲಿಗೆ ಆ ದಿನ ವಿಶೇಷವಾಗಿತ್ತು.

327 ರನ್‌’ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 83 ರನ್‌’ಗಳಿಗೆ ಆಲೌಟ್ ಆಗಿದ್ದರೆ, ಭಾರತ 243 ರನ್‌’ಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವಿರಾಟ್ ಕೊಹ್ಲಿ ಪಂದ್ಯದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು.

'ವಿರಾಟ್ ಕೊಹ್ಲಿ ಸ್ವಾರ್ಥಿ':

ಪಾಕಿಸ್ತಾನಿ ಟಿವಿ ಚಾನೆಲ್‌’ನಲ್ಲಿ ಮಾತನಾಡಿದ ಮೊಹಮ್ಮದ್ ಹಫೀಜ್, “97 ರನ್ ಗಳಿಸಿದ ನಂತರ ಕೊಹ್ಲಿ ತೋರಿದ ಫಾರ್ವರ್ಡ್ ವಿಧಾನವು ಸರಿಯಾಗಿಲ್ಲ. 49ನೇ ಓವರ್‌’ನಲ್ಲಿ ನೀವು ನಿಮ್ಮ ದಾಖಲೆಯ ಬಗ್ಗೆ ಯೋಚಿಸುತ್ತಿದ್ದೀರಿ ಹೊರತು ತಂಡದ ಬಗ್ಗೆ ಅಲ್ಲ. 98ರ ನಂತರ 99 ತಲುಪಲು 1 ರನ್ ತೆಗೆದುಕೊಳ್ಳಲು ಬಯಸಿದರು, ನಂತರ 100 ತಲುಪಲು ಮತ್ತೊಂದು ರನ್. ಇದರರ್ಥ ನೀವು ನಿಮ್ಮ ದಾಖಲೆಯ ಬಗ್ಗೆ ಯೋಚಿಸುತ್ತಿದ್ದೀರಿ ಎಂದರ್ಥ” ಎಂದರು

“ದೊಡ್ಡ ಶಾಟ್ ಹೊಡೆಯುವಾಗ ಒಂದು ರನ್ ಬಂದರೆ ಅದು ಪರವಾಗಿಲ್ಲ, ಆದರೆ ಅವರ ಉದ್ದೇಶ ಒಂದು ರನ್ ಗಳಿಸುವುದು. ಸರಿ, ಜನರು ಅವರನ್ನು ಹೊಗಳುತ್ತಾರೆ, ನಾನು ಅವರ ದೊಡ್ಡ ಅಭಿಮಾನಿ, ಆದರೆ ಈ ಅಂಶದಲ್ಲಿ ನಾನು ಅವರ ಬೆಂಬಲದಲ್ಲಿಲ್ಲ. ಇದು ಸ್ವಾರ್ಥದ ಆಟ. ಕೊಹ್ಲಿಗೆ ರೋಹಿತ್ ಶರ್ಮಾ ಅವರಂತೆ ನಿಸ್ವಾರ್ಥ ಆಟ ಆಡಬಹುದಿತ್ತು” ಎಂದಿದ್ದಾರೆ.

ಇದನ್ನೂ ಓದಿ: ಭಾರತದ ನಿಜವಾದ ಮ್ಯಾಚ್ ವಿನ್ನರ್ ಶಮಿ, ಕೊಹ್ಲಿ, ಸಿರಾಜ್ ಅಲ್ಲ.. ಈ ಆಟಗಾರ!

ಈ ಹೇಳಿಕೆ ವೈರಲ್ ಆಗಿದ್ದೇ ತಡ, ರೊಚ್ಚಿಗೆದ್ದ ಕೊಹ್ಲಿ ಫ್ಯಾನ್ಸ್, “ವಿರಾಟ್ ಕೊಹ್ಲಿ ಯಾರಿಗೂ ತನ್ನನ್ನು ತಾನು ಸಾಬೀತುಪಡಿಸುವ ಅಗತ್ಯವಿಲ್ಲ, ಇದು ವಿಶ್ವಕಪ್ 2023 ರಲ್ಲಿ ಅವರ ಎರಡನೇ ಶತಕವಾಗಿದೆ ಆದರೆ ಅವರು ಮೂರು ಬಾರಿ ತಮ್ಮ ಶತಕದ ಹತ್ತಿರ ಬಂದಿದ್ದರು. ವಿಶ್ವಕಪ್‌’ನಲ್ಲಿ ಅವರ ಪ್ರಯಾಣವು ಅದ್ಭುತವಾಗಿದೆ, ಅವರು ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್. ಕೊಹ್ಲಿ 8 ಪಂದ್ಯಗಳಲ್ಲಿ 543 ರನ್ ಗಳಿಸಿದ್ದಾರೆ” ಎಂದು ಮೊಹಮ್ಮದ್ ಹಫೀಜ್ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News