ಧರ್ಮಶಾಲಾದಲ್ಲಿ ಗುಡುಗು ಸಹಿತ ಭಾರೀ ಮಳೆ: ಭಾರತ-ನ್ಯೂಜಿಲೆಂಡ್ ಪಂದ್ಯ ನಡೆಯೋದೇ ಡೌಟ್…!

Pitch Report and weather update: ನ್ಯೂಜಿಲೆಂಡ್ ಮತ್ತು ಭಾರತ ಎರಡೂ ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿವೆ. ಆದರೆ ಉತ್ತಮ ನೆಟ್ ರನ್ ರೇಟ್‌ನಿಂದಾಗಿ, ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಂಬರ್-1 ಮತ್ತು ಭಾರತವು ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ.

Written by - Bhavishya Shetty | Last Updated : Oct 21, 2023, 10:11 PM IST
    • ನ್ಯೂಜಿಲೆಂಡ್ ಮತ್ತು ಭಾರತ ಎರಡೂ ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿವೆ
    • ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇದುವರೆಗೆ ಸೋಲು ಕಂಡಿಲ್ಲ
    • ವೇಗದ ಬೌಲರ್‌’ಗಳಿಗೆ ಈ ಮೈದಾನ ಸಹಾಯ ಮಾಡಲಿದೆ
ಧರ್ಮಶಾಲಾದಲ್ಲಿ ಗುಡುಗು ಸಹಿತ ಭಾರೀ ಮಳೆ: ಭಾರತ-ನ್ಯೂಜಿಲೆಂಡ್ ಪಂದ್ಯ ನಡೆಯೋದೇ ಡೌಟ್…! title=
India vs New Zealand

Pitch Report and weather update: ವಿಶ್ವಕಪ್‌’ನ 21 ನೇ ಪಂದ್ಯವು ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ಪಂದ್ಯಾವಳಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋಲದ ಎರಡು ತಂಡಗಳು ಮುಖಾಮುಖಿಯಾಗಲಿವೆ. 2023ರ ವಿಶ್ವಕಪ್‌’ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇದುವರೆಗೆ ಯಾವೊಂದು ತಂಡದ ವಿರುದ್ಧವೂ ಸೋಲು ಕಂಡಿಲ್ಲ.

ಇದನ್ನೂ ಓದಿ: “ಕೊಹ್ಲಿಯದ್ದು ಸ್ವಾರ್ಥದ ಸೆಂಚುರಿ..!- ವಿರಾಟ್ ಶತಕದಾಟದ ಬಗ್ಗೆ ಚೇತೇಶ್ವರ ಪೂಜಾರ ಹೇಳಿದ್ದೇನು?

ನ್ಯೂಜಿಲೆಂಡ್ ಮತ್ತು ಭಾರತ ಎರಡೂ ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿವೆ. ಆದರೆ ಉತ್ತಮ ನೆಟ್ ರನ್ ರೇಟ್‌ನಿಂದಾಗಿ, ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಂಬರ್-1 ಮತ್ತು ಭಾರತವು ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯ ಧರ್ಮಶಾಲಾದ ಎಚ್‌’ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ವೇಗದ ಬೌಲರ್‌’ಗಳಿಗೆ ಈ ಮೈದಾನ ಸಹಾಯ ಮಾಡಲಿದೆ. ಇನ್ನು ಬ್ಯಾಟ್ಸ್’ಮನ್’ಗಳಿಗೂ ಈ ಮೈದಾನ ಉತ್ತಮವಾಗಿದೆ. ಇನ್ನು ಈ ಮೈದಾನವು ಇತರ ಮೈದಾನಗಳಿಗಿಂತ ಚಿಕ್ಕದ್ದು, ಹಾಗಾಗಿಯೇ ಇಲ್ಲಿಯೂ ಬೌಂಡರಿ, ಸಿಕ್ಸರ್’ಗಳ ಮಳೆ ಕಾಣಬಹುದಾಗಿದೆ.

ಈ ವಿಶ್ವಕಪ್‌ ಟೂರ್ನಿಯಲ್ಲಿ ಇದುವರೆಗೆ ಈ ಮೈದಾನದಲ್ಲಿ ಒಟ್ಟು 3 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ ಗರಿಷ್ಠ ಸ್ಕೋರ್ 364 ರನ್ ಆಗಿದ್ದರೆ, ಕಡಿಮೆ ಸ್ಕೋರ್ 156 ರನ್.

ಹವಾಮಾನ ಇಲಾಖೆಯ ಪ್ರಕಾರ, ಭಾನುವಾರದಂದು ಇಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡುಬರಬಹುದು. ಇಂದು ಗುಡುಗು ಮಳೆ ಇದ್ದರೂ ಸಹ, ಪಂದ್ಯದ ವೇಳೆಗೆ ಮಳೆ ಬೀಳುವ ಸಾಧ್ಯತೆ ಕಡಿಮೆ ಇದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಔಟ್: ಉಪನಾಯಕನಾಗಿ 31ರ ಹರೆಯದ ಬಲಗೈ ಬ್ಯಾಟರ್’ಗೆ ಅವಕಾಶ

ನ್ಯೂಜಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ ಮತ್ತು ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News