20 ವರ್ಷಗಳ ಬಳಿಕ ಕೀವೀಸ್ ವಿರುದ್ಧ ಗೆದ್ದುಬೀಗಿದ ಟೀಂ ಇಂಡಿಯಾ: ಕೊಹ್ಲಿ-ಶಮಿ ಮೋಡಿಗೆ ಅಜೇಯ ‘ಭಾರತ’ಕ್ಕೆ ಭರ್ಜರಿ ಗೆಲುವು

IND vs NZ, World Cup 2023: ಟಾಸ್ ಗೆದ್ದ ಭಾರತ, ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 50 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 273 ರನ್ ಕಲೆಹಾಕಿತ್ತು.

Written by - Bhavishya Shetty | Last Updated : Oct 22, 2023, 10:11 PM IST
    • ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್ ಪಂದ್ಯ
    • ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು
    • ಮೊಹಮ್ಮದ್ ಶಮಿ ವಿಶ್ವಕಪ್’ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ
20 ವರ್ಷಗಳ ಬಳಿಕ ಕೀವೀಸ್ ವಿರುದ್ಧ ಗೆದ್ದುಬೀಗಿದ ಟೀಂ ಇಂಡಿಯಾ: ಕೊಹ್ಲಿ-ಶಮಿ ಮೋಡಿಗೆ ಅಜೇಯ ‘ಭಾರತ’ಕ್ಕೆ ಭರ್ಜರಿ ಗೆಲುವು title=
india vs new zealand

IND vs NZ, World Cup 2023: ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಈ ಮೂಲಕ ಸತತ 5 ಪಂದ್ಯಗಳಲ್ಲಿ ಗೆದ್ದು ಅಜೇಯರಾಗಿ ಉಳಿದಿದೆ.

ಟಾಸ್ ಗೆದ್ದ ಭಾರತ, ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 50 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 273 ರನ್ ಕಲೆಹಾಕಿತ್ತು. ಗೆಲುವಿನ ಗುರಿ ಬೆನ್ನತ್ತಿದ ಭಾರತ 48 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಕಲೆ ಹಾಕಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿದ್ದು ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಉಡೀಸ್: ವಿಶ್ವಕಪ್’ನಲ್ಲಿ ಇದುವರೆಗೆ ಯಾರೂ ಬರೆಯದ ದಾಖಲೆ

ಈ ಗೆಲುವಿನ ಬಳಿಕ ಟೀಂ ಇಂಡಿಯಾ 20 ವರ್ಷಗಳ ಬಳಿಕ ವಿಶ್ವಕಪ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದೆ.

ಮೊಹಮ್ಮದ್ ಶಮಿ ದಾಖಲೆ:

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್’ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 5 ವಿಕೆಟ್ ಪಡೆದು ಕಿವೀಸ್ ತಂಡವನ್ನು 273 ರನ್‌’ಗಳಿಗೆ ಸೀಮಿತಗೊಳಿಸಿದ್ದಾರೆ. ಶಮಿ ತಮ್ಮ ವೃತ್ತಿಜೀವನದ ಮೂರನೇ ಏಕದಿನ ವಿಶ್ವಕಪ್ ಆಡುತ್ತಿದ್ದಾರೆ. ಇಂದು ಕಬಳಿಸಿದ 5 ವಿಕೆಟ್ ಸೇರಿ ಇದುವರೆಗೆ 36 ವಿಕೆಟ್‌’ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ. ಇದು ಅವರ 12ನೇ ವಿಶ್ವಕಪ್ ಪಂದ್ಯವಾಗಿದೆ. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ 5 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ (ಏಕದಿನ ವಿಶ್ವಕಪ್‌’ನಲ್ಲಿ ಎರಡು ಬಾರಿ 5 ವಿಕೆಟ್ ಪಡೆದ) ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ರವೀಂದ್ರ ಜಡೇಜಾ ಕ್ಯಾಚ್ ಬಿಟ್ಟಿದ್ದಕ್ಕೆ ಪತ್ನಿ ರಿವಾಬಾ ರಿಯಾಕ್ಷನ್‌ ಹೇಗಿತ್ತು ಗೊತ್ತಾ..? ವಿಡಿಯೋ ನೋಡಿ

ಜಿಂಕೆಯಂತೆ ಹಾರಿ ಕ್ಯಾಚ್ ಪಡೆದ ಅಯ್ಯರ್:

ಈ ಪಂದ್ಯದ 4ನೇ ಓವರ್‌’ನಲ್ಲಿ ಮೊಹಮ್ಮದ್ ಸಿರಾಜ್ ಎಸೆತವನ್ನು ಕಾನ್ವೇ ಲೆಗ್ ಸೈಡ್‌’ಗೆ ಹೊಡೆದರು. ಈ ವೇಳೆ ಚೆಂಡಿಗಾಗಿ ಕಾಯುತ್ತಿದ್ದ ಅಯ್ಯರ್‌, ಜಿಂಕೆಯಂತೆ ಹಾರಿ ಕ್ಯಾಚ್‌ ಹಿಡಿದರು. ವಿಕೆಟ್‌ ಪಡೆದ ತಕ್ಷಣ ಸಂಭ್ರಮಿಸಿದ ಅಯ್ಯರ್‌, ಈ ಬಾರಿ ತಮಗೆ ಪಂದ್ಯದ ಫೀಲ್ಡರ್ ಪದಕವನ್ನು ನೀಡುವಂತೆ ಡ್ರೆಸ್ಸಿಂಗ್ ಕೋಣೆಯತ್ತ ಸನ್ನೆ ಮಾಡಿ ತೋರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News