ರೋಹಿತ್ ಶರ್ಮಾಗೆ ಸ್ವಿಂಗ್, ಶುಭ್ಮನ್ ಗಿಲ್ ಗೆ ಇನ್ ಡೀಪರ್.. ಕೊಹ್ಲಿಗೆ ಲೆಫ್ಟ್ ಆರ್ಮ್ ಸ್ಪಿನ್...ಕಿವೀಸ್ ಗೇಮ್ ಪ್ಲಾನ್ ಬಹಿರಂಗ!

ICC World Cup 2023: ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯ ನಾಳೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ಮುಖಾಮುಖಿಯಾಗಲಿವೆ. ಪಂದ್ಯದ ಮೊದಲು, ಎರಡೂ ತಂಡಗಳು ಪರಸ್ಪರರ ಆಟದ ಯೋಜನೆಯಲ್ಲಿ ತೊಡಗಿರುವುದು  ಇಲ್ಲಿ ಗಮನಾರ್ಹ ಸಂಗತಿ.  ಇವೆಲ್ಲವುಗಳ ನಡುವೆ ಭಾರತದ ವಿರುದ್ಧ ಕಿವೀಸ್ ತಂಡ ಯಾವ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತದೆ ಎಂಬುದನ್ನೂ ತಿಳಿದುಕೊಳ್ಳುವುದು ತುಂಬಾ ಮುಖ್ಯ. ರೋಹಿತ್, ವಿರಾಟ್, ಶುಭಮನ್ ಮತ್ತು ಸೂರ್ಯಕುಮಾರ್ ಬಗ್ಗೆ ಕಿವೀಸ್ ತಂಡದ ತಂತ್ರಗಾರಿಕೆ ಏನು ತಿಳಿದುಕೊಳ್ಳೋಣ ಬನ್ನಿ. (ICC World Cup 2023 News In Kannada)

Written by - Nitin Tabib | Last Updated : Nov 14, 2023, 09:44 PM IST
  • ನ್ಯೂಜಿಲೆಂಡ್‌ನ ಸಂಭಾವ್ಯ ತಂತ್ರಗಳಿಗೆ ಸಂಬಂಧಿಸಿದಂತೆ, ಕಿವೀ ತಂಡವು ಭಾರತದೊಂದಿಗೆ ಹೇಗೆ ಸ್ಪರ್ಧಿಸಬಹುದು ಮತ್ತು
  • ಪ್ರತಿಯೊಬ್ಬ ಭಾರತೀಯ ತಂಡದ ಆಟಗಾರನಿಗೆ ಹೇಗೆ ಯೋಜನೆ ಮಾಡಿರಬಹುದು ಎಂಬುದರ ಕುರಿತು ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
  • ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳ ತಂತ್ರ ಮತ್ತು ಆಟದ ಶೈಲಿಯ ವಿರುದ್ಧ ಕಿವೀ ತಂಡದ ಸಂಭಾವ್ಯ ತಂತ್ರವನ್ನು ತಿಳಿದುಕೊಳ್ಳೋಣ ಬನ್ನಿ,
ರೋಹಿತ್ ಶರ್ಮಾಗೆ ಸ್ವಿಂಗ್, ಶುಭ್ಮನ್ ಗಿಲ್ ಗೆ ಇನ್ ಡೀಪರ್.. ಕೊಹ್ಲಿಗೆ ಲೆಫ್ಟ್ ಆರ್ಮ್ ಸ್ಪಿನ್...ಕಿವೀಸ್ ಗೇಮ್ ಪ್ಲಾನ್ ಬಹಿರಂಗ! title=

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಲು ಸನ್ನದ್ಧವಾಗಿದೆ. 2023ರ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಬುಧವಾರ ನಡೆಯಲಿದೆ. ಈ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಎರಡೂ ತಂಡಗಳು ಪರಸ್ಪರರ ಆಟದ ಯೋಜನೆ ಮೇಲೆ ಕಣ್ಣಿಟ್ಟಿವೆ. ಭಾರತೀಯ ಬ್ಯಾಟಿಂಗ್ ಲೈನ್ ಅಪ್ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ನಿಜ, ಆದರೆ ನ್ಯೂಜಿಲೆಂಡ್ ತನ್ನ ಹೋಮ್ ವರ್ಕ್ ಹೇಗೆ ಮಾಡಬೇಕೆಂದು ತಿಳಿದಿರುವ ಮತ್ತು ಯಾವುದೇ ಎದುರಾಳಿ ಸವಾಲನ್ನು ಹೇಗೆ ವಿಫಲಗೊಳಿಸಬೇಕು ಎಂಬುದರ ಸಾಮರ್ಥ್ಯವನ್ನು ಹೊಂದಿರುವ ತಂಡವಾಗಿದೆ. ನ್ಯೂಜಿಲೆಂಡ್‌ನ ಸಂಭಾವ್ಯ ತಂತ್ರಗಳಿಗೆ ಸಂಬಂಧಿಸಿದಂತೆ, ಕಿವೀ ತಂಡವು ಭಾರತದೊಂದಿಗೆ ಹೇಗೆ ಸ್ಪರ್ಧಿಸಬಹುದು ಮತ್ತು ಪ್ರತಿಯೊಬ್ಬ ಭಾರತೀಯ ತಂಡದ ಆಟಗಾರನಿಗೆ ಹೇಗೆ ಯೋಜನೆ ಮಾಡಿರಬಹುದು ಎಂಬುದರ ಕುರಿತು ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳ ತಂತ್ರ ಮತ್ತು ಆಟದ ಶೈಲಿಯ ವಿರುದ್ಧ ಕಿವೀ ತಂಡದ ಸಂಭಾವ್ಯ ತಂತ್ರವನ್ನು ತಿಳಿದುಕೊಳ್ಳೋಣ ಬನ್ನಿ,

ವಿರಾಟ್ ಕೊಹ್ಲಿಗಾಗಿ ಯಾವ ಪ್ಲಾನ್?
ಎಡಗೈ ಸ್ಪಿನ್ನರ್ ಸ್ಯಾಂಟ್ನರ್ ಕೊಹ್ಲಿಗೆ ತೊಂದರೆ ನೀಡುವ ಸಾಧ್ಯತೆ ಇದೆ. ಸ್ಯಾಂಟ್ನರ್ ಅವರು ಭಾರತದ ವಿರುದ್ಧ ಆಡುವಾಗ ಅವರ ಕೊನೆಯ ಎರಡು ಪ್ರದರ್ಶನಗಳ ಬಗ್ಗೆ ಮಾತನಾಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ಈ ವಿಶ್ವಕಪ್‌ನಲ್ಲಿ ಧರ್ಮಶಾಲಾದಲ್ಲಿ ಮತ್ತು ಅದಕ್ಕೂ ಮೊದಲು 2019 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಮುಖಾಮುಖಿಯಾಗಿದ್ದವು. ನಂತರ ಸ್ಯಾಂಟ್ನರ್ ಅಂಕಿಅಂಶಗಳು 10-2-34-2 ಮತ್ತು ಧರ್ಮಶಾಲಾದಲ್ಲಿ ಅಂಕಿಅಂಶಗಳು 10-0-37-1. ಈಗಾಗಲೇ ಟ್ರೆಂಟ್ ಬೌಲ್ಟ್ ಅವರಂತಹ ವಿಶ್ವ ದರ್ಜೆಯ ವೇಗದ ಬೌಲರ್‌ಗಳನ್ನು ಹೊಂದಿರುವ ತಂಡದಲ್ಲಿ, ಬ್ಯಾಟ್ಸ್‌ಮನ್‌ಗಳನ್ನು ಈ ಸ್ಥಿರತೆಯಿಂದ ಬಂಧಿಸುವುದು ಅಸಾಮಾನ್ಯವಾಗಿದೆ. ಆದ್ದರಿಂದ, ಪವರ್ ಪ್ಲೇ ಮುಗಿದ ನಂತರ, ಕೇನ್ ವಿಲಿಯಮ್ಸನ್ ಕೊಹ್ಲಿಯ ಎದುರು ಚೆಂಡನ್ನು ಸ್ಯಾಂಟ್ನರ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ.

ಶ್ರೇಯಸ್ ಅಯ್ಯರ್ ಗಾಗಿ ಯೋಜನೆ ಏನು?
ಲೋಕಿ ಫರ್ಗುಸನ್ ಹೆಚ್ಚಿನ ಬೌನ್ಸರ್‌ಗಳೊಂದಿಗೆ ದಾಳಿ ಇಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದರಿಂದ ಮಧ್ಯಮ ಓವರ್‌ಗಳಲ್ಲಿ ಮತ್ತೊಂದು ಟಫ್ ಮುಖಾಮುಖಿ ನಡೆಯಲಿದೆ. ಈ ಸಮಯದಲ್ಲಿ, ನ್ಯೂಜಿಲೆಂಡ್‌ನ ತಂತ್ರವು ಅಯ್ಯರ್ ಅವರನ್ನು ಶಾರ್ಟ್ ಬಾಲ್‌ಗಳಿಂದ ಪರೀಕ್ಷಿಸುವುದಾಗಿರಬಹುದು. ಈ ಯೋಜನೆಗೆ ತಂಡದ ಬಳಿ ಇರುವ ಪ್ರಮುಖ ಅಸ್ತ್ರ ಫರ್ಗುಸನ್. ಅದನ್ನು ನಾಯಕ ಈ ಮೊದಲು ಕೂಡ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಮಿಡ್-ಆನ್ ಮತ್ತು ಮಿಡ್-ಆಫ್ ಎರಡನ್ನೂ ಹಿಂದಕ್ಕೆ ತಳ್ಳಿದ ಸ್ಪೆಲ್ ಅನ್ನು ಅವರು ಅಪರೂಪದ ಬೌಲಿಂಗ್ ಮಾಡಿದ್ದಾರೆ. ಆದರೆ, ಶ್ರೇಯಸ್ ಇದೀಗ ಈ ವಿಶ್ವಕಪ್ ನಲ್ಲಿ ತಮ್ಮ ತಂತ್ರವನ್ನು ಬದಲಾಯಿಸಿದ್ದಾರೆ ಮತ್ತು ಈಗ ಸ್ಮಾಲ್ ಡಿಲೆವರಿ ಗಳನ್ನು ಕೂಡ ಸರಿಯಾಗಿ ನಿಭಾಯಿಸುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ವಿರುದ್ಧ ತಂತ್ರ ಏನು?
ಎಡಗೈ ಆಟಗಾರ ಟ್ರೆಂಟ್ ಬೌಲ್ಟ್ ಫುಲ್ ಲೆಂಥ್ ಬಾಲ್ ಮತ್ತು ಪ್ಯಾಡ್‌ಗಳನ್ನು ಗುರಿಯಾಗಿಸುತ್ತಾರೆ ಎಂಬುದು ಕಿವೀ ತಂಡದ ಯೋಜನೆಯಾಗಿದೆ. ಇನ್-ಡಿಪ್ಪರ್‌ಗಳ ಮೂಲಕ ಅವರು ಸೂರ್ಯಕುಮಾರ್ ಯಾದವ್‌ನ ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದರಲ್ಲಿ ಫುಲ್ ಲೆಂಥ್ ಮತ್ತು ಪ್ಯಾಡ್‌ಗಳನ್ನು ಗುರಿಯಾಗಿಸುವುದು ಕೂಡ ಒಳಗೊಂಡಿರಲಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವರ್ಷದ ಆರಂಭದಲ್ಲಿ ಈ ತಂತ್ರದಿಂದ ಲಾಭವನ್ನು ಪಡೆದಿದ್ದಾರೆ. ಕಿವೀಸ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅದೇ ತಂತ್ರವನ್ನು ಅಳವಡಿಸಿಕೊಳ್ಳಬಹುದು.

ಶುಭಮನ್ ಗಿಲ್ ವಿರುದ್ಧ ಯೋಜನೆ ಏನು? 
ವೇಗದ ಬೌಲರ್‌ಗಳು ಗಿಲ್ಲ್ ಅವರನ್ನು ಫುಲ್ ಲೆಂಗ್ತ್ ಬಾಲ್‌ಗಳಿಂದ ಗುರಿಯಾಗಿಸಬಹುದು. ಇದು ಗಿಲ್ ಹಳೆಯ ಸಮಸ್ಯೆಯಾಗಿದ್ದು, ನ್ಯೂಜಿಲೆಂಡ್ ಈ ಮೊದಲು ಕೂಡ ಅದರ ಲಾಭ ಪಡೆದಿದೆ. ಫುಲ್ ಲೆಂತ್ ಮೇಲೆ ಬಿದ್ದು ಒಳ ಬರುವ ಚೆಂಡುಗಳು ತೊಂದರೆಗೆ ಕಾರಣವಾಗುತ್ತವೆ. ಶುಭ್‌ಮಾನ್ ಗಿಲ್ ಸಾಮಾನ್ಯವಾಗಿ ಮುಂದಕ್ಕೆ ಬಾಗುವುದರಲ್ಲಿ ಸ್ವಲ್ಪ ವಿಳಂಬ ಮಾಡುತ್ತಾರೆ ಮತ್ತು ಅವರ ತೂಕವನ್ನು ಮುಂದಕ್ಕೆ ಬದಲಾಯಿಸುವ ಮೂಲಕ ನಿಧಾನವಾಗುತ್ತಾರೆ. ಇದರ ನಂತರ, ಬ್ಯಾಟ್ ಮತ್ತು ಪ್ಯಾಡ್ ನಡುವೆ ಅಂತರವು ಕಾಣಿಸಿಕೊಳ್ಳುತ್ತದೆ ಮತ್ತು ಚೆಂಡು ಸ್ಟಂಪ್ ಕಡೆಗೆ ಚಲಿಸುತ್ತದೆ. ಅದೇ ರೀತಿ ಜೇಮ್ಸ್ ಆಂಡರ್ಸನ್ ಮತ್ತು ಕಗಿಸೊ ರಬಾಡ ಅವರಂತಹ ವೇಗದ ಬೌಲರ್‌ಗಳು ಗಿಲ್‌ಗೆ ಈ ಮೊದಲು ತೊಂದರೆ ಕೊಟ್ಟಿರುವುದು ಇಲ್ಲಿ ಗಮನಾರ್ಹ.

ರವೀಂದ್ರ ಜಡೇಜಾ ವಿರುದ್ಧ ಏನು ಪ್ಲಾನ್?
ಬಾಡಿಲೈನ್ ಸ್ಮಾಲ್ ಲೆಂಥ್ ಡಿಲೆವರಿ.  ಈ ತಂತ್ರದಿಂದ ನ್ಯೂಜಿಲೆಂಡ್ ಬೌಲರ್‌ಗಳು ಜಡೇಜಾಗೆ ತೊಂದರೆ ನೀಡಬಹುದು. ಜಡೇಜಾ ಕೆಲವೊಮ್ಮೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ವಿಶೇಷವೆಂದರೆ 2019ರ ಸೆಮಿಫೈನಲ್‌ನಲ್ಲೂ ನ್ಯೂಜಿಲೆಂಡ್ ಇದನ್ನು ಪ್ರಯತ್ನಿಸಿತ್ತು. ಫರ್ಗುಸನ್ ಮತ್ತು ಮ್ಯಾಟ್ ಹೆನ್ರಿ ಕೂಡ ಈ ವಿಶ್ವಕಪ್‌ನಲ್ಲಿ ಇದನ್ನು ಪ್ರಯತ್ನಿಸಿದಾರೆ, ಆದರೆ ಜಡೇಜಾ ಅದನ್ನು ಎರಡು ಬಾರಿ ಫೈನ್-ಲೆಗ್‌ಗೆ ಆಡಿದ್ದಾರೆ.

ಇದನ್ನೂ ಓದಿ-ಜಯ್ ಷಾ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾರೆ, ಜಯ್ ಷಾ ವಿರುದ್ಧ ರಣತುಂಗ ಆರೋಪ!

ರೋಹಿತ್ ಶರ್ಮಾ ವಿರುದ್ಧ ಯೋಜನೆ ಏನು?
ಇನ್ನಿಂಗ್ಸ್‌ನ ಆರಂಭದಲ್ಲಿ ಎರಡೂ ಕಡೆಯಿಂದ ಸ್ವಿಂಗ್ ಮಾಡುವ ಯೋಜಿಸಿ. ರೋಹಿತ್ ಶರ್ಮಾ ಅವರನ್ನು ಬೇಗನೆ ಔಟ್ ಮಾಡುವುದು ಉತ್ತಮ ಮಾರ್ಗ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಶ್ವಕಪ್‌ನಲ್ಲಿ ಇದುವರೆಗೆ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮಾತ್ರ ಈ ಸಾಧನೆ ಮಾಡಿದೆ. ಒಮ್ಮೆ ಜೋಶ್ ಹ್ಯಾಜಲ್‌ವುಡ್ ಮತ್ತು ಎರಡನೇ ಬಾರಿ ಮಧುಶಂಕ ಇದನ್ನು ಆಫ್-ಕಟರ್ ಮೂಲಕ ಮಾಡಿದ್ದಾರೆ. ರೋಹಿತ್ ವಿರುದ್ಧ ಇದು ಪರಿಣಾಮಕಾರಿಯಾದ ಏಕೈಕ ತಂತ್ರಗಾರಿಕೆಯಾಗಿದೆ.  ಇಲ್ಲದಿದ್ದರೆ ರೋಹಿತ್ ಅವರ ಬ್ಯಾಟ್ ನಿಲ್ಲುವ ಮಾತೆ ಎತ್ತುವುದಿಲ್ಲ.

ಇದನ್ನೂ ಓದಿ-'ಒಂದು ವೇಳೆ ನಾನು ಐಶ್ವರ್ಯಾ ರೈ ಜೊತೆ ವಿವಾಹ ಮಾಡಿಕೊಂಡು...' ಉದ್ಧಟತನ ಮೆರೆದ ಪಾಕ್ ಕ್ರಿಕೇಟಿಗ!

ಕೆಎಲ್ ರಾಹುಲ್ ವಿರುದ್ಧ ಯಾವ ಯೋಜನೆ?
ಆಫ್-ಸ್ಟಂಪ್ ಸುತ್ತಲೂ ವೇಗದ ಬೌಲಿಂಗ್. ಲೆಗ್ ಸೈಡ್‌ನಲ್ಲಿ ಡೆಡ್ಲಿ ಮತ್ತು ಆಫ್‌ನಲ್ಲಿ ಸಹಜ ಬೌಲಿಂಗ್, ಕೆಎಲ್ ರಾಹುಲ್ ಅವರನ್ನು ಔಟ್ ಮಾಡಲು ಇದು ಅತ್ಯಂತ ಸಂಭವನೀಯ ಮಾರ್ಗವಾಗಿದೆ. ಏಕೆಂದರೆ ರಾಹುಲ್ ಬಳಿ  ಆಫ್-ಸೈಡ್ ಸ್ಟ್ರೋಕ್‌ಗಳ ದೊಡ್ಡ ಸರಣಿಯೇ ಇದೆ. ಉತ್ತಮ ಗುಣಮಟ್ಟದ ಚೆಂಡುಗಳ ಮೇಲೆ ಡ್ರೈವ್, ಕಟ್, ಟ್ಯಾಪ್ ಮತ್ತು ಗ್ಲೈಡ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಓರ್ವ ಬೌಲರ್ ನ ಮೂವ್ಮೆಂಟ್ ವೇಗವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ರಾಹುಲ್ ಹೊಂದಿದ್ದಾರೆ. ಇನ್ನೊಂದೆಡೆ ರಾಹುಲ್ ಅವರ ಬತ್ತಳಿಕೆಯ ಈ ಅಸ್ತ್ರಗಳನ್ನು ವೇಗವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಬೌಲರ್ ರಾಹುಲ ಅವರನ್ನು ಔಟ್ ಮಾಡಬಹುದು. ಸೌವುದಿ ಈ ರೀತಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಅವರ ಕಡಿಮೆ ವೇಗ ಸೌವುದಿಗೆ ತಲೆನೋವಾಗಿದೆ ಎಂಬುದು ಇಲ್ಲಿ ಗಮನಾರ್ಹ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News