ಬಾಂಗ್ಲಾ ವಿರುದ್ದ ರೋಹಿತ್ ಜೊತೆ ಓಪನಿಂಗ್ ಮಾಡುವವರು ಇವರೇ ! ಈ ಬ್ಯಾಟ್ಸ್ ಮ್ಯಾನ್ ತಂಡದಿಂದ ಔಟ್

IND vs BAN, Playing 11 :ಪ್ರಸಕ್ತ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ಯಾವುದೇ ಪಂದ್ಯವನ್ನು ಸೋತಿಲ್ಲ. ಆದರೆ ಬಾಂಗ್ಲಾದೇಶ ತನ್ನ ಕೊನೆಯ 2 ಪಂದ್ಯಗಳಲ್ಲಿ ಸೋಲನುಭವಿಸಿದೆ.   

Written by - Ranjitha R K | Last Updated : Oct 18, 2023, 11:57 AM IST
  • ನಾಳೆ ಬಾಂಗ್ಲಾದೇಶ ವಿರುದ್ಧ ಭಾರತ ಕಾದಾಟ
  • ಇದುವರೆಗಿನ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಭಾರತ
  • ಬಾಂಗ್ಲಾದೇಶಕ್ಕೆ ಕೊನೆಯ 2 ಪಂದ್ಯಗಳಲ್ಲಿ ಸೋಲು
ಬಾಂಗ್ಲಾ ವಿರುದ್ದ ರೋಹಿತ್ ಜೊತೆ  ಓಪನಿಂಗ್ ಮಾಡುವವರು ಇವರೇ ! ಈ ಬ್ಯಾಟ್ಸ್ ಮ್ಯಾನ್ ತಂಡದಿಂದ ಔಟ್  title=

IND vs BAN, Playing 11 : ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ಭಾರತ ತಂಡವು ODI ವಿಶ್ವಕಪ್-2023 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ನಾಳೆ ಅಂದರೆ ಅಕ್ಟೋಬರ್ 19 ರಂದು  ಬಾಂಗ್ಲಾದೇಶ ವಿರುದ್ಧ ಭಾರತ ಸೆಣೆಸಲಿದೆ. ಈ ಪಂದ್ಯ ಪುಣೆಯಲ್ಲಿ ನಡೆಯಲಿದೆ.  ಪ್ರಸಕ್ತ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ಯಾವುದೇ ಪಂದ್ಯವನ್ನು ಸೋತಿಲ್ಲ. ಆದರೆ ಬಾಂಗ್ಲಾದೇಶ ತನ್ನ ಕೊನೆಯ 2 ಪಂದ್ಯಗಳಲ್ಲಿ ಸೋಲನುಭವಿಸಿದೆ. 

ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು : 
ಏಕದಿನ ವಿಶ್ವಕಪ್-2023ರಲ್ಲಿ ಭಾರತ ಕ್ರಿಕೆಟ್ ತಂಡ ಇದುವರೆಗೆ ತನ್ನ ಯಾವುದೇ ಪಂದ್ಯಗಳನ್ನು  ಸೋತಿಲ್ಲ. ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಗೆಲುವಿನೊಂದಿಗೆಯೇ ವಿಶ್ವ ಕಪ್ ಯಾನವನ್ನು ಆರಂಭಿಸಿದೆ ಟೀಂ ಇಂಡಿಯಾ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಾದ ಬಳಿಕ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಮೂರನೇಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.  ಇನ್ನು  ಬಾಂಗ್ಲಾದೇಶ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿತ್ತು. ಆದರೆ ನಂತರ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ಎದುರು ಸೋಲು ಅನುಭವಿಸಬೇಕಾಯಿತು. .

ಇದನ್ನೂ ಓದಿ : South Africa vs Netherlands: ಹರಿಣಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ನೆದರ್ಲ್ಯಾಂಡ್ಸ್

ರೋಹಿತ್ ಜೊತೆ ಓಪನಿಂಗ್ ಮಾಡುವವರು ಯಾರು? : 
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಜೊತೆ ಓಪನಿಂಗ್ ಮಾಡುವವರು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ರೋಹಿತ್ ಜೊತೆಗೆ ಶುಭಮನ್ ಗಿಲ್ ಓಪನಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯಕ್ಕೆ ಇಶಾನ್ ಕಿಶನ್ ತಂಡದಿಂದ ಹೊರಗಿರಬೇಕಾಗುತ್ತದೆ. ಡೆಂಗ್ಯೂನಿಂದ ಗಿಲ್ ಅಲಭ್ಯವಾಗಿದ್ದಾಗ ಮೊದಲೆರಡು ಪಂದ್ಯಗಳಲ್ಲಿ ಇಶಾನ್‌ಗೆ ಅವಕಾಶ ನೀಡಲಾಯಿತು. ಇದೀಗ ಗಿಲ್  ಫಿಟ್ ಆಗಿದ್ದು, ಬಾಂಗ್ಲಾ ವಿರುದ್ದ ಕೂಡಾ ರೋಹಿತ್ ಜೊತೆ ಮೈದಾನಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ.

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಸಂಭಾವ್ಯ  ಪೇಯಿಂಗ್ 11 : 
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : ಬೌಂಡರಿ ಲೈನ್’ನಲ್ಲಿ ಎಸಗಿದ ಈ ಕೃತ್ಯಕ್ಕೆ ಐಸಿಸಿಯಿಂದ ದಂಡನೆ! ಸ್ಟಾರ್ ಆಟಗಾರನಿಗೆ ವಿಶ್ವಕಪ್ ಮಧ್ಯೆ ಮುಖಭಂಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News